ಸಾನ್ಮರಿನೋ: ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವುದನ್ನು ಕೇಳಿದ್ದೇವೆ. ಆದ್ರೆ ಜನರಿಗಿಂತ ಹೆಚ್ಚು ವಾಹನಗಳನ್ನು ಹೊಂದಿರುವುದನ್ನು ಕೇಳಿರಲ್ಲಿಕ್ಕಿಲ್ಲ. ಅಂತಹ ಪಟ್ಟಿಗೆ ಸೇರಿದೆ ಸಾನ್ ಮರಿನೋ ರಾಷ್ಟ್ರ. ಹೌದು. ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದಾದ ಈ ದೇಶದಲ್ಲಿ ಜನರು ಕಡಿಮೆ. ವಾಹನಗಳು ಜಾಸ್ತಿ ಇವೆ.
ಈ ರಾಷ್ಟ್ರದಲ್ಲಿ ಸುಮಾರು 34 ಸಾವಿರ ಜನರಿದ್ದಾರೆ. ಅಂಕಿ ಅಂಶಗಳ ಪ್ರಕಾರ ಈ ರಾಷ್ಟ್ರದ ಸರಾಸರಿ 1 ಸಾವಿರ ಜನರಿಗೆ 1,263 ವಾಹನಗಳಿವೆ. ಮಾತ್ರವಲ್ಲದೇ ಈ ದೇಶ ಒಟ್ಟು ಜಿಡಿಪಿಯಲ್ಲೂ ಶ್ರೀಮಂತವಾಗಿದೆ. ಸಾನ್ ಮರಿನೋ ಹಾಗೂ ವಾಟಿಕನ್ ಸಿಟಿ ಈ ಎರಡೂ ರಾಷ್ಟ್ರಗಳು ಸಂಪೂರ್ಣವಾಗಿ ಇಟಲಿಯ ಒಳಗೆ ಹುದುಗಿಕೊಂಡಿವೆ. ಇನ್ನು ಮೂರನೇ ರಾಷ್ಟ್ರವಾದ ಲೆಸ್ತೋ ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದಿಂದ ಸುತ್ತುವರಿದಿದೆ.