ಈರುಳ್ಳಿ ಸಾಮಾನ್ಯವಾಗಿ ದ್ವೈವಾರ್ಷಿಕ ಅಥವಾ ವರ್ಷವಿಡಿ ಬೆಳೆಯುವ ಸಸ್ಯವಾಗಿದೆ. ಸಾಮಾನ್ಯವಾಗಿ ವರ್ಷವಿಡಿ ಲಭ್ಯವಿರುತ್ತದೆ. ವಸಂತ ಮತ್ತು ಶರತ್ಕಾಲದ ನಡುವೆ ಬೆಳೆಯಲಾಗುತ್ತದೆ. ಉಳಿದ ತಿಂಗಳುಗಳಲ್ಲಿ ಸಂಗ್ರಹಿಸಲಾಗುವುದು.ಈರುಳ್ಳಿಯ ವೈಜ್ಞಾನಿಕ ಹೆಸರು ಅಲಿಯಮ್ ಸೆಫಾ(Allium sepa).
ಪ್ರಪಂಚದಲ್ಲಿ ಸಾಮಾನ್ಯವಾಗಿ ಈರುಳ್ಳಿಯನ್ನು ಮೂರು ಬಣ್ಣಗಳಲ್ಲಿ ಬೆಳೆಯಲಾಗುತ್ತದೆ
ಇದರ ಸಿಪ್ಪೆ ಗುಲಾಬಿ(ಹಳದಿ) / ಕಂದು ಅಥವಾ ತಿಳಿ ಚಿನ್ನದ ಬಣ್ಣವನ್ನು ಹೊಂದಿರುತ್ತದೆ.ಇದು ಬಿಳಿ ಮತ್ತು ಕೆಂಪು ಈರುಳ್ಳಿಗಿಂತ ಬಲವಾದ, ತೀಕ್ಷಣವಾದ ಪರಿಮಳವನ್ನು ಹೊಂದಿರುತ್ತದೆ.ಇದಕ್ಕೆ ಕಾರಣ ಇದು ಹೆಚ್ಚಿನ ಸಲ್ಫರ್ (ಗಂಧಕ) ಅಂಶವನ್ನು ಹೊಂದಿರುತ್ತದೆ.
ಹಳದಿ ಅಥವಾ ಗುಲಾಬಿ ಈರುಳ್ಳಿಯನ್ನು ಉತ್ತರ ಯುರೋಪಿನಲ್ಲಿ ಜಾಸ್ತಿ ಬೆಳೆಯಲಾಗುತ್ತದೆ. ಇವುಗಳನ್ನು ತಂಪಾದ ಕೋಣೆಯ ಉಷ್ಣಾಂಶದಲ್ಲಿ ಕತ್ತಲು ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ. ಶೇಕರಣೆಗಾಗಿ ಅವುಗಳನ್ನು ಕಾಗದದಲ್ಲಿ ಸುತ್ತಿ ಶೀತಲಿಕರಣದಲ್ಲಿ (ರೆಫ್ರಿಜರೇಟರ್) ಇರಿಸಲಾಗುತ್ತದೆ.ಕತ್ತರಿಸಿದ ಅಥವಾ ಸಿಪ್ಪೆ ಸುಲಿದ ಈರುಳ್ಳಿಯನ್ನು ರೆಫ್ರಿಜರೇಟರ್ ನಲ್ಲಿ ಪ್ಲಾಸ್ಟಿಕ್ ನಲ್ಲಿ ಇರಿಸಬೇಕಾಗುತ್ತದೆ.ಆದರೆ ಅವು ಕೆಲವು ದಿನಗಳವರೆಗೆ ಮಾತ್ರ ಇರುತ್ತವೆ.
ಇವುಗಳು ಪ್ರೆಂಚ್ ಈರುಳ್ಳಿ ಸೂಪ್,ಇತರ ಸೂಪ್ ಗಳು,ಸ್ಟ್ರೂಗಳು, ಬ್ರೈಸ್ ಗಳು,ಸಾಟಿಡ್ ಭಕ್ಷಗಳು ಮತ್ತು ಶಿಶ್ ಕಬಾಬ್ಗಳಿಗೆ ಸೂಕ್ತವಾಗಿವೆ.ಈ ಈರುಳ್ಳಿ ಯು ಈ ಭಕ್ಷಗಳಿಗೆ ಸಿಹಿ ಪರಿಮಳವನ್ನು ನೀಡುತ್ತದೆ.
ಯುರೋಪಿಯನ್ ದೇಶಗಳಲ್ಲಿ ಇದನ್ನು ನೇರಳೆ ಈರುಳ್ಳಿ ಎಂದು ಕರೆಯಲಾಗುತ್ತದೆ.ಇವುಗಳನ್ನು ಜಾಸ್ತಿ ಏಶಿಯನ್ ದೇಶಗಳಲ್ಲಿ ಬೆಳೆದು, ಭಕ್ಷಗಳಲ್ಲಿ ಉಪಯೋಗಿಸುತ್ತಾರೆ.ಇದು ಹಳದಿ ಈರುಳ್ಳಿ ಗಿಂತ ಸಿಹಿ ಪರಿಮಳವನ್ನು ನೀಡುತ್ತದೆ.ಇದಕ್ಕೆ ಕಾರಣ ಇದರಲ್ಲಿರುವ ಕಡಿಮೆ ಮಟ್ಟದ ಪೈರುವಿಕ್ ಆಮ್ಲ ಮತ್ತು ಸಲ್ಫರ್(ಗಂಧಕ)ದ ಅಂಶ. ಇದನ್ನು ಹೆಚ್ಚಾಗಿ ಹಸಿಯಾಗಿಯೇ ತಿನ್ನುತ್ತಾರೆ.ಇದನ್ನು ಜಾಸ್ತಿ ಸಲಾಡ್ ಗಳಲ್ಲಿ ಉಪಯೋಗಿಸುತ್ತಾರೆ.
ಇವುಗಳನ್ನು ಮೆಕ್ಸಿಕನ್ ಪಾಕ ಪದ್ಧತಿಯಲ್ಲಿ ಜಾಸ್ತಿ ಉಪಯೋಗಿಸುತ್ತಾರೆ.ಇವು ಕೆಂಪು ಈರುಳ್ಳಿಯಂತೆಯೇ ಹೆಚ್ಚಿನ ಸಕ್ಕರೆ ಮತ್ತು ಕಡಿಮೆ ಸಲ್ಫರ್( ಗಂಧಕ) ಅಂಶವನ್ನು ಹೊಂದಿರುತ್ತದೆ. ಅದ್ದರಿಂದ ತುಲನಾತ್ಮಕವಾಗಿ ಕಡಿಮೆ shelf life ನ್ನು (ಉತ್ತಮ ಸ್ಥಿತಿ ಮತ್ತು ಇದನ್ನು ಬಳಸಬಹುದಾದ ಸಮಯ) ಹೊಂದಿರುತ್ತದೆ. ಬಿಳಿ ಈರುಳ್ಳಿಯನ್ನು ಮೆಕ್ಷಿಕನ್,ಅಮೇರಿಕನ್ ಭಕ್ಷಗಳಲ್ಲಿ ಜಾಸ್ತಿ ಉಪಯೋಗಿಸಲಾಗುತ್ತದೆ. ಸಲಾಡ್ ಗಳಿಗೆ ಹೇಳಿ ಮಾಡಿಸಿದ ಈರುಳ್ಳಿ ಬಿಳಿ ಈರುಳ್ಳಿ. ಇವುಗಳನ್ನು ಬೇಯಿಸದೇ ಸಲಾಡ್ ಗಳಿಗೆ ಬಳಸಲಾಗುತ್ತದೆ.