ಬೇಸಿಗೆಗಾಲದಲ್ಲಿ ನುಗ್ಗೆಕಾಯಿ ಹೆಚ್ಚಾಗಿ ಕಾಣಬಹುದು, ಪೋಷಕಾಂಶಭರಿತ ನುಗ್ಗೆಕಾಯಿಯನ್ನು ಸಾರು, ಪಲ್ಯ, ಗೊಜ್ಜುಗಳಲ್ಲಿ ಬಳಸಲಾಗುತ್ತದೆ.
ನಿಮ್ಮ ಆಹಾರದಲ್ಲಿ ನುಗ್ಗೆಕಾಯಿ ಸೇರಿಸುವುದರಿಂದ ಸರಳ ಮತ್ತು ನೈಸರ್ಗಿಕ ರೀತಿಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಸುಡುವ ಶಾಖದಲ್ಲಿ ಹೈಡ್ರೀಕರಿಸಿದ ಮತ್ತು ತಾಜಾವಾಗಿರಲು ಸಹಾಯ ಮಾಡುವ ಆಹಾರವನ್ನು ತಿನ್ನುವುದು ಬಹಳ ಮುಖ್ಯ. ಇದಕ್ಕೆ ನುಗ್ಗೆಕಾಯಿ ಸಹಾಯ ಮಾಡುತ್ತದೆ. ಉದ್ದವಾಗಿ ಹಸಿರುಬಣ್ಣದಲ್ಲಿರುವ ನುಗ್ಗೆಕಾಯಿಯನ್ನು ತುಂಡು ತುಂಡಾಗಿ ಮಾಡಿ ಕರ್ರಿ, ಸಾರು, ಸೂಪ್, ಸಲಾಡ್, ಉಪ್ಪಿನಕಾಯಿಯಂತೆ ತಯಾರಿಸಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮವಾಗಿರುತ್ತದೆ.
IPL 2024: ಮಳೆಯಿಂದ ಪಂದ್ಯ ರದ್ದು.. ಪ್ಲೇ ಆಫ್ ಗೆ ಲಗ್ಗೆಯಿಟ್ಟ SRH.. ಟೂರ್ನಿಗೆ ವಿದಾಯ ಹೇಳಿದ ಗುಜರಾತ್!
ನುಗ್ಗೆಕಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಕೆ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳು, ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳಂತಹ ಅಗತ್ಯ ಪೋಷಕಾಂಶಗಳು ಇರುತ್ತದೆ. ಇಷ್ಟೆಲ್ಲಾ ಪೋಷಕಾಂಶವುಳ್ಳ ನುಗ್ಗೆಕಾಯಿ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿಯೋಣ. ಬೇಸಿಗೆಯಲ್ಲಿ ನುಗ್ಗೆಕಾಯಿ ಸೇವನೆಯಿಂದ 7 ಆರೋಗ್ಯಕರ ಪ್ರಯೋಜನಗಳು
1.ಉತ್ತಮ ಜೀರ್ಣಕ್ರಿಯೆ: ನುಗ್ಗೆಕಾಯಿಯಲ್ಲಿ ಅಪಾರವಾದ ಫೈಬರ್, ವಿಟಮಿನ್ ಗಳು ಇರುತ್ತದೆ. ಇದರಿಂದ ನಮ್ಮ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ವಿಟಮಿನ್ ಬಿ12, ಥಿಯಾಮೈನ್ (thiamine) ಮತ್ತು ನಿಯಾಸಿನ್ (niacin) ಎಂಬ ಅಂಶ ಹೆಚ್ಚು ಉತ್ಪಾದನೆಗೆ ಸಹಾಯ ಮಾಡಿ ಜೀರ್ಣಕ್ರಿಯೆಗೆ ಮತ್ತಷ್ಟು ಶಕ್ತಿ ತುಂಬುತ್ತದೆ. ಅಜೀರ್ಣದಂತಹ ಸಮಸ್ಯೆಯನ್ನು ದೂರ ಮಾಡಲು ಸಹ ಸಹಾಯ ಮಾಡುತ್ತದೆ.
3.ರೋಗನಿರೋಧಕ ಶಕ್ತಿ ಹೆಚ್ಚಳ: ನುಗ್ಗೆಕಾಯಿಯಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಅಷ್ಟೇಅಲ್ಲ ಅಸ್ತಮಾ ವಿರುದ್ಧ ರಕ್ಷಣೆ ಹಾಗೂ ಉಸಿರಾಟ ಸಮಸ್ಯೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ನುಗ್ಗೆಕಾಯಿ ಪರಿಣಾಮಕಾರಿಯಾದ ತರಕಾರಿಯಾಗಿದೆ
4.ಮೊಡವೆಗಳ ವಿರುದ್ಧ ಹೋರಾಟ: ನುಗ್ಗೆಕಾಯಿಯಲ್ಲಿರುವ ಪ್ರೋಟೀನ್ ಚರ್ಮದ ಆರೋಗ್ಯ ಉತ್ತಮವಾಗಿರಲು ಸಹಾಯ ಮಾಡುತ್ತದೆ. ರಕ್ತ ಶುದ್ಧೀಕರಿಸುವ ಜೊತೆಗೆ ಮೊಡವೆಗಳು, ಕಲೆಗಳು ಆಗದಂತೆ ತಡೆಯುತ್ತದೆ.
5.ರಕ್ತ ಶುದ್ಧೀಕರಣ: ನುಗ್ಗೆಕಾಯಿಯು ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರ ಹಾಕಲು ಸಹಕರಿಸುತ್ತದೆ. ಹಾಗೇ ರಕ್ತವನ್ನು ಶುದ್ಧೀಕರಿಸಿ, ಶುದ್ಧ ರಕ್ತಪರಿಚಲನೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ನಿರ್ವಿಶೀಕರಣ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ, ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸರಳ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ. 6.ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಆರೋಗ್ಯಕರವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನುಗ್ಗೆಕಾಯಿ ಸಹಾಯ ಮಾಡುತ್ತದೆ. ಅಧ್ಯಯನಗಳು ಹೇಳುವ ಪ್ರಕಾರ ಇನ್ಸುಲಿನ್ ದಕ್ಷತೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಮಧುಮೇಹವನ್ನು ನಿಯಂತ್ರಿಸಲು ನುಗ್ಗೆಕಾಯಿ ಸೇವನೆ ಉತ್ತಮ ಎನ್ನಲಾಗಿದೆ.
7.ಹೈಡ್ರೇಟಿಂಗ್ ತರಕಾರಿ: ನೀರಿನಾಂಶ ಹೆಚ್ಚಿರುವ ನುಗ್ಗೆಕಾಯಿ ಸೇವನೆಯಿಂದ ದೇಹದಲ್ಲಿ ಜಲಸಂಚಯನಕ್ಕೆ ಸಹಾಯವಾಗುತ್ತದೆ. ಬೇಸಿಗೆಗಾಲದಲ್ಲಿ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ನುಗ್ಗೆಕಾಯಿ ಸಹಾಯ ಮಾಡುವುದರ ಜೊತೆಗೆ ದೇಹಕ್ಕೆ ಶಕ್ತಿ ತುಂಬುತ್ತದೆ. ನಿಮ್ಮ ಆಹಾರ ಪದ್ಧತಿಯಲ್ಲಿ ನಿಯಮಿತವಾಗಿ ನುಗ್ಗೆಕಾಯಿಯನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.