ಕಿಡ್ನಿ ಕಾಯಿಲೆ ಸಾಮಾಜಿಕ ಆರ್ಥಿಕ ವರ್ಗಗಳ ಜನರ ಮೇಲೆ ಪರಿಣಾಮ ಬೀರುತ್ತದೆ, ಆದರೆ ಆರ್ಥಿಕವಾಗಿ ಹಿಂದುಳಿದಿರುವ ಕೆಳ ಮಟ್ಟದ ಮತ್ತು ಮಧ್ಯಮ-ಆದಾಯದ ದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ದೀರ್ಘ ಸಮಯದ ಕಿಡ್ನಿ ಸಮಸ್ಯೆಗೆ ಕಾರಣವೇನು?
ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಮತ್ತು ಇತರ ಕಾರ್ಡಿಯೋ ವಾಸ್ಕ್ಯುಲರ್ ಕಾಯಿಲೆ (CVD) ಗಳಂತಹ ಅಪಾಯಕಾರಿ ಅಂಶಗಳ ಹೆಚ್ಚಾಗುತ್ತಿರುವ ಸಂಖ್ಯೆಯು CKD ಯ ಜಾಗತಿಕ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ. ಇದಲ್ಲದೆ, CKD ರೋಗಿಗಳಲ್ಲಿ ಕೋ-ಮಾರ್ಬಿಡ್ ಆಗಿರುವ ಅಧಿಕ ರಕ್ತದೊತ್ತಡ ಅಥವಾ ಮಧುಮೇಹವು ಮುನ್ನರಿವನ್ನು ಇನ್ನಷ್ಟು ಹದಗೆಡಿಸಬಹುದು ಮತ್ತು ಹೆಚ್ಚಿನ ಪ್ರಮಾಣದ ಮರಣ ಮತ್ತು ಹೃದಯರಕ್ತನಾಳದ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಆದರೆ ಭಾರತದ ಕೆಲವು ಪ್ರದೇಶಗಳಲ್ಲಿ, ಪರಿಸರದಲ್ಲಿರುವ ವಿಷಕಾರಿ ಅಂಶಗಳು (ಭಾರೀ ಲೋಹಗಳು, ಕೀಟನಾಶಕಗಳು) ಮತ್ತು ಹೆಚ್ಚಿನ ಫ್ಲೋರೈಡ್ ಮಟ್ಟವನ್ನು ಹೊಂದಿರುವ ಅಂತರ್ಜಲ (ನೆಲದಡಿಯ ನೀರು) ಸೇರಿದಂತೆ ಇತರ ಕಾರಣಗಳು CKD ಯ ಹೆಚ್ಚಳಕ್ಕೆ ಕಾರಣವಾಗಿವೆ.
CKDಯಿಂದ ಜನ ಸಾವನ್ನಪ್ಪಲು ಕಾರಣವೇನು?
ಭಾರತದಲ್ಲಿ ಮೂತ್ರಪಿಂಡದ ಬದಲಿ ಚಿಕಿತ್ಸೆ (ಡಯಾಲಿಸಿಸ್ ಅಥವಾ ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್) ಪಡೆಯಲು ಸೀಮಿತ ಅವಕಾಶವಿರುವುದರಿಂದ CKD ಯಿಂದಾಗಿ ಜನರು ಅಕಾಲಿಕ ಮರಣಕ್ಕೆ ಒಳಗಾಗುತ್ತಿದ್ದಾರೆ. ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್ ಚಿಕಿತ್ಸೆಗೆ ಒಳಗಾದ ವ್ಯಕ್ತಿಗಳಿಗೆ ಕೂಡ, ಅದರಿಂದ ಉಂಟಾಗುವ ಆರ್ಥಿಕ ಹೊರೆಯು ಅತ್ಯಧಿಕವಾಗಿದ್ದು, ಇದು ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಈ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂರ್ಖಯೆ ಹಚ್ಚಾಗುತ್ತಿದೆ.
-*ಮಧುಮೇಹ ಮತ್ತು ಅಧಿಕ ರಕ್ತದೊತ್ತಡವಿಲ್ಲದ ಜನರಿಗೆ ಹೋಲಿಸಿದರೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹೊಂದಿರುವ ವಯಸ್ಕರಲ್ಲಿ CKD ಹರಡುವಿಕೆಯು ಎರಡು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇದಲ್ಲದೆ, CKD ಯ ಸಮಸ್ಯೆಯು ದೇಶದೊಳಗೆ 6 ರಿಂದ 32% ವರೆಗೆ ವ್ಯಾಪಕವಾಗಿ ಬದಲಾಗುತ್ತಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆಯಂತಹ ಮೆಟಬೋಲಿಕ್ ರಿಸ್ಕ್ ಅಂಶಗಳನ್ನು ESRD (End stage renal disease – ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆ) ಮತ್ತು CVD ಎರಡೂ ಪರಿಸ್ಥಿತಿಗಳಿಗೆ ಪ್ರಬಲ ಅಪಾಯಕಾರಿ ಅಂಶಗಳೆಂದು ವಿವರಿಸಲಾಗಿದೆ. ಕಾರ್ಡಿಯೋ-ಮೆಟಬಾಲಿಕ್ ರಿಸ್ಕ್ ಅಂಶಗಳ ಸಮರ್ಥವಾದ ನಿಯಂತ್ರಣಕ್ಕಾಗಿ ಪೂರ್ವಭಾವಿ ಆರೋಗ್ಯ ತಂತ್ರಗಳು ಮತ್ತು CKD ಯ ಬೆಳವಣಿಗೆಯನ್ನು ನಿಧಾನಗೊಳಿಸುವುದರಿಂದ ಅಕಾಲಿಕ ಮರಣಗಳನ್ನು ಗಮನಾರ್ಹವಾಗಿ ತಡೆಯಬಹುದು.
ಭಾರತದಲ್ಲಿ, ಹೆಚ್ಚಿನ ವೆಚ್ಚ ಮತ್ತು ತಪ್ಪು ಮಾಹಿತಿಯಿಂದಾಗಿ ರೋಗಿಗಳು ವೈದ್ಯಕೀಯ ಆರೈಕೆಯನ್ನು ಪಡೆಯಲು ವಿಫಲರಾಗುತ್ತಾರೆ. 2024 ರ ಮಾರ್ಚ್ 14 ರಂದು ಬರುವ ಈ ವಿಶ್ವ ಕಿಡ್ನಿ ದಿನದಂದು ‘ಅಡ್ವಾನ್ಸಿಂಗ್ ಎಕ್ವಿಟೇಬಲ್ ಆಕ್ಸೆಸ್ ಟು ಕೇರ್ ಅಂಡ್ ಆಪ್ಟಿಮಲ್ ಮೆಡಿಕೇಷನ್ ಪ್ರಾಕ್ಟೀಸ್’ (ಆರೈಕೆ ಮತ್ತು ಸೂಕ್ತ ಔಷಧಿ ಅಭ್ಯಾಸಕ್ಕೆ ಸಮಾನ ಆದ್ಯತೆ ಮುಂದುವರಿಸುವುದು) ಎಂಬ ಥೀಮ್ ನೊಂದಿಗೆ, ನಾವು CKD ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಮುಂತಾದ ಅಪಾಯಕಾರಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಬೇಕು, ಆರೋಗ್ಯಕರ ಜೀವನಶೈಲಿಯ ಬಗ್ಗೆ ರೋಗಿಗಳಿಗೆ ಶಿಕ್ಷಣ ನೀಡಬೇಕು ಮತ್ತು ರೋಗಿಗಳಿಗೆ ಪ್ರಯೋಜನಕಾರಿಯಾಗುವ ಮತ್ತು ಅವರ ಆರೋಗ್ಯದ ಸ್ಥಿತಿಗಳನ್ನು ಸುಧಾರಿಸುವ ಚಿಕಿತ್ಸಾ ತಂತ್ರಗಳ ಅನುಸರಣೆಯನ್ನು ಖಚಿತಪಡಿಸಬೇಕು.