ಗೋಡಂಬಿಯು ನೋಡಲು ಚಿಕ್ಕದಾಗಿದ್ದರೂ, ಅದನ್ನು ತಿನ್ನಲು ಅಷ್ಟೇ ರುಚಿಕರವಾಗಿರುವಾಗಿರುತ್ತೆ. ಗೋಂಡಬಿಯನ್ನು ಚಿಕ್ಕ ಮಕ್ಕಳಿಂದ ವಯಸ್ಸಾದವರವರೆಗೂ ಇಷ್ಟಪಡುತ್ತಾರೆ ಎಂದರೆ ತಪ್ಪಾಗಲಾರದು. 3-4 ಗೋಡಂಬಿಯನ್ನು ಸೇವಿಸುವುದರಿಂದ ಅನೇಕ ಲಾಭಗಳಿವೆ.
ತೂಕ ಇಳಿಕೆ: ಪ್ರತಿನಿತ್ಯ ಗೋಡಂಬಿಯನ್ನು ತಿನ್ನುವುದರಿಂದ ತೂಕವನ್ನು ಇಳಿಸಲು ಸಹಾಯವಾಗುತ್ತದೆ. ನಿಯಮಿತವಾಗಿ ಗೋಡಂಬಿಯನ್ನು ಸೇವಿಸಬೇಕು. ಇದರಿಂದಾಗಿ ಚಯಾಪಚಯಯವನ್ನು ವೇಗಗೊಳಿಸಲು ಹಾಗೂ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಉತ್ತಮ ತಿಂಡಿಯಾಗಿದೆ.
ಕಾಂತಿಯುಕ್ತ ಚರ್ಮ: ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಗೊಂಡಬಿಯನ್ನು ತಿನ್ನುವುದಷ್ಟೇ ಅಲ್ಲದೇ ಗೋಡಂಬಿ ಎಣ್ಣೆಯನ್ನು ಹಚ್ಚುವುದರಿಂದ ನಿಮ್ಮ ಚರ್ಮವು ಕಾಂತಿಯುಕ್ತವಾದ ಹೊಳಪನ್ನು ನೀಡುತ್ತದೆ. ಈ ಎಣ್ಣೆಯಲ್ಲಿ ಮೆಗ್ನೀಷಿಯಮ್, ಕಬ್ಬಿಣ ಹಾಗೂ ರಂಜಕಗಳು ಹೇರಳವಾಗಿದೆ.
ಕಣ್ಣಿಗೆ ಒಳ್ಳೆಯದು: ಗೋಡಂಬಿಯಲ್ಲಿ ಕಂಡು ಬರುವ ಲುಟೀನ್ ಹಾಗೂ ಇತರೆ ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಸಾಂದ್ರಯತೆಯಿಂದಾಗಿ ಕಣ್ಣುಗಳು ಹಾನಿಯಾಗುವುದನ್ನು ತಪ್ಪಿಸುತ್ತದೆ. ಗೋಡಂಬಿಯನ್ನು ನಿಯಮಿತವಾಗಿ ತಿನ್ನುವುದರಿಂದ ಅದು ಸೂರ್ಯನ ಕಿರಣಗಳ ಪ್ರಭಾವದಿಂದ ನಿಮ್ಮ ಕಣ್ಣನ್ನು ರಕ್ಷಿಸುತ್ತದೆ.
ಮೈಗ್ರಿನ್ ಕಡಿಮೆ ಆಗುತ್ತೆ: ಮೆಗ್ನೀಷಿಯಮ್ ಕೊರತೆಯಿಂದಾಗಿ ಆರೋಗ್ಯದಲ್ಲಿ ವಿವಿಧ ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲೂ ಯುವಜನರು ಹೆಚ್ಚಾಗಿ ರಕ್ತದೊತ್ತಡ ಹಾಗೂ ಮೈಗ್ರಿನ್ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಗೋಡಂಬಿಯನ್ನು ಸೇವಿಸಿ. ಇದರ ಜೊತೆಗೆ ಗೋಡಂಬಿಯು ವಿಟಮಿನ್ಗಳ ಮೂಲವಾಗಿದೆ.
ಕ್ಯಾನ್ಸರ್ಗೆ ತಡೆ: ಗೋಡಂಬಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯವಾಗಿದೆ. ಗೋಡಂಬಿಯಲ್ಲಿರುವ ಪ್ರೋಆಂಥೋಸಯಾನಿಡಿನ್ಗಳು ದೇಹದಲ್ಲಿನ ಕ್ಯಾನ್ಸರ್ ಕೋಶಗಳ ಪುನರಾವರ್ತನೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಆರೋಗ್ಯಕರ ಹೃದಯ: ಗೋಡಂಬಿಯಲ್ಲಿರುವ ಮೊನೊಸಾಚುರೇಟೆಡ್ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತನಾಳಗಳನ್ನು ಆರೋಗ್ಯಕರವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.