ವಿಜಯಪುರ : ರನ್ಯಾ ರಾವ್ ಪ್ರಕರಣದಲ್ಲಿ ಒಂದು ದೊಡ್ಡ ಜಾಲವಿದೆ, ಇದರಲ್ಲಿ ರಾಜಕಾರಣಿಗಳು ಮಂತ್ರಿಗಳು, ಪೋಲಿಸ್ ಅಧಿಕಾರಿಗಳು ಇರಬಹುದು ಎಂದು ಶಾಸಕ ಬಸನಗೌಡ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಹೆಣ್ಣುಮಗಳಿಗೆ ಪೋಲಿಸ್ ಸೆಕ್ಯೂರಿಟಿ ಕೊಡುತ್ತಿದ್ದರು. ಆ ಹೆಣ್ಣುಮಗಳಿಗೆ ಪ್ರೋಟೋಕಾಲ್ ಮೆಂಟೇನ್ ಮಾಡುತ್ತಿದ್ದರು, ಇದೊಂದು ದೊಡ್ಡ ಜಾಲವಿದೆ. ಇದು ನಮ್ಮ ರಾಜ್ಯದ ಗೃಹ ಮಂತ್ರಿಗಳು ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲ್ಲ. ಈ ಪ್ರಕರಣ ಸಿಬಿಐ ಗೆ ಕೊಟ್ಟರೆ ನ್ಯಾಯ ಸಿಗತ್ತೆ. ಇದರಲ್ಲಿರುವ ರಾಜಕಾರಣಗಳಾಗಲೀ ಅಧಿಕಾರಗಳಾಗಲಿ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಬಂಗಾರ ಕಳ್ಳ ಸಾಗಾಣಿಕ ಮಾಡುವಂತದ್ದು, ಎಲ್ಲಿ ಬಂಗಾರ ಇಟ್ಟುಕೊಂಡು ತಂದಿದ್ದಾರೆ. ಮನುಷ್ಯನಿಗೆ ಎಲ್ಲೆಲ್ಲಿ ತೂತ ಇದ್ದಾವೋ ಅಲ್ಲಿ ಎಲ್ಲ ಕಡೆ ಬಂಗಾರ ಇಟ್ಟುಕೊಂಡು ಬಂದಿದ್ದಾರೆ. ಆ ತೂತುಗಳು ಬಂದ ಆಗಬೇಕು ಎಂದರೆ ಇದು ಸಿಬಿಐ ತನಿಖೆಗೆ ಕೊಡಬೇಕು. ಅವರ ತಂದೆ ಹುದ್ದೆ ಅವರು ಬಳಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಸಚಿವರಿರಬಹುದು ಉನ್ನತ ಪೋಲಿಸ್ ಅಧಿಕಾರಿಗಳಿರಬಹುದು, ಇದು ಸಿಬಿಐ ತನಿಖೆ ಆಗಬೇಕು. ರನ್ಯಾ ಗೆ ಇಷ್ಟೆಲ್ಲ ಸೆಕ್ಯೂರಿಟಿ ಯಾಕೆ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಹಾವೇರಿಯಲ್ಲಿ ಹಿಂದೂ ಯುವತಿ ಕೊಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ನಿರಂತರವಾಗಿ ಹಿಂದೂ ಹೆಣ್ಣು ಮಕ್ಕಳು ಜಾಗೃತರಾಗಬೇಕು. ಇಂತದರಿಂದ ಅವರು ಪ್ರಾಣ ಕಳೆದುಕೊಳ್ಳುತ್ತಾರೆ. ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಇರುವ ಗೌರವ ಅಲ್ಲಿ ಇಲ್ಲ. ಅದೊಂದು ಉಪಭೋಗದ ವಸ್ತು ಎಂದು ಅವರು ತಿಳಿದೊಂಡವರು. ಅಂಥವರಿಂದ ದೂರ ಇರಬೇಕು, ಇವರದ್ದೂ ತಪ್ಪಿದೆ. ಇಂತಹ ಘಟನೆ ಆದಾಗ ಸರ್ಕಾರ ಏನೂ ಮಾಡಲ್ಲ. ಬಜೆಟ್ ನೋಡಿದರೆ ಗೊತ್ತಾಗತ್ತೆ, ಈ ರಾಜ್ಯ ಸರ್ಕಾರ ಹೊಗೋ ವರೆಗೂ ಇದು ನಡೆಯುವದೇ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.