ಜಿಲೇಬಿ ಭಾರತದ ಪ್ರಸಿದ್ಧ ರುಚಿಕರವಾದ ಸಿಹಿ ತಿಂಡಿಯಾಗಿದ್ದು, ಇದು ಹೆಚ್ಚಾಗಿ ಉತ್ತರ ಭಾರತದಲ್ಲಿ ಪ್ರತಿದಿನ ಬಳಸುವ ಸಿಹಿ ತಿಂಡಿ. ದೇಶಾದ್ಯಂತ ಲಭ್ಯವಿದೆ. ಮೈದಾ, ಜೋಳದ ಹಿಟ್ಟು, ತುಪ್ಪ, ಸಕ್ಕರೆ, ಅಡುಗೆ ಸೋಡಾ, ಮೊಸರು, ಕೇಸರಿಯಿಂದ ಈ ಸಿಹಿಯನ್ನು ತಯಾರಿಸಲಾಗುತ್ತದೆ ಮತ್ತು ಭಾರತೀಯ ಹಬ್ಬಗಳ ಸಮಯದಲ್ಲಿ ತಯಾರಿಸಲಾಗುತ್ತದೆ ಮತ್ತು ಸಕ್ಕರ ಸಿರಪ್ನಲ್ಲಿ ರಸಗುಲ್ಲಾದಂತೆ ಡಿಪ್ ಮಾಡಲಾಗುತ್ತದೆ.
ತಜ್ಞರು ಹೇಳುವ ಪ್ರಕಾರ ಈ ಫುಡ್ ಕಾಂಬಿನೇಷನ್, ಒತ್ತಡದ ಹಾರ್ಮೋನುಗಳ ಮೇಲೆ ಮ್ಯಾಜಿಕ್ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ನೀವು ಬಿಸಿ ಹಾಲಿನೊಂದಿಗೆ ಜಿಲೇಬಿಯನ್ನು ಸೇವಿಸಿದಾಗ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಂಬಾ ತೆಳ್ಳಗಿರುವವರು ಸ್ವಲ್ಪ ತೂಕವನ್ನು ಪಡೆಯಲು ಈ ಸಂಯೋಜನೆಯನ್ನು ಸೇವಿಸಬಹುದು. ಚಳಿಗಾಲದಲ್ಲಿ ಬಿಸಿ ಹಾಲಿನೊಂದಿಗೆ ಜಿಲೇಬಿಯನ್ನು ಸೇವಿಸುವುದರಿಂದ ಅಸ್ತಮಾದಿಂದ ಮುಕ್ತಿ ಪಡೆಯಲು ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮೈಗ್ರೇನ್ ಪರಿಹರಿಸಲು ಪ್ರಯೋಜನಕಾರಿ: ಹಾಲು ಮತ್ತು ಜಿಲೇಬಿ, ತಲೆನೋವು ಮತ್ತು ಒತ್ತಡಕ್ಕೆ ಪರಿಣಾಮಕಾರಿ ಚಿಕಿತ್ಸೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ದೂಧ್-ಜಲೇಬಿಯನ್ನು ತಿನ್ನುವುದು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹಾಲಿನಲ್ಲಿರುವ ಪೋಷಕಾಂಶಗಳು ತಲೆನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಒತ್ತಡದಲ್ಲಿದ್ದಾಗಲೆಲ್ಲಾ ನೀವು ಈ ಸಂಯೋಜನೆಯನ್ನು ಹೊಂದಬಹುದು.
ಶೀತದಿಂದ ರಕ್ಷಿಸುತ್ತದೆ: ಶೀತ ಮತ್ತು ಕೆಮ್ಮು ಮುಂತಾದ ಋತುಮಾನದ ಕಾಯಿಲೆಗಳನ್ನು ಬೆಚ್ಚಗಿನ ಹಾಲಿನಲ್ಲಿ ನೆನೆಸಿದ ಬಿಸಿ ಜಿಲೇಬಿ ಸೇವನೆಯಿಂದ ಗುಣಪಡಿಸಬಹುದು. ಈ ರುಚಿಕರವಾದ ಸಂಯೋಜನೆಯು ಒರಟಾದ ಚರ್ಮವನ್ನು (Skin) ಗುಣಪಡಿಸಲು ಹೆಸರುವಾಸಿಯಾಗಿದೆ. ಚಳಿಗಾಲದಲ್ಲಿ ದೂದ್-ಜಲೇಬಿ ಜನಪ್ರಿಯವಾಗಲು ಇದು ಮುಖ್ಯ ಕಾರಣವಾಗಿದೆ.
ತೂಕ ಹೆಚ್ಚಿಸಿಕೊಳ್ಳುವುದು: ತೂಕ (Weight) ಹೆಚ್ಚಿಸಿಕೊಳ್ಳಲು ನೀವು ಸುಲಭ ಮಾರ್ಗ ಹುಡುಕುತ್ತಿದ್ದರೆ ಚಳಿಗಾಲದಲ್ಲಿ ದೂದ್ ಜಿಲೇಬಿ ತಿನ್ನೋದು ಒಳ್ಳೆಯದು. ಇದು ನಿಮಗೆ ಪರಿಪೂರ್ಣವಾದ ಊಟವಾಗಿದೆ. ಜಿಲೇಬಿಯನ್ನು ಸಕ್ಕರೆ ಪಾಕದಲ್ಲಿ ಹುರಿದು ಅದ್ದಿ ತಯಾರಿಸುವುದರಿಂದ ನೈಸರ್ಗಿಕವಾಗಿ ತೂಕವನ್ನು ಹೆಚ್ಚಿಸಬಹುದು. ಹೆಚ್ಚಿನ ಸಂಖ್ಯೆಯ ಕ್ಯಾಲೋರಿಗಳು ಮತ್ತು ಪ್ರಯೋಜನಕಾರಿ ಪೋಷಕಾಂಶಗಳನ್ನು ಹೊಂದಿರುವ ಕಾರಣ ಯಾವಾಗಲೂ ಸಂಪೂರ್ಣ ಹಾಲನ್ನು ಆರಿಸಿ.
ಹಾಲು, ಜಿಲೇಬಿಯನ್ನು ಯಾವಾಗ ಸೇವಿಸಬೇಕು ?
ಹಾಲು ಮತ್ತು ಜಿಲೇಬಿ ಆರೋಗ್ಯಕ್ಕೆ (Health) ಉತ್ತಮವಾಗಿದ್ದರೂ ಅದನ್ನು ಸರಿಯಾದ ಸಮಯದಲ್ಲಿ ಸೇವಿಸಿದರಷ್ಟೇ ಅದರ ಸರಿಯಾದ ಪ್ರಯೋಜನ ಪಡಲು ಸಾಧ್ಯ. ಈ ಸಂಯೋಜನೆಯನ್ನು ಬೆಳಗಿನ ಉಪಾಹಾರವಾಗಿ (Breakfast) ಸೇವಿಸಬೇಕು ಎಂದು ತಜ್ಞರು ನಂಬುತ್ತಾರೆ.
ದೂದ್–ಜಲೇಬಿ ಮಾಡುವುದು ಹೇಗೆ ?
ಸ್ವಲ್ಪ ಬಿಸಿ ಮತ್ತು ರಸಭರಿತವಾದ ಜಿಲೇಬಿಗಳನ್ನು ಎತ್ತರದ ಗಾಜಿನಲ್ಲಿ ಹಾಕಿ ಮತ್ತು ಬೆಚ್ಚಗಿನ ಹಾಲನ್ನು ತುಂಬಿಸಿ. ಅದರ ಮೇಲೆ ತಾಜಾ ಕೆನೆ ಅಥವಾ ಮಲೈ ದಪ್ಪ ಬೆಣ್ಣೆಯೊಂದಿಗೆ ಆನಂದಿಸಿ. ನೀವು ಹತ್ತಿರದ ಸಿಹಿತಿಂಡಿ ಅಂಗಡಿಯಿಂದ ಜಿಲೇಬಿ ತರಬಹುದು ಅಥವಾ ಮನೆಯಲ್ಲಿ ಮಾಡಬಹುದು.