ಕೊಚ್ಚಿ:- 10 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಪ್ಪನಿಗೆ 101 ವರ್ಷ ಜೈಲು ಶಿಕ್ಷೆ ವಿಧಿಸಿದೆ
ಬೆಂಗಳೂರಿನಲ್ಲಿ ಡೆಂಗ್ಯೂ ಆತಂಕ: ಪ್ರತೀ ಮನೆಗಳ ಸರ್ವೇಗೆ ಆರೋಗ್ಯ ಸಚಿವರ ಸೂಚನೆ!
ಬಾಲಕಿಯ ಮೇಲೆ 6 ವರ್ಷಗಳ ಕಾಲ ಮುಹಮ್ಮದ್ ಅತ್ಯಾಚಾರ ಮಾಡಿದ್ದ. ಇದರಿಂದಾಗಿ 16ನೇ ವಯಸ್ಸಿನಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಇದರಿಂದಾಗಿ ಆತನ ಕೃತ್ಯ ಬೆಳಕಿಗೆ ಬಂದಿತ್ತು. ಅಪರಾಧಿ ಮುಹಮ್ಮದ್ ತನ್ನ ಮಗಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಮರ್ಥನೆ ಮಾಡಿಕೊಂಡು, ಎಲ್ಲಾ ತಂದೆಯರೂ ತಮ್ಮ ಹೆಣ್ಣುಮಕ್ಕಳಿಗೆ ಹೀಗೆಯೇ ಮಾಡುತ್ತಾರೆ ಎಂದು ಹೇಳಿದ್ದ. ಇಂತಹ ಅಪರಾಧಗಳು ಮಕ್ಕಳ ಮೇಲೆ ಮಾತ್ರವಲ್ಲದೆ ಇಡೀ ಸಮಾಜದ ಮೇಲೆ ಗಣನೀಯ ಪರಿಣಾಮ ಬೀರುವುದರಿಂದ ಇದು ಗರಿಷ್ಠ ಶಿಕ್ಷೆಗೆ ಅರ್ಹವಾಗಿದೆ ಎಂದು ನ್ಯಾಯಾಲಯವು ಹೇಳಿದೆ.
ಕೇರಳದ ಮಲ್ಲಪುರಂನಲ್ಲಿರುವ ವಿಶೇಷ ತ್ವರಿತ ನ್ಯಾಯಾಲಯವು ತನ್ನ ಅಪ್ರಾಪ್ತ ಮಗಳನ್ನು ಅತ್ಯಾಚಾರ ಮಾಡಿದ ವ್ಯಕ್ತಿಗೆ 101 ವರ್ಷಗಳ ಜೈಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಕಳೆದ ವಾರ, ನ್ಯಾಯಾಲಯವು 43 ವರ್ಷದ ಆ ವ್ಯಕ್ತಿಗೆ ಶಿಕ್ಷೆ ವಿಧಿಸುವಾಗ ಈ ಘೋರ ಅತ್ಯಾಚಾರ ಆ ಹುಡುಗಿಯ ಜೀವನದ ಮೇಲೆ ಜೀವನಪರ್ಯಂತ ಪರಿಣಾಮವನ್ನು ಬೀರುತ್ತದೆ. ಕೇವಲ 16 ವರ್ಷದಲ್ಲಿ ಗರ್ಭಿಣಿಯಾಗಿರುವ ಆ ಬಾಲಕಿಯ ಜೀವನವೇ ಹಾಳಾಗಿ ಹೋಗಿದೆ. ಹಾಗೇ, ಮಾನಸಿಕವಾಗಿಯೂ ಆಕೆಯ ಮೇಲೆ ಇದು ದೊಡ್ಡ ಆಘಾತ ಉಂಟುಮಾಡಿದೆ ಎಂದು ಹೇಳಿತ್ತು.