ಲೈಂಗಿಕ್ರ ಕ್ರಿಯೆ ಬಗ್ಗೆ ಮಾತನಾಡಲು ಭಾರತದಲ್ಲಿ ಮಡಿವಂತಿಕೆ ಜಾಸ್ತಿ. ಆದರೆ, ಸಂತಾನೋತ್ಪತ್ತಿಗೆ ಅನಿವಾರ್ಯವಾದ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಈ ಕ್ರಿಯೆ ಪ್ರತಿಯೊಬ್ಬರಿಗೂ ಅಗತ್ಯವೆಂಬುವುದೂ ಎಲ್ಲರಿಗೂ ಗೊತ್ತು. ಈ ಬಗ್ಗೆ ಮಡಿವಂತಿಕೆ ಏನೇ ಇದ್ದರೂ, ಅರಿವಿನ ಅಗತ್ಯವೂ ಇದೆ. ಲೈಂಗಿಕ ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಗತ್ಯ. ‘ಸೆಕ್ಸ್ನಲ್ಲಿ ಸಕ್ರಿಯವಾಗಿ, ನಿಯಮಿತವಾಗಿ, ಒಳ್ಳೆ ಮನಸ್ಸಿನಿಂದ ಭಾಗಿಯಾದರೆ ಹೃದ್ರೋಗವೇ ಬರುವುದಿಲ್ಲ,’ ಎಂದು ಸಂಶೋಧನೆಯೊಂದು ದೃಢಪಡಿಸಿದೆ.
ಮೂಳೆ ಹಾಗೂ ಮಾಂಸ ಖಂಡಗಳ ಬಲಗೊಳುತ್ವೆ: ಸೆಕ್ಸ್ ವ್ಯಾಯಾಮದ ಒಂದು ಒಳ್ಳೆ ವಿಧಾನ. ಅಷ್ಟೆ ಅಲ್ಲ ಅದೊಂದು ಶಾರೀರಿಕ ಕ್ರಿಯೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶರೀರದಲ್ಲಿ ಆಗುವಂತಹಾ ಬದಲಾವಣೆಗಳು ವರ್ಕ್ಔಟ್ ಮಾಡುವಾಗಲೂ ಆಗುತ್ತದೆ. ಅಂದ್ರೆ ಸೆಕ್ಸ್ ಹಾಗೂ ವರ್ಕ್ ಔಟ್ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿದಿನ ಸೆಕ್ಸ್ ಮಾಡೋದ್ರಿಂದ ದೇಹಕ್ಕೆ ಒಂದು ಒಳ್ಳೆ ವ್ಯಾಯಾಮ. ಜೊತೆಗೆ ಮೂಳೆ ಹಾಗೂ ಮಾಂಸ ಖಂಡಗಳು ಬಲಗೊಳ್ಳುತ್ತವೆ. ಸೆಕ್ಸ್ ಮಾಡೋದರಿಂದ ಮೂಳೆಗಳು ಗಟ್ಟಿಯಾಗುವುದಲ್ಲದೆ ಮಾಂಸಖಂಡಗಳೂ ಬಲಗೊಳ್ಳುತ್ತವೆ.
ಸೆಕ್ಸ್ ನೋವು ನಿವಾರಣೆಯ ಶಕ್ತಿ: ಇವತ್ತಾ… ಇವತ್ತು ನನಗೆ ತುಂಬಾ ತಲೆ ನೋವು, ಮೈಕೈ ನೋವು ಇವತ್ತು ಬೇಡ ನಾಳೆ ಮಾಡೋಣ ಅನ್ನೋ ಮಾತೇ ಬರೋದಿಲ್ಲ. ಯಾಕಂದ್ರೆ, ಲೈಂಗಿಕ ಕ್ರಿಯೇಯ ವೇಳೆ ಗಂಡು ಹಾಗೂ ಹೆಣ್ಣಿನ ದೇಹದಲ್ಲಿ ಇಂಡಾರ್ಫಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಅದು ನೋವು ನಿವಾರಕ ಶಕ್ತಿಯಾಗಿ ದೇಹದಲ್ಲಿ ಕೆಲಸ ಮಾಡುತ್ತದೆ. ಅಲ್ಲದೇ ಪ್ರತಿ ದಿನ ಸೆಕ್ಸ್ ಮಾಡೋದ್ರಿಂದ ಮಹಿಳೆಯರಿಗೆ ಹೆಚ್ಚಿನ ಲಾಭ. ಮಹಿಳೆಯರು ಪ್ರತಿ ದಿನ ಹಾಸಿಗೆ ಮೇಲೆ ಸೆಕ್ಸ್ ಎಂಬ ವ್ಯಾಯಾಮ ಮಾಡುದ್ರೆ ಫರ್ಟಿಲಿಟಿ ಪವರ್ ಹೆಚ್ಚುತ್ತದೆ.
ಫ್ರಸ್ಟೆಟ್ನ ಸುರಕ್ಷೆ : ದಂಪತಿಗಳು ಲೈಂಗಿಕ ಕ್ರಿಯೆಯಲ್ಲಿದ್ದಾಗ ಉತ್ಪತ್ತಿಯಾಗುವ ದ್ರವವು ಬಹುತೇಕ ಫ್ರಸ್ಟೆಟ್ ಗ್ರಂಥಿಯಿಂದ ಬಿಡುಗಡೆಗೊಳ್ಳುತ್ತೆ. ಇಂತಹಾ ಸಂದರ್ಭದಲ್ಲಿ ಇಜೈಕ್ಯುಲೇಶನ್ ಪ್ರಕ್ರಿಯೆ ನಿಂತು ಹೋದರೆ ಆ ದ್ರವ ಗ್ರಂಥಿಗಳಲ್ಲಿಯೇ ಉಳಿಯುತ್ತದೆ.
ಒತ್ತಡದಿಂದ ಮುಕ್ತಿ: ಒತ್ತಡದಲ್ಲಿರುವವರಿಗೆ ಸೆಕ್ಸ್ ರಾಮಬಾಣ. ದಿನಾಲೂ ಲೈಂಗಿಕ ಕ್ರಿಯೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂಬ ಮಾತಿದೆ. ಸೆಕ್ಸ್ ವೇಳೆ ಶರೀರದಲ್ಲಿ ಡೋಪಮೈನ್ ಎನ್ನುವ ಪದಾರ್ಥ ಉತ್ಪತ್ತಿಯಾಗುತ್ತದೆ. ಅದು ದೇಹದಲ್ಲಿ ಒತ್ತಡವನ್ನ ತರುವ ಹಾರ್ಮೋನ್ಗಳ ಜೊತೆ ಗುದ್ದಾಡುತ್ತದೆ. ಸಾಲದಕ್ಕೆ ಸೆಕ್ಸ್ ಟೈಂನಲ್ಲಿ ಇಂಟ್ರಾಫಿನ್ ಹಾಗೂ ಆಕ್ಸಿಟಾಕ್ಸಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗೋದ್ರಿಂದ ಅದು ದೇಹ ಹಾಗೂ ಮಾನಸಿಕ ಒತ್ತಡವನ್ನ ಕಡಿಮೆ ಮಾಡುತ್ತದೆ.
ಕಾಮಕೇಳಿಯ ಸಮಯದಲ್ಲಿ ಹೃದಯದ ಬಡಿತ ಹೆಚ್ಚುತ್ತದೆ ಹಾಗೂ ಮೆದುಳು ಮತ್ತು ಜನನಾಂಗಗಳಿಗೆ ತಲುಪುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಅಷ್ಟೇ ಅಲ್ಲ, ಹೊಸರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ನಿದ್ದೆ ಬರದೇ ಇದ್ದರೆ ಇನ್ನು ಮೇಲೆ ನಿದ್ದೆಮಾತ್ರೆ ಸೇವಿಸಬೇಕಾಗಿಲ್ಲ! ಬದಲಿಗೆ ಈ ಕ್ರಿಯೆಯ ಮೂಲಕ ಬಿಡುಗಡೆಯಾಗುವ ಆಕ್ಸಿಟೋಸಿನ್ ಹಾಗೂ ಪ್ರೋಲ್ಯಾಕ್ಟಿನ್ ಎಂಬ ರಸದೂತಗಳು ಮೆದುಳಿಗೆ ಹೆಚ್ಚಿನ ನಿರಾಳತೆ ನೀಡಿ ಗಾಢ ನಿದ್ದೆ ಆವರಿಸಲು ನೆರವಾಗುತ್ತವೆ.
ಲೈಂಗಿಕ ಕ್ರಿಯೆಗೆ ಸಮಾನವಾದಿ ಇತರೆ ಚಟುವಟಿಕೆಗಳಲ್ಲಿ ದಂಪತಿ ಭಾಗಿಯಾಗುವುದು ಅತ್ಯುತ್ತಮವೆಂದು ಈ ಸಂಶೋಧನೆಯಿಂದ ಸಾಬೀತಾಗಿದೆ. ಆದರೆ, ದಾಂಪತ್ಯದಲ್ಲಿ ಹೊಂದಾಣಿಕೆ, ಪ್ರೀತಿ ಹೆಚ್ಚಲು ಆಗಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಅಗತ್ಯವಿದೆ ಎನ್ನುವುದನ್ನು ಮಾತ್ರ ಈ ಸಂಶೋಧನೆ ಸ್ಪಷ್ಟಪಡಿಸಿದೆ.