ನಿನ್ನೆಯಷ್ಟೇ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ ಮದುವೆಯಾಗಿದೆ. ಇರಾ ಖಾನ್ (Ira Khan) ಮತ್ತು ನೂಪುರ್ ಶಿಖಾರೆ (Nupur Shikhare) ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಫೋಟೋ ವೈರಲ್ ಆಗಲು ಕಾರಣ, ನೂಪುರ್ ಧರಿಸಿರುವ ಕಾಸ್ಟ್ಯೂಮ್
ಸಾಮಾನ್ಯವಾಗಿ ಮದುವೆಯಲ್ಲಿ ಲಕ್ಷಾಂತರ ಬೆಲೆ ಬಾಳು ಸೂಟ್ ಧರಿಸೋದು ವಾಡಿಕೆ. ಆದರೆ, ಮದುವೆಯ ಸಂದರ್ಭದಲ್ಲಿ ನೂಪುರ್ ಚಡ್ಡಿ ಮತ್ತು ಬನಿಯನ್ ಧರಿಸಿದ್ದಾರೆ. ಈ ಕಾಸ್ಟ್ಯೂಮ್ ನೋಡಿದ ಅಭಿಮಾನಿಗಳು ಇದ್ಯಾವ ರೀತಿಯ ದಿರಿಸು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.
ಮುಂಬೈನ ಖಾಸಗಿ ಹೋಟೆಲ್ನಲ್ಲಿ ಈ ಮದುವೆ (Wedding) ಅದ್ದೂರಿಯಾಗಿ ನೆರವೇರಿದ್ದು, ಇರಾ- ನೂಪುರ್ ಶಿಖಾರೆ ಜೋಡಿ ಮರಾಠಿ ಪದ್ಧತಿಯಂತೆ ಮದುವೆಯಾಗಿದ್ದಾರೆ. ಗುರುಹಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಇರಾ-ನೂಪುರ್ ಜೋಡಿ ಕಾಲಿಟ್ಟಿದ್ದಾರೆ.
ಆಮೀರ್ ಖಾನ್- ಮಾಜಿ ಮೊದಲ ಪತ್ನಿ ರೀನಾ ದತ್ತ ಅವರ ಪುತ್ರಿ ಇರಾ, ಕೋರ್ಟ್ ಮ್ಯಾರೇಜ್ ಜೊತೆಗೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಇರಾ ಖಾನ್- ನೂಪುರ್ ಮದುವೆ ನಡೆದಿದೆ. ಮದುವೆಯ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ಅಮೀರ್ ಖಾನ್ ಪುತ್ರಿ ಇರಾ ಖಾನ್ ಅವರು ನೂಪುರ್ ಶಿಖರೆ ಜೊತೆ ಹಸೆಮಣೆ ಏರಿದ್ದಾರೆ. ಸೆಲೆಬ್ರಿಟಿ ಜಿಮ್ ಟ್ರೈನರ್ ನೂಪುರ್ ಅವರೊಂದಿಗೆ ಮುಂಬೈನಲ್ಲಿ ತಾಜ್ ಎಂಡ್ಸ್ ಹೋಟೆಲ್ನಲ್ಲಿ ಇರಾ ಖಾನ್ ಮದುವೆಯಾಗಿದ್ದಾರೆ.
2022ರ ಸೆಪ್ಟೆಂಬರ್ನಲ್ಲಿ ನೂಪುರ್ ಶಿಖರೆ ಅವರು ಇರಾ ಖಾನ್ಗೆ ಮದುವೆಯಾಗೋ ಪ್ರಪೋಸ್ ಮಾಡಿದ್ದರು. ಸ್ಟಾರ್ ಹೀರೋನ ಪುತ್ರಿಯ ಜೊತೆ ನೂಪುರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ಸೆಲೆಬ್ರಿಟಿಗಳು ನವಜೋಡಿಗೆ ಶುಭಕೋರಿದರು. ರಾಜಸ್ಥಾನದ ಜೈಪುರದಲ್ಲಿ ಆರತಕ್ಷತೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಬಾಲಿವುಡ್ನ ಬಹುತೇಕ ಎಲ್ಲಾ ತಾರೆಯರು ಈ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.