ಬೆಳ್ಳುಳ್ಳಿ ಅಡುಗೆಮನೆಯಲ್ಲಿ ಮಾತ್ರವಲ್ಲದೆ ಮಲಗುವ ಕೋಣೆಯಲ್ಲಿಯೂ ಬಳಸಿಕೊಳ್ಳಿ. ನೀವು ಪ್ರತಿ ದಿನ ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗಡೆ ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಕೊಂಡು ಮಲಗಿ. ಇದರಿಂದಾಗಿ ಆರೋಗ್ಯ ಪ್ರಯೋಜನಗಳು ಇಲ್ಲಿವೆ.
ಹಿಂದಿನ ಕಾಲದಲ್ಲಿ ಬೆಳ್ಳುಳ್ಳಿಯ ಎರಡು ಮೂರು ಎಸಳುಗಳನ್ನು ದಿಂಬಿನ ಕೆಳಗಡೆ ಇಟ್ಟು ಮಲಗುತ್ತಿದ್ದರು. ಇದರಿಂದಾಗಿ ನೀವು ಮಲಗಿದಂತಹ ಸಮಯದಲ್ಲಿ ಕ್ರಿಮಿ ಕೀಟಗಳು ನಿಮ್ಮ ಹತ್ತಿರ ಬರದಿರಲಿ ಎಂದು, ಅಂದರೆ ಬೆಳ್ಳುಳ್ಳಿಯ ವಾಸನೆಯಿಂದ ಕ್ರಿಮಿ ಕೀಟಗಳನ್ನು ತಡೆಯುವ ಶಕ್ತಿಯಿದೆ ಎಂದು ಹಿರಿಯರು ಹೇಳುತ್ತಿದ್ದರು. ಇದರ ಜೊತೆಗೆ ಬೆಳ್ಳುಳ್ಳಿಗೆ ಕೆಟ್ಟ ಶಕ್ತಿಯನ್ನು ತಡೆಯುವ ಶಕ್ತಿ ಇದೆ.
ಇದರಿಂದಾಗಿ ಕೆಟ್ಟ ಶಕ್ತಿ ನಿಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ ಎಂದು ನಂಬಿಕೆ ಇದೆ. ಇಂದಿನ ಬದಲಾದ ಜೀವನಶೈಲಿಯಿಂದಾಗಿ ಜನರು ಹಿಂದಿನ ನಂಬಿಕೆಗಳನ್ನು ಮೂಡನಂಬಿಕೆ ಎಂದು ಹೇಳುವುದು ಕಾಣಬಹುದು. ಆದರೆ ಹಿರಿಯರು ಪಾಲಿಸಿಕೊಂಡು ಬಂದ ಪ್ರತಿಯೊಂದು ನಂಬಿಕೆಯಲ್ಲಿಯೂ ಅದರದೇ ಆದ ವೈಜ್ಞಾನಿಕ ಕಾರಣಗಳಿವೆ.
ನಿಮ್ಮ ದಿಂಬಿನ ಕೆಳಗೆ ಬೆಳ್ಳುಳ್ಳಿಯನ್ನು ಇಟ್ಟುಕೊಂಡು ನೀವು ಅದ್ಬುತ ಪ್ರಯೋಜನವನ್ನು ಪಡೆಯಬಹುದಾಗಿದೆ. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಇದು ನಿಮ್ಮ ನಿದ್ರಾಹೀನತೆಗೆ ಉತ್ತಮ ಔಷಧಿಯಾಗಿದೆ. ಬೆಳ್ಳುಳ್ಳಿಯಲ್ಲಿರುವ ಸಲ್ಫರಸ್ ಅಂಶವು ನೀವು ಶಾಂತವಾಗಿ ಮಲಗಲು ಸಹಾಯಮಾಡುತ್ತದೆ.
ಇದರ ಜೊತೆಗೆ ಬೆಳ್ಳುಳ್ಳಿಯ ರಸವನ್ನು ಸೇವಿಸುವುದರಿಂದ ನಿಮಗೆ ಯಾವುದೇ ಹೊಟ್ಟೆ ನೋವಿನ ಸಮಸ್ಯೆಯಿದ್ದರೂ ಪರಿಹಾರವನ್ನು ಕಂಡುಕೊಳ್ಳಬಹುದು. ಬೆಳ್ಳುಳ್ಳಿ ಎಸಳನ್ನು ರುಬ್ಬಿ, ಸ್ವಲ್ಪ ಬೆಚ್ಚಗಿನ ಹಾಲು ಮತ್ತು ಜೇನುತುಪ್ಪದೊಂದಿಗೆ ಸೇವಿಸಿ. ನಿಮಗೆ ನಿದ್ರೆ ಬರಲು ಕಷ್ಟವಾದಾಗ ನೀವು ಬೆಳ್ಳುಳ್ಳಿಯನ್ನು ಸಹ ಪ್ರಯತ್ನಿಸಬಹುದು. ಆದ್ದರಿಂದ ಬೆಳ್ಳುಳ್ಳಿಯಿಂದ ನಿಮ್ಮ ದೇಹದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.