ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದ ನಂತರ ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿತ್ತು, ಇದ್ರ ಬೆನ್ನಲ್ಲೆ ವಾಯು ಮಾಲಿನ್ಯ ಹದಗೆಡುತ್ತಿರೋ ಹಿನ್ನೆಲೆ ಸುಪ್ರೀಂ ಕೋರ್ಟ್ ಕೂಡ ಪಟಾಕಿ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೆ ದೀಪಾವಾಳಿ ಹಬ್ಬ ಬಂದಿದ್ದು, ಕಾಳಸಂತೆಯಲ್ಲಿ ಪಟಾಕಿ ಗೋದಾಮಗಳು ಪಟಾಕಿ ಮಳಿಗೆಗಳು ತಲೆ ಎತ್ತುತ್ತಿವೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಮಾಡಿದ್ರೆ ಒಳ್ಳೆಯದು: ಡಿ.ವಿ.ಸದಾನಂದಗೌಡ
ಈ ಹಿನ್ನೆಲೆ ಬಿಬಿಎಂಪಿ ಹಾಗೂ ನಗರ ಪೊಲೀಸ್ ಇಲಾಖೆ ಪಟಾಕಿ ಮಾರಾಟಕ್ಕೆ ನಿರ್ದಿಷ್ಟ ಜಾಗ ಗುರುತು ಮಾಡಿದೆ. ಅಷ್ಟೇ ಅಲ್ಲದೆ ಈ ಬಾರಿ ಮಾಮೂಲಿ ಪಟಾಕಿ ನಿಷೇಧ ಮಾಡಿದ್ದು ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದಾರೆ.ಹಾಗಾದ್ರೆ ಸರ್ಕಾರ ಆದೇಶ ನೋಡೋದಾದ್ರೆ…
ಪಟಾಕಿ ಮಾರಾಟ ನಿಬಂಧನೆಗಳು
ಹಸಿರು ಪಟಾಕಿ ಮಾರುವುದು ಕಡ್ಡಾಯ
ಹಸಿರು ಪ್ಯಾಕೆಟ್ಗಳ ಮೇಲೆ ಹಸಿರು ಪಟಾಕಿ ಚಿಕ್ಕ QR ಕೋಡ್ ಕಡ್ಡಾಯ
ಮಳಿಗೆಗಳ ವಿಸ್ತೀರ್ಣ 10×10 ಅಡಿ ಸೀಮಿತ
ನಿಗದಿಗಿಂತ ಹೆಚ್ಚು ಪ್ರಮಾಣದ ಪಟಾಕಿ ದಾಸ್ತಾನು ಮಾಡುವಂತಿಲ್ಲ
ಸಾಧ್ಯವಾದಷ್ಟೂ ಬೆಂಕಿ ತಡೆಯುವ ಉಪಕರಣಗಳನ್ನೇ ಬಳಸಿ ಮಳಿಗೆ ನಿರ್ಮಿಸಬೇಕು
ಮಳಿಗೆ ಮುಂಭಾಗ ಹಾಗೂ ಹಿಂಭಾಗ ಪ್ರವೇಶಿಸುವ ಅವಕಾಶ ಇರಬೇಕು
ಪ್ರತಿ ಮಾರಾಟ ಮಳಿಗೆಗೆ 3 ಮೀಟರ್ ಅಂತರ ಕಡ್ಡಾಯ
ಪರವಾನಗಿ ಪತ್ರ ಮಳಿಗೆಯಲ್ಲಿ ಪ್ರದರ್ಶಿಸಬೇಕು
ಪರವಾನಗಿದಾರರು ಮಳಿಗೆಯಲ್ಲಿ ಕಡ್ಡಾಯವಾಗಿ ಇರಬೇಕು
ಪ್ರತಿ ಮಾರಾಟ ಮಳಿಗೆ ಯಲ್ಲಿ ಅಗ್ನಿಶಮನ ವ್ಯವಸ್ಥೆ ಇರಬೇಕು
ಮಳಿಗೆ ಸಮೀಪ ಧೂಮಪಾನಕ್ಕೆ ಅವಕಾಶವಿಲ್ಲ
ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ
ರಾತ್ರಿ ವೇಳೆ ಯಾರೂ ಮಳಿಗೆಯಲ್ಲಿ ಮಲಗದಂತೆ ಎಚ್ಚರ ವಹಿಸಬೇಕು
ಎಲೆಕ್ಟಿಕಲ್ ವೈರಿಂಗ್ ಮತ್ತು ಫಿಟ್ಟಿಂಗ್ಸ್ ವ್ಯವಸ್ಥೆ ಮಾಡಿಕೊಂಡಿರಬೇಕು
ಪರವಾನಗಿ ಪಡೆದಿರುವ ದಿನಾಂಕ, ಸ್ಥಳದಲ್ಲಿ ಮಾತ್ರವೇ ಮಾರಾಟಕ್ಕೆ ಅವಕಾಶ
ವಿದೇಶಿ ತಯಾರಿಕ ಪಟಾಕಿ ಮಾರಾಟಕ್ಕೆ ನಿರ್ಬಂಧ
ಪಟಾಕಿಯನ್ನು 18 ವರ್ಷದೊಳಗಿನ ಮಕ್ಕಳಿಗೆ ಮರಾಟ ಮಾಡುವಂತಿಲ್ಲ
ನಗರದ್ಯಾಂತ 62 ಮೈದಾನ ಗಳಲ್ಲಿ ಪಟಾಕಿ ಮಳಿಗೆಗೆ ಅವಕಾಶ ಕೊಟ್ಟಿದ್ದು, ಈ ಮೈದಾನಗಳಲ್ಲಿ 263 ಮಳಿಗೆಗಳಲ್ಲಿ ಅನುಮತಿಯಿದೆ. ಮಳಿಗೆಗಳು ಹಾಕಲು ಒಟ್ಟು 912 ಅರ್ಜಿಗಳು ಬಂದಿದ್ದು, ಅದರಲ್ಲಿ ಬಿಬಿಎಂಪಿ. ಬೆಸ್ಕಾ. ಪೋಲ್ಯುಶನ್ ಕಂಟ್ರೋಲ್ ಬೋರ್ಡ್. ಹಾಗೂ ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆಸಿ ಲಾಟರಿ ಮೂಲಕ 263 ಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕೇವಲ ಗ್ರೀನ್ ಪಟಾಕಿ ಮಾರಾಟ ಮಾಡಲು ಮಾತ್ರ ಅನುಮತಿ ಕೊಟ್ಟಿದು ಹೆಚ್ಚು ಶಬ್ದ, ಹೊಗೆ ಸೂಸುವ ಪಟಾಕಿ ಗಳಿಗೆ ಅವಕಾಶ ವಿಲ್ಲ. ರಾತ್ರಿ ಎಂಟು ಗಂಟೆ ಯಿಂದ ಹತ್ತು ಗಂಟೆ ತನಕ ಮಾತ್ರ ಪಟಾಕಿ ಹೊಡೆಯಲು ಅವಕಾಶವಿದ್ದು ಪೋಷಕರು ಮಕ್ಕಳಿ ಗೆ ಜಾಗೃತಿ ಇಂದ ಪಟಾಕಿ ಹೊಡೆಯುವಂತೆ ನೋಡಿಕೊಳಬೇಕು ಯಂದು ಪೊಲೀಸ್ ಕಮಿಷನರ್ ಮನವಿ ಮಾಡಿಕೊಡ್ರು
ಈ ಬಾರಿಯ ಹಸಿರು ಪಟಾಕಿಗಳ ಜ್ಯೋತೆ ದೀಪಾವಳಿ ಹಬ್ಬ ಆಚರಿಸಲು ಸರ್ಕಾರ ಕರೆ ಕೊಟ್ಟಿದ್ದು ಶಬ್ದ ಹಾಗೂ ವಾಯು ಮಾಲಿನ್ಯ ಮುಕ್ತ ದೀಪಾವಳಿ ಗೆ ಕರುನಾಡು ಸಿದ್ದವಾಗಿದೆ..