ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳನ್ನು ಒದಗಿಸುವ ಎಳನೀರು “ಅಮೃತ ಪಾನೀಯ” ಎಂದೇ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ರುಚಿ ಮಾತ್ರವಲ್ಲದೆ, ಎಳೆನೀರು ತನ್ನ ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗೂ ಸಹ ಪ್ರಸಿದ್ಧಿ ಎಂದರೆ ತಪ್ಪಾಗಲಾರದು.
ಮದ್ಯಪ್ರಿಯರಿಗೆ ಬಿಗ್ ಶಾಕ್… ಬೆಂಗಳೂರಿನಲ್ಲಿ ಇಂದಿನಿಂದ 5 ದಿನ ಸಿಗಲ್ಲ ಎಣ್ಣೆ…!
ಹೈದರಾಬಾದ್ನ ಬಂಜಾರಾ ಹಿಲ್ಸ್ನ ಕೇರ್ ಹಾಸ್ಪಿಟಲ್ಸ್ನ ಕ್ಲಿನಿಕಲ್ ಡಯೆಟಿಷಿಯನ್ ಜಿ ಸುಷ್ಮಾ ಅವರ ಪ್ರಕಾರ, ಬೇಸಿಗೆಯ ತಿಂಗಳುಗಳಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಎಳನೀರು ಅತ್ಯುತ್ತಮ ಆಯ್ಕೆಯಂತೆ.
ಎಳನೀರಿಂದಾಗುವ ಬೆನಿಫಿಟ್!?
ಹೈಡ್ರೇಟ್*:* ಇದು ನೈಸರ್ಗಿಕವಾಗಿ ಎಲೆಕ್ಟ್ರೋಲೈಟ್ ಹೊಂದಿರುವ ಸಮೃದ್ಧ ಪಾನೀಯವಾಗಿದ್ದು, ವ್ಯಾಯಾಮದ ನಂತರ ಅಥವಾ ಬಿಸಿ ವಾತಾವರಣದಲ್ಲಿ ದೇಹಕ್ಕೆ ನೀರಿನ ಅಂಶ ಒದಗಿಸಲು ಅತ್ಯುತ್ತಮ ಆಯ್ಕೆಯಾಗಿದೆ.
ಎಲೆಕ್ಟ್ರೋಲೈಟ್ಗಳ ಸಮತೋಲನ: ಇದರ ಪೊಟ್ಯಾಸಿಯಮ್ ಅಂಶವು ಬೆವರಿನ ಮೂಲಕ ಕಳೆದುಹೋದ ಎಲೆಕ್ಟ್ರೋಲೈಟ್ಗಳನ್ನು ಪುನಃ ತುಂಬಲು ಸಹಾಯ ಮಾಡುತ್ತದೆ ಹಾಗೂ ಸ್ನಾಯುವಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.
ರಕ್ತದೊತ್ತಡ ನಿಯಂತ್ರಣ: ಎಳೆನೀರಿನಲ್ಲಿರುವ ಪೋಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧಿಕ ರಕ್ತದೊತ್ತಡದ ಅಪಾಯವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ
ಹೃದಯದ ಆರೋಗ್ಯ: ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ಮತ್ತು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ
ಅನೇಕ ಹಣ್ಣಿನ ರಸಗಳಿಗೆ ಹೋಲಿಸಿದರೆ ಎಳನೀರಿನ್ಲಲಿ ಸಕ್ಕರೆಯಂಶ ಕಡಿಮೆಯಿರುತ್ತದೆ ಅಥವಾ ಇದು ನೈಸರ್ಗಿಕವಾದ ಸಿಹಿ ಅಂಶವನ್ನು ಮಾತ್ರ ಹೊಂದಿರುತ್ತದೆ. ಎಳನೀರಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (GI) ಹಣ್ಣಿನ ರಸಗಳು ಮತ್ತು ಸೋಡಾಗಳಿಗಿಂತ ಕಡಿಮೆಯಿರುತ್ತದೆ. ಅಂದರೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಧಾನಗತಿಯಲ್ಲಿ ಮಾತ್ರ ಹೆಚ್ಚಿಸುತ್ತದೆ.
ಆದಾಗ್ಯೂ, ಮಧುಮೇಹಿಗಳು ಮಿತವಾಗಿ ಎಳನೀರನ್ನು ಸೇವಿಸಬೇಕು.
ಗರ್ಭಾವಸ್ಥೆಯಲ್ಲಿ, ದೇಹದಲ್ಲಿ ಅಗತ್ಯವಾದಷ್ಟು ನೀರಿನಂಶ ವನ್ನು ಕಾಪಾಡಿಕೊಳ್ಳುವುದು ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆ ಎರಡಕ್ಕೂ ಮುಖ್ಯ..
ಎಳನೀರಿನಲ್ಲಿರುವ ಎಲೆಕ್ಟ್ರೋಲೈಟ್ಗಳು ನಿರ್ಜಲೀಕರಣವನ್ನು ತಡೆಗಟ್ಟಲು ಮತ್ತು ವಾಕರಿಕೆ ಮತ್ತು ಮಲಬದ್ಧತೆಯಂತಹ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ”