12ನೇ ಕಂತಿನ ಗೃಹಲಕ್ಷ್ಮಿ ಹಣದ ಬಗ್ಗೆ ಹೊಸ ಅಪ್ಡೇಟ್ ಬಗ್ಗೆ ಬಹುತೇಕ ಮಹಿಳೆಯರು ಕಾಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಇನ್ಮುಂದೆ ಯಾವಾಗ ಹಣ ಬರಲಿದೆ? ಯಾವ ಮಹಿಳೆಯರಿಗೆ ಹಣ ತಲುಪಲಿದೆ ಅನ್ನೋದರ ಮಾಹಿತಿಯನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ.
ಐತಿಹಾಸಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಕನ್ನಡಿಗ ಕೆ. ಎಲ್ ರಾಹುಲ್ ದಂಪತಿ ಭೇಟಿ!
ಇದುವರೆಗೂ ಮನೆಯ ಯಜಮಾನೀಯರು ಸುಮಾರು 10 ಕಂತುಗಳಷ್ಟು ಗೃಹಲಕ್ಷ್ಮಿ ಹಣವನ್ನು ಸ್ವೀಕರಿಸಿದ್ದಾರೆ. 11 & 12ನೇ ಕಂತಿನ ಹಣಕ್ಕಾಗಿ ಬಹುತೇಕ ಮಹಿಳೆಯರು ಕಾಯುತ್ತಿದ್ದಾರೆ. ಈಗಾಗಲೇ ಜೂನ್ ತಿಂಗಳ ಹಣ ಬರುವುದು ಬಹಳಷ್ಟು ತಡವಾಗಿದ್ದು, ಹಣ ಬಂದಿಲ್ಲವೆಂದು ಅನೇಕರು ಚಿಂತಿತರಾಗಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದು, ಶೀಘ್ರವೇ ಜೂನ್ ತಿಂಗಳ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ. ಇದೇ ತಿಂಗಳಲ್ಲಿ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಜಮೆ ಮಾಡುವುದು ಅವರು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಇದೇ ತಿಂಗಳ 20ರೊಳಗೆ ಮಹಿಳೆಯರ ಖಾತೆಗೆ ಜಮಾ ಆಗಬಹುದು ಎಂದು ಹೇಳಲಾಗುತ್ತಿದೆ. ಇನ್ನುಂದೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಯೋಜನೆಯ ಹಣ ತಲುಪಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಹೀಗಾಗಿ ಇದೇ ತಿಂಗಳಿನಲ್ಲಿ ಮಹಿಳೆಯರು 2 ತಿಂಗಳಿನ ಒಟ್ಟು ನಾಲ್ಕು ಸಾವಿರ ಹಣ ಪಡೆಯಲಿದ್ದಾರೆ. ಆದರೆ ಈ ಹಣ ದಾಖಲೆಗಳು ಸರಿ ಇರುವ ಮಹಿಳೆಯರು ಖಾತೆಗೆ ಮಾತ್ರ ಬರಲಿದೆ ಅಂತಾ ಹೇಳಲಾಗಿದೆ.
ಹಣ ಬರದಿರುವ ಮಹಿಳೆಯರು ತಮ್ಮ ದಾಖಲೆಗಳನ್ನು ಸರಿಪಡಿಸಬೇಕು. ಈ ಬಗ್ಗೆ ಸರ್ಕಾರ ಈಗಾಗಲೇ ಹಲವು ಬಾರಿ ಮಹಿಳೆಯರಿಗೆ ಅರಿವು ಮೂಡಿಸಿದೆ. ಆದರೂ ಆಧಾರ್ ಕಾರ್ಡ್ ಸಿಡಿಂಗ್ ಸಮಸ್ಯೆ, ಬ್ಯಾಂಕ್ ಖಾತೆ ನಿಷ್ಕ್ರಿಯ, ರೇಷನ್ ಕಾರ್ಡ್ ಅಪ್ಡೇಟ್ ಇತ್ಯಾದಿ ಸಮಸ್ಯೆಯಾಗಿದ್ದು, ಮಹಿಳೆಯರು ಇಂತಹ ದಾಖಲೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಸೂಚನೆ ನೀಡಲಾಗಿದೆ. ಯಾ ದಾಖಲೆಗಳು ಸರಿಯಾಗಿರುತ್ತವೋ ಅವರಿಗೆ ಮಾತ್ರ ಯೋಜನೆಯ ಹಣ ಜಮಾ ಆಗುತ್ತದೆ.
ಇನ್ನು ಹಣ ಬಂದಿರುವ ಬಗ್ಗೆ ಪರಿಶೀಲಿಸಲು ಮಹಿಳೆಯಡು DBT ಕರ್ನಾಟಕ ಎಂಬ ಆಪ್ ಡೌನ್ಲೋಟ್ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ನಿಮ್ಮ ಹೆಸರು ನಮೂದಿಸಿ ಹಣ ಜಮಾ ಆಗಿರುವ ಬಗ್ಗೆ ಪರಿಶೀಲಿಸಬಹುದು. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲದಿದ್ದರೆ ಸರ್ಕಾರದ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.