ಟೀಂ ಇಂಡಿಯಾದ ಖ್ಯಾತ ಬೌಲರ್ ಯುಜವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಅವರನ್ನು ಕ್ರಿಕೆಟ್ ಲೋಕದಲ್ಲಿ ಕ್ಯೂಟ್ ಜೋಡಿ ಎಂದು ಕರೆಯಲಾಗುತ್ತದೆ. ಚಹಾಲ್ ಮತ್ತು ಧನಶ್ರೀ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಪೋಟೋಗಳನ್ನು ಹಾಕುವ ಮೂಲಕ ಇವರಿಬ್ಬರೂ ಎಂದಿಗೂ ಸಂತಸದಿಂದ ಇರುತ್ತಿದ್ದರು. ಆದರೆ ಇದೀಗ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿದೆ. ಹೌದು ಯುಜವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ಶೀಘ್ರವೇ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಆಪ್ತ ಮೂಲಗಳ ಪ್ರಕಾರ ಇಬ್ಬರು ಪ್ರತ್ಯೇಕವಾಗುವುದು ನಿಜ. ವಿಚ್ಛೇದನ ಪ್ರಕ್ರಿಯೆಗಳು ಇನ್ನೂ ಅಂತಿಮಗೊಂಡಿಲ್ಲ. ಎಲ್ಲಾ ಷರತ್ತುಗಳು ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನೂ ವದಂತಿ ಬಗ್ಗೆ ಧನಶ್ರೀ ಮೌನ ಮುರಿದಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಧನಶ್ರೀ ವಂದತಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇನ್ಮುಂದೆ Accident ಆದ್ರೆ ತಲೆ ಬಿಸಿ ಮಾಡ್ಕೊಬೇಡಿ..! ಮೋದಿ ಸರ್ಕಾರವೇ ಭರಿಸಲಿದೆ ಚಿಕಿತ್ಸಾ ವೆಚ್ಚ..!
ನಾನು, ನನ್ನ ಕುಟುಂಬದ ಸದಸ್ಯರು ಕಳೆದ ಕೆಲ ದಿನಗಳಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕೆಲವರು ಸತ್ಯ ತಿಳಿಯದೇ ಸುಳ್ಳು ಸುಳ್ಳನ್ನೇ ಬರೆಯುತ್ತಿದ್ದಾರೆ. ನನ್ನ ಖ್ಯಾತಿಗೆ ಕಳಂಕ ತರಲು ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷ ಹರಡುವ ಟ್ರೋಲ್ಗಳನ್ನು ಮಾಡುತ್ತಿದ್ದಾರೆ. ಹಲವು ವರ್ಷಗಳ ಕಾಲ ಶ್ರಮಿಸಿದ ನಂತರವೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಮೌನವಾಗಿದ್ದ ಮಾತ್ರಕ್ಕೆ, ಅದು ನನ್ನ ದೌರ್ಬಲ್ಯ ಎಂದು ಭಾವಿಸಬೇಡಿ ಎಂದಿದ್ದಾರೆ.
ಮುಂದುವರಿದು… ಇತರರಿಗೆ ಸಹಾನುಭೂತಿ ತೋರಿಸಲು ಧೈರ್ಯ ಬೇಕು. ನೈಜ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮೌಲ್ಯಗಳೊಂದಿಗೆ ಮುಂದುವರಿಯುವುದರಲ್ಲಿ ನಾನು ನಂಬಿಕೆ ಇಡುತ್ತೇನೆ. ಇಲ್ಲಿ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಸಾಕ್ಷ್ಯಗಳಿಲ್ಲಿದ್ರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾಯ ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಧನಶ್ರೀ ಅವರ ಈ ಪೋಸ್ಟ್ ಬಳಿಕ ಇನ್ನಷ್ಟು ಚರ್ಚೆಗಳು ಹುಟ್ಟಿಕೊಂಡಿವೆ.