ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿದ್ದು, ಹಾಗೆಯೇ ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ.
Karnataka By Election 2024: ನಿಖಿಲ್ ಕುಮಾರಸ್ವಾಮಿಯಿಂದ ಟೆಂಪಲ್ ರನ್!
ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇಂತಹ ಕೆಲ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಅದರಲ್ಲೂ ಹಿಂದೂಗಳು ತುಳಸಿಯನ್ನು ತುಂಬಾ ಪವಿತ್ರವೆಂದು ಭಾವಿಸುವರು. ತುಳಸಿ ಗಿಡದಲ್ಲಿ ದೇವದೇವತೆಗಳು ನೆಲೆಸಿರುವರು ಎಂದು ಪುರಾಣಗಳು ಕೂಡ ಹೇಳಿವೆ. ಅದೇ ರೀತಿಯಲ್ಲಿ ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಆಯುರ್ವೇದ ದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಾ ಇದೆ. ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ಹೇಳಲಾಗುತ್ತದೆ.
ಮುಂಜಾನೆಯೆದ್ದು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಹಲವು ಲಾಭಗಳಿವೆ
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ; ತುಳಸಿ ಎಲೆಯಲ್ಲಿ ಆ್ಯಂಟಿಆಕ್ಸಿಡಂಟ್ಗಳ ಅಂಶ ಹೆಚ್ಚು ಇರುತ್ತದೆ ಅದರ ಜೊತೆಗೆ ಅದರಲ್ಲಿರುವ ಸಾರಭೂತ ತೈಲ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಇದು ದೇಹಕ್ಕೆ ನೈಸರ್ಗಿಕವಾದ ರಕ್ಷಣಾ ಶಕ್ತಿಯನ್ನು ನೀಡುತ್ತದೆ. ಇದರ ಜೊತೆಗೆ ದೇಹದಲ್ಲಿರುವ ಬ್ಯಾಕ್ಟಿರಿಯಾ ಹಾಗೂ ವೈರಸ್ಗಳ ಜೊತೆಗೆ ಬಲವಾಗಿ ಹೋರಾಡುತ್ತದೆ.
ದೇಹವನ್ನು ಡಿಟಾಕ್ಸಿಫೈ ಮಾಡುತ್ತದೆ : ತುಳಸಿಯಲ್ಲಿ ನೈಸರ್ಗಿಕವಾಗಿಯೇ ದೇಹವನ್ನು ನಿರ್ವಿಷಗೊಳಿಸುವ ಅಂದ್ರೆ ಡಿಟಾಕ್ಸಿಫೈ ಮಾಡುವ ಶಕ್ತಿಯಿದೆ. ಇದು ಹೊಟ್ಟೆಯಲ್ಲಿರುವ ವಿಷಕಾರಿ ಅಂಶಗಳನ್ನು ಸ್ವಚ್ಛಗೊಳಿಸುತ್ತದೆ. ತುಳಸಿಯನ್ನು ನೀವು ಪ್ರತಿನಿತ್ಯ ತಪ್ಪದೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಿಮ್ಮ ಲಿವರ್ ಕಾರ್ಯಕ್ಷಮತೆಯೂ ಕೂಡ ಇನ್ನಷ್ಟು ಶಕ್ತಿಯುತಗೊಳ್ಳುತ್ತದೆ. ಜೀರ್ಣಶಕ್ತಿಯನ್ನು ಉತ್ತಮಗೊಳಿಸುವುದರ ಜೊತೆಗೆ ಒಟ್ಟಾರೆ ಆರೋಗ್ಯ ನಿರ್ವಹಣೆಯ ಮೇಲೆ ಪ್ರಮುಖ ಪಾತ್ರವಹಿಸುತ್ತದೆ.
ಆತಂಕ ಮತ್ತು ಒತ್ತಡಗಳನ್ನು ದೂರ ಮಾಡುತ್ತದೆ: ತುಳಸಿಯಲ್ಲಿ ಅಡಾಪ್ಟಜೆನಿಕ್ ಸಂಯುಕ್ತಗಳು ಹೆಚ್ಚು ಇರುವುದರಿಂದ ಇದು ನಿಮ್ಮ ನಿತ್ಯದ ಒತ್ತಡ, ದುಗುಡ ದುಮ್ಮಾನಗಳನ್ನು ಕೂಡ ದೂರ ಮಾಡುತ್ತದೆ. ಬೆಳಗ್ಗೆ ಎದ್ದು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದು ಹಾರ್ಮೊನ್ಸ್ಗಳ ಸಮತೋಲನ ಬಿಗಡಾಯಿಸುವಂತಹ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸನ್ನು ಸದಾ ಶಾಂತವಾಗಿ ಇಡುವಲ್ಲಿ ತುಳಸಿ ಎಲೆಗಳು ಬಹಳ ಸಹಾಯಕಾರಿ
ಉಸಿರಾಟದ ಆರೋಗ್ಯವನ್ನು ಸುಧಾರಿಸುತ್ತದೆ : ತುಳಸಿ ಎಲೆಯಲ್ಲಿ ಆ್ಯಂಟಿ ಮೈಕ್ರೊಬಿಯಲ್ ಅಂಶಗಳು ಇರುವುದರಿಂದ ಇದು ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿಗೆ ರಾಮಬಾಣ. ತುಳಸಿ ಎಲೆಗಳನ್ನು ನಿರಂತರವಾಗಿ ತಿನ್ನುವುದರಿಂದ ಕಫ, ಅಸ್ತಮಾ ಸೇರಿದಂತೆ ಹಲವಾರು ಉಸಿರಾಟದ ತೊಂದರೆಗಳು ಮಂಗಮಾಯವಾಗುತ್ತವೆ
ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡುತ್ತದೆ: ತುಳಸಿ ಎಲೆಗಳನ್ನು ತಿನ್ನುವುದರಿಂದ ಅದು ಇನ್ಸುಲಿನ್ ಸೆನ್ಸಿಟಿವಿಟಿಯನ್ನ ಸುಧಾರಿಸುತ್ತದೆ. ಅದು ಮಾತ್ರವಲ್ಲ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಇದು ಸಹಾಯಕಾರಿಯಾಗುತ್ತದೆ. ಇದನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿ ಗ್ಲುಕೋಸ್ ಬಿಡುಗಡೆಯ ಪ್ರಮಾಣವನ್ನು ಕುಗ್ಗಿಸುತ್ತದೆ ಎಂದು ಅನೇಕ ತಜ್ಞರು ಹೇಳುತ್ತಾರೆ