ಸಪೋಟಾ ರಸದಲ್ಲಿ ತಾಮ್ರ, ನಿಯಾಸಿನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕವೂ ಸಮೃದ್ಧವಾಗಿದೆ. ಸಪೋಟಾ ಜ್ಯೂಸ್ ಕುಡಿಯುವುದರಿಂದ ಅನೇಕ ಆರೋಗ್ಯ ಲಾಭಗಳು ಸಿಗಲಿವೆ.
ಹೌದು , ಚಳಿಗಾಲದಲ್ಲಿ ಇದರ ಸೇವನೆ ಮಾಡಿದರೆ ಅದು ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಸಪೋಟ ಹಣ್ಣು ಹಲವಾರು ಬಗೆಯ ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಹೀಗಾಗಿ ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ.
- ಸಪೋಟದಲ್ಲಿ ಇರುವಂತಹ ಹಲವಾರು ಬಗೆಯ ಪೋಷಕಾಂಶಗಳಾಗಿರುವಂತಹ ಕಬ್ಬಿಣಾಂಶ, ಪೊಟಾಶಿಯಂ, ತಾಮ್ರ, ವಿಟಮಿನ್ ಸಿ ಮತ್ತು ಎ, ಸಿಯಾಸಿನ್, ಫಾಲಟೆ ಇತ್ಯಾದಿಗಳು ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು.
- ಇಂದಿನ ಕೊರೊನಾ ಕಾಲಘಟ್ಟದಲ್ಲಿ ಪ್ರತಿರೋಧಕ ಶಕ್ತಿಯನ್ನು ಬಲವಾಗಿ ಇಟ್ಟುಕೊಳ್ಳುವುದು ಅತೀ ಅನಿವಾರ್ಯ. ಹೀಗಾಗಿ ಪ್ರತಿನಿತ್ಯವೂ ಚಿಕ್ಕು ತಿಂದರೆ ಅದು ಪ್ರತಿರೋಧಕ ಶಕ್ತಿ ವೃದ್ಧಿಸಿ, ಯಾವುದೇ ಸೋಂಕು ದೇಹವನ್ನು ಬಾಧಿಸದಂತೆ ತಡೆಯುವುದು.
- ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತೀಯರ ಮೂಳೆಗಳು ತುಂಬಾ ದುರ್ಬಲ ಎಂದು ಪರಿಗಣಿಸಲಾಗಿದೆ.
- ಹೀಗಾಗಿ ಹಣ್ಣು ಹಾಗೂ ತರಕಾರಿಗಳ ಸೇವನೆ ಮಾಡಿಕೊಂಡು ಮೂಳೆಗಳನ್ನು ಬಲಪಡಿಸಬೇಕು. ಚಿಕ್ಕುವಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಕಬ್ಬಿಣಾಂಶವು ಇದ್ದು, ಮೂಳೆಗಳನ್ನು ಬಲಪಡಿಸುವುದು.