ನವದೆಹಲಿ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಭಾರತದ ಆರ್ಥಿಕತೆ ಮಂದಗತಿಯಲ್ಲಿರುವ ಹಿನ್ನೆಲೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಆರ್ಥಿಕ ಚೇತರಿಕೆಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದರು. ಪ್ರಚಾರದ ವ್ಯಾಮೋಹ ಬಿಟ್ಟು ಆರ್ಥಿಕ ಚೇತರಿಕೆಯತ್ತ ಗಮನ ಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಯವಾಗಿ ಕುಟುಕಿದ್ದರು.
ಹೋಟೆಲ್ ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ..! ಮುಂದೇನಾಯ್ತು..?
ಸೂಕ್ತ ಕ್ರಮಗಳನ್ನು ಕೈಗೊಂಡರೆ ಮುಂದಿನ 3-4 ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿ ಆರು ಸಲಹೆಗಳನ್ನು ಮೋದಿ ಸರಕಾರದ ಮುಂದಿಟ್ಟಿದ್ದರು. ಜಿಎಸ್ಟಿ, ಕೃಷಿ, ಬಂಡವಾಳ, ಉದ್ಯೋಗ, ರಫ್ತು ಮತ್ತು ಮೂಲ ಸೌಕರ್ಯ ವಿಭಾಗಗಳಲ್ಲಿ ಪ್ರಗತಿ ಸಾಧಿಸುವುದು ಹೇಗೆ ಎಂದು ವಿವರಿಸಿದ್ದರು.
ಜಿಎಸ್ಟಿ ಸರಳಗೊಳಿಸುವುದು: ಸರಕಾರ ಸಂಕೀರ್ಣ ಜಿಎಸ್ಟಿ ಪದಟಛಿತಿ ಸರಳಗೊಳಿಸಬೇಕು. ತಾತ್ಕಾಲಿಕವಾಗಿ ಆದಾಯ ನಷ್ಟವಾದರೂ ಪರವಾಗಿಲ್ಲ.
2. ಕೃಷಿ ವಲಯದ ಸುಧಾರಣೆ: ಸರಕಾರ ಕೃಷಿ ಕ್ಷೇತ್ರದ ಸುಧಾರಣೆಗೆ ನವೀನ ಕ್ರ ಕೈಗೊಳ್ಳಬೇಕು.
3. ಬಂಡವಾಳ ಸೃಷ್ಟಿ: ಸರಕಾರ ಬಂಡವಾಳ ಕೊರತೆಯಿಂದ ಬಳಲುತ್ತಿದೆ. ಸಾರ್ವಜನಿಕ ಬ್ಯಾಂಕ್ಗಳು, ಎನ್ಬಿಎಫ್ಸಿಗಳೂ ಬಂಡವಾಳ ಇಲ್ಲದೆ ಸೊರಗಿವೆ. ಹೀಗಾಗಿ ಬಂಡವಾಳ ಸಂಗ್ರಹಕ್ಕೆ ಸರಕಾರ ಗಮನ ನೀಡಬೇಕು.
- ಉದ್ಯೋಗ ಸೃಷ್ಟಿಗೆ ಆದ್ಯತೆ:ಜವಳಿ, ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್, ಅಫರ್ಡಬಲ್ ಹೌಸಿಂಗ್ ಕ್ಷೇತ್ರ ಚೇತರಿಸಬೇಕು.
5. ರಫ್ತು ಹೆಚ್ಚಳ:ಅಮೆರಿಕ-ಚೀನಾ ವಾಣಿಜ್ಯ ಸಮರದ ಲಾಭವನ್ನು ಭಾರತ ಪಡೆಯಬೇಕು. ಹೊಸ ರಫ್ತು ಮಾರುಕಟ್ಟೆ ಕಂಡುಕೊಳ್ಳಬೇಕು.
6. ಮೂಲ ಸೌಕರ್ಯ ವೃದ್ಧಿ: ಖಾಸಗಿ ವಲಯದ ಹೂಡಿಕೆಗೆ ಉತ್ತೇಜನ, ಮೂಲ ಸೌಕರ್ಯ ವೃದ್ಧಿಗೆ ಆದ್ಯತೆ ನೀಡಬೇಕು