ನಿರ್ದೇಶಕ ತರುಣ್ ಸುಧೀರ್ ಇದೀಗ ಸೋನಲ್ ಜೊತೆಗಿನ ಮದುವೆ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಈಗ ಮೊದಲ ಬಾರಿಗೆ ಮದುವೆಯಾಗಲಿರುವ ಹುಡುಗಿ ಕ್ವಾಲಿಟಿ ಹೇಗಿರಬೇಕು ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತರುಣ್ ಸುಧೀರ್ ಭಾಗಿಯಾದಾಗ ಮದುವೆ ಹುಡುಗಿ ಹೇಗಿರಬೇಕು ಎಂದು ಪ್ರಶ್ನೆ ಎದುರಾಗಿದೆ.
ಆಗ ತಾವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಹೇಳಿದ್ದಾರೆ. ನನಗೆ ಮದುವೆ ಆಗಬಾರದು ಅಂತೇನೂ ಇಲ್ಲ. ಇದರ ಕುರಿತು ಡಿಸಿಷನ್ ನಾನು ಮಾಡಿಲ್ಲ ಎನ್ನುತ್ತಲೇ ನಾನು ಇಷ್ಟಪಟ್ಟಂಥ ಹುಡುಗಿ ಸಿಕ್ಕಿರೆ ಖಂಡಿತವಾಗಿಯೂ ಮದುವೆಗೆ ರೆಡಿ ಎಂದಿದ್ದಾರೆ. ಕನಸಿನ ಹುಡುಗಿಯಲ್ಲಿ ಎರಡೇ ಕ್ವಾಲಿಟಿ ಇದ್ದರೆ ಸಾಕು. ಮೊದಲನೆಯದ್ದು ತಮ್ಮ ಕೆಲಸವನ್ನು ಗೌರವಿಸಬೇಕು.
ಇನ್ನೊಂದು ನನಗೆ ಅಮ್ಮನೇ ಎಲ್ಲ. ಆದ್ದರಿಂದ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟು ಇದ್ದರೆ ಸಾಕು. ಅಂಥ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ. ಬೇಕಿದ್ದರೆ ನಾಲ್ಕು ಗೋಡೆಗಳ ನಡುವೆ ಕಾಲು ಹಿಡಿದುಕೊಳ್ಳಲೂ ರೆಡಿ ಎಂದು ತಮಾಷೆ ಮಾಡಿದ್ದಾರೆ ತರುಣ್ ಸುಧೀರ್. ಆದರೆ ಎಲ್ಲೂ ಸೋನಾಲ್ ಹೆಸರು ಬಳಸದೇ ಮಾತನಾಡಿದ್ದಾರೆ.