ಯಾವುದೇ ಶುಭ ಕೆಲಸ ಆರಂಭಿಸುವ ಮುನ್ನ ಮೊದಲ ಪೂಜೆ ಸಲ್ಲುವುದೇ ವಿಘ್ನ ನಿವಾರಕ ಗಣಪನಿಗೆ. ಕೈ ಹಾಕಿದ ಕಾರ್ಯಗಳನ್ನು ಸುಗಮವಾಗಿ ಪೂರ್ಣಗೊಳಿಸಲು ವಿನಾಯಕ ಸಹಾಯ ಮಾಡುತ್ತಾನೆ. ರಿದ್ಧಿ-ಸಿದ್ಧಿಯ ಅಧಿಪತಿ ಗಣೇಶ. ಮತ್ತು ಅವನ ಅನುಗ್ರಹದಿಂದ ಸಂಪತ್ತು ಮತ್ತು ಸಮೃದ್ಧಿ ಎಂದಿಗೂ ಕೊರತೆಯಿಲ್ಲ. ಹೀಗಾಗೇ ಗಣೇಶ ಚತುರ್ಥಿಯನ್ನ ಭಕ್ತಿ ಭಾವದಿಂದ ಆಚರಣೆ ಮಾಡಲಾಗುತ್ತದೆ.
ಪ್ರತಿ ವರ್ಷ ವಿನಾಯಕ ಚೌತಿ ಹಬ್ಬವನ್ನು ದೇಶದ ಹಲವೆಡೆ ವಿಜೃಂಭಣೆಯಿಂದ, ಉತ್ಸಾಹದಿಂದ, ಭಕ್ತಿಯಿಂದ ಆಚರಿಸಲಾಗುತ್ತದೆ.ಣೇಶ ಚತುರ್ಥಿಯಂದು ಜನರು ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತದೆ. ಕೆಲವೆಡೆ ಒಂದೇ ದಿನಕ್ಕೆ ಗಣೇಶ ವಿಸರ್ಜನೆ ಮಾಡಿದರೆ ಇನ್ನು ಕೆಲವೆಡೆ ವಾರಗಟ್ಟಲೆ ಇಟ್ಟು ಪೂಜಿಸಲಾಗುತ್ತದೆ. ಬೊಜ್ಜ ಗಣಪತಿಯ ಮೂರ್ತಿಯನ್ನು ತಮ್ಮ ಮನೆ ಮತ್ತು ಮಂಟಪಗಳಿಗೆ ಕೊಂಡೊಯ್ದು 10 ದಿನಗಳ ಕಾಲ ಪೂಜಿಸುತ್ತಾರೆ.
ಮುಂಬೈನ ಸಿದ್ಧಿವಿನಾಯಕ ದೇವಾಲಯ, ಮಹಾರಾಷ್ಟ್ರದ ಅಷ್ಟವಿನಾಯಕ ದೇವಾಲಯ, ಕೇರಳದ ಮಧುರ್ ಮಹಾಗಣಪತಿ ದೇವಾಲಯ, ತ್ರಿನೇತ್ರ ಗಣೇಶ ರಣಥಂಬೋರ್, ಗಣೇಶ್ ಟೋಕ್ ದೇವಾಲಯ ಗ್ಯಾಂಗ್ಟಾಕ್, ಉಚ್ಚಿ ಪಿಳ್ಳ್ಯಾರ್ ದೇವಾಲಯ, ಕಣಿಪಾಕಂ ಗಣಪಯ್ಯ ಸೇರಿದಂತೆ ಭಾರತದಲ್ಲಿ ಅನೇಕ ಪ್ರಸಿದ್ಧ ಗಣೇಶ ದೇವಾಲಯಗಳಿವೆ.
ಸೂರ್ಯವಿನಾಯಕ ದೇವಸ್ಥಾನ, ನೇಪಾಳ: ಸೂರ್ಯವಿನಾಯಕ ದೇವಸ್ಥಾನವು ನೇಪಾಳದ ಭಕ್ತಾಪುರ ಜಿಲ್ಲೆಯಲ್ಲಿರುವ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಹಿಂದೂ ದೇವರಾದ ಗಣೇಶನಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಕಠ್ಮಂಡುವಿನಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಕಾಡಿನಲ್ಲಿದೆ. ಫುಟ್ ಪಾತ್ ಮೂಲಕವೇ ಇಲ್ಲಿಗೆ ತಲುಪಬೇಕು. ದೂರದ ಊರುಗಳಿಂದ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುತ್ತಾರೆ. ಇದು ಕಠ್ಮಂಡು ಕಣಿವೆಯಲ್ಲಿರುವ 4 ಪ್ರಸಿದ್ಧ ಗಣೇಶ ದೇವಾಲಯಗಳಲ್ಲಿ ಒಂದಾಗಿದೆ.
ಮಲೇಷ್ಯಾದ ಸೆಲಂಗೋರ್ನ ಪೆಟಾಲಿಂಗ್ ಜಯದಲ್ಲಿರುವ ಜಲನ್ ಸೆಲಂಗೋರ್ ಬಳಿ ಇದೆ. ಇದನ್ನು ಪಿಜೆ ಪಿಳ್ಳೈಯಾರ್ ದೇವಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿ ಶ್ರೀ ಸೀತಿ ವಿನಯಗರ್ ರೂಪದಲ್ಲಿ ಗಣಪತಿ ಪೂಜೆಯನ್ನು ಸ್ವೀಕರಿಸುತ್ತಾನೆ. ಈ ದೇವಾಲಯವು ಮಲೇಷ್ಯಾದಲ್ಲಿ ಗಣೇಶನಿಗೆ ಸಮರ್ಪಿತವಾಗಿರುವ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ
ಶ್ರೀಲಂಕಾದಲ್ಲಿ ಗಣೇಶನನ್ನು ಪಿಳ್ಳೇರ್ ಎಂದು ಪೂಜಿಸಲಾಗುತ್ತದೆ. ಅಲ್ಲಿ ಅನೇಕ ಪ್ರಸಿದ್ಧ ಗಣೇಶ ದೇವಾಲಯಗಳಿವೆ. ಅರಿಯಲೈ ಸಿದ್ಧಿವಿನಾಯಕ ದೇವಾಲಯ ಮತ್ತು ಕತರಗಾಮ ದೇವಾಲಯಗಳು ಅತ್ಯಂತ ಪ್ರಸಿದ್ಧವಾದ ಗಣೇಶ ದೇವಾಲಯಗಳಾಗಿವೆ.
ಥೈಲ್ಯಾಂಡ್ನಲ್ಲಿ ಅನೇಕ ಗಣೇಶ ದೇವಾಲಯಗಳಿವೆ. ಇದಲ್ಲದೆ, ಥೈಲ್ಯಾಂಡ್ನ ಚಿಯಾಂಗ್ ಮಾಯ್ನಲ್ಲಿರುವ ಬೆಳ್ಳಿ ದೇವಾಲಯ ಎಂದು ಕರೆಯಲ್ಪಡುವ ದೇವಾಲಯದ ಹೊರಗೆ ಗಣೇಶನ ಬೆಳ್ಳಿಯ ಪ್ರತಿಮೆ ಇದೆ.
ನೆದರ್ಲೆಂಡ್ಸ್: ಡೆನ್ ಹೆಲ್ಡರ್ನಲ್ಲಿರುವ ಶ್ರೀ ವರದರಾಜ ಸೆಲ್ವವಿನಾಯಕ ದೇವಸ್ಥಾನವು ನೆದರ್ಲೆಂಡ್ನ ಅತ್ಯಂತ ಹಳೆಯ ಗಣೇಶ ದೇವಾಲಯವಾಗಿದೆ.