ದುಡಿಯುವ ಹಂಬಲ ಇರುವ ಹೆಣ್ಣು ಮಕ್ಕಳಿಗಾಗಿ, ಮನೆಯಲ್ಲೇ ಕುಳಿತು ಅಧಿಕ ಸಂಬಳ ಪಡೆಯಬಹುದಾದ ವರ್ಕ್ ಫ್ರಮ್ ಹೋಮ್ ಉದ್ಯೋಗಗಳ ಬಗ್ಗೆ ತಿಳಿಸಲಾಗುತ್ತದೆ.
ನೇಮಕಾತಿದಾರರಾಗಿ ಕೆಲಸ ಮಾಡುವುದು
ಮಾನವ ಸಂಪನ್ಮೂಲ ವ್ಯಕ್ತಿಗಳ(HR) ಸಹಾಯಕಿ ಆಗಿ ಉದ್ಯೋಗ ಮಾಡಬಹುದು. ಆನ್ಲೈನ್ ಮೂಲಕ ಅಭ್ಯರ್ಥಿಗಳ ಬಯೋಡಾಟಾ ಪರಿಶೀಲಿಸಿ, ಸೂಕ್ತವಾದವರ ಹಿನ್ನೆಲೆ ಚೆಕ್ ಮಾಡಿ, ಸಂದರ್ಶನಕ್ಕೆ ಆಹ್ವಾನಿಸುವುದು, ನೇಮಕಾತಿಗೆ ಸಹಾಯ ಮಾಡುವುದು ಈ ಜಾಬ್ ರೋಲ್ ಕರ್ತವ್ಯಾಗಿದೆ.
ಫ್ರೀಲ್ಯಾನ್ಸ್ ರೈಟರ್
ಹವ್ಯಾಸಿ ಬರಹಗಾರರಾಗಿ ಕೆಲಸ ಮಾಡಲು ಯಾವುದೇ ನಿಗದಿತ ವಿದ್ಯಾರ್ಹತೆ ಬೇಕಿಲ್ಲ. ಆದರೆ ಬರವಣಿಗೆ ಕಲೆ ಬೇಕು ಅಷ್ಟೆ. ಬರವಣಿಗೆ ಗೊತ್ತಿರುವವರು, ಹಲವು ವೆಬ್ಸೈಟ್ಗಳಿಗೆ ತಮ್ಮ ಲೇಖನಗಳನ್ನು ನೀಡುವ ಮೂಲಕ ಮನೆಯಿಂದಲೇ ಹವ್ಯಾಸಿ ಬರಹಗಾರರಾಗಿ ಸಂಪಾದನೆ ಮಾಡಬಹುದು.
ಡಾಟಾ ಫ್ರೂಫ್ ರೀಡರ್
ಫ್ರೂಫ್ ರೀಡರ್ ಕೇವಲ ಕಂಟೆಂಟ್ ಗ್ರಾಮರ್ ತಪ್ಪುಗಳನ್ನು ಮಾತ್ರ ಚೆಕ್ ಮಾಡುವುದಲ್ಲದೇ, ಮಾಹಿತಿ ಸರಿಯಾಗಿದೆಯೇ, ಫಾರ್ಮ್ಯಾಟ್ ಸರಿ ಇದೆಯೇ ಎಂದು ಪರಿಶೀಲಿಸಬೇಕು. ಅಲ್ಲದೇ ಕಂಟೆಂಟ್ ಬಗೆಗಿನ ಇತರೆ ಕೆಲಸಗಳನ್ನು ಸಹ ಮಾಡಬಹುದು
ಆನ್ಲೈನ್ ಟೀಚರ್ ಟ್ಯೂಟರ್
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ತಾಯಂದಿರು ಮನೆಯಲ್ಲೇ ಹಲವು ರೀತಿಯಲ್ಲಿ ಪಾಠ ಮಾಡುತ್ತೀರಿ. ಹಲವು ಸಬ್ಜೆಕ್ಟ್ಗಳ ಬಗ್ಗೆ ಕಲಿಸುತ್ತೀರಿ. ಟೀಚಿಂಗ್ ಸಹ ನಿಮ್ಮ ದಿನನಿತ್ಯದ ಒಂದು ಚಟುವಟಿಕೆ ಆಗಿದೆ.
ಅಕೌಂಟಿಂಗ್ ಕ್ಲರ್ಕ್ ಹುದ್ದೆಗಳು
ನೀವು ಪಿಯುಸಿಯಲ್ಲಿ ಕಾಮರ್ಸ್, ಪದವಿಯಲ್ಲಿ ಬಿಬಿಎಂ, ಬಿಕಾಂ ಓದಿದ್ದರೆ ಸಾಕು ಅಕೌಂಟಿಂಗ್ ಕ್ಲರ್ಕ್ ಹುದ್ದೆಯನ್ನು ಸಾರಾಗವಾಗಿ ಮನೆಯಿಂದಲೇ ನಿರ್ವಹಿಸಿ, ಸಂಪಾದನೆ ಮಾಡಬಹುದು.
ಭಾಷಾಂತರಕಾರ ( ಟ್ರಾನ್ಸ್ಲೇಟರ್ )
ನಿಮಗೆ ಟೈಪಿಂಗ್ ಬರುತ್ತದಾ..? ಕನಿಷ್ಠ 2 ಭಾಷೆಗಳನ್ನು ಓದಲು ಮತ್ತು ಬರೆಯಲು, ಅರ್ಥಮಾಡಿಕೊಳ್ಳುವವರು, ಅದರಲ್ಲೂ ಇಂಗ್ಲಿಷ್ ಜ್ಞಾನ ಇರುವವರು ಯಾರು ಬೇಕಾದರೂ ಟ್ರಾನ್ಸ್ಲೇಟರ್ ಉದ್ಯೋಗವನ್ನು ಮನೆಯಿಂದಲೇ ನಿರ್ವಹಿಸಬಹುದು.