ಆರೋಗ್ಯಕರ ವಾಲ್ನಟ್ ಬೀಜಗಳು ಆರೋಗ್ಯಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಇದು ಸಹಾಯಕ. ವಾಲ್ನಟ್ ನಿಮ್ಮ ಮೆದುಳಿನ ಆರೋಗ್ಯದ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮ. ಹಾಗಿರುವಾಗ ವಾಲ್ನಟ್ಅನ್ನು ನೆನೆಸಿಟ್ಟು ಬಳಿಕ ಸೇವಿಸುವ ಮೂಲಕ ಆರೋಗ್ಯಕ್ಕೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯಕರ ಚರ್ಮ: ವಾಲ್ನಟ್ಗಳು ಆರೋಗ್ಯಕರ ಚರ್ಮಕ್ಕೆ ಸೂಪರ್ಫುಡ್ ಆಗಿದ್ದು, ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿವೆ, ಇವೆರಡೂ ಆರೋಗ್ಯಕರ, ಮೃದು ಮತ್ತು ಹೊಳೆಯುವ ಚರ್ಮಕ್ಕೆ ಹೆಸರುವಾಸಿಯಾಗಿವೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡೋದರಿಂದ ಆರೋಗ್ಯಕರ ಚರ್ಮ ನಿಮ್ಮದಾಗುತ್ತೆ.
ಕೂದಲಿಗೆ ಒಳ್ಳೆಯದು: ದೈನಂದಿನ ಆಹಾರದಲ್ಲಿ ವಾಲ್ನಟ್ಗಳ ಮತ್ತೊಂದು ಪ್ರಯೋಜನವೆಂದರೆ ಅವು ಕೂದಲಿಗೆ ಉತ್ತಮವಾಗಿವೆ. ಅವು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ ಮತ್ತು ನೆತ್ತಿಯನ್ನು ಪೋಷಿಸುತ್ತವೆ ಮತ್ತು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತವೆ ಮತ್ತು ಕೂದಲು ತೆಳ್ಳಗಾಗುವುದನ್ನು ಕಡಿಮೆ ಮಾಡುತ್ತವೆ.
ಚಯಾಪಚಯ ಕ್ರಿಯೆ ಸುಧಾರಿಸುತ್ತೆ: ವಾಲ್ನಟ್ಗಳಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ಚಯಾಪಚಯ ಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತೆ. ವಾಲ್ನಟ್ ನಲ್ಲಿ ನಾರಿನಾಂಶ ಇರೋದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತೆ, ಇದರಿಂದ ಪದೇ ಪದೇ ಹಸಿವಾಗೋದಿಲ್ಲ.
ಮೂಳೆಗಳನ್ನು ಬಲಪಡಿಸುತ್ತೆ: ವಾಲ್ನಟ್ಗಳಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಹೆಚ್ಚಿನ ಪ್ರಮಾಣದಲ್ಲಿದೆ, ಈ ಕಾರಣದಿಂದಾಗಿ ಅವು ನಮ್ಮ ದೇಹದಲ್ಲಿ ಮೂಳೆಗಳನ್ನು ಬಲಪಡಿಸುತ್ತವೆ (strong bone) ಮತ್ತು ಮೂಳೆ ರಚನೆಗೆ ಸಹಾಯ ಮಾಡುತ್ತವೆ. ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳ ಒಟ್ಟಾರೆ ರಚನೆಯನ್ನು ಸಹ ಸುಧಾರಿಸುತ್ತದೆ.
ಒತ್ತಡ ಕಡಿಮೆ ಮಾಡುತ್ತೆ: ಕೆಲವು ಸಂಶೋಧನೆಗಳ ಪ್ರಕಾರ, ನೆನೆಸಿದ ವಾಲ್ನಟ್ಗಳ ನಿಯಮಿತ ಸೇವನೆಯು ಒತ್ತಡ ಕಡಿಮೆ (stress relief) ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ನೆನೆಸಿದ ವಾಲ್ನಟ್ ತೊಂದರೆ ಮತ್ತು ಒತ್ತಡದ ಸಮಯದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ.
ಆರೋಗ್ಯಕರ ವೃದ್ಧಾಪ್ಯ: ಮತ್ತೊಂದು ಸಂಶೋಧನೆಯ ಪ್ರಕಾರ, ವಾಲ್ನಟ್ಗಳು ಆರೋಗ್ಯಕರ ವೃದ್ಧಾಪ್ಯದಲ್ಲಿ ಸಹಾಯ ಮಾಡುತ್ತವೆ. ಅವುಗಳನ್ನು ಪ್ರತಿದಿನ ಸೇವಿಸುವುದರಿಂದ ವೃದ್ಧಾಒಯದಲ್ಲೂ ನೀವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತೆ, ಅಷ್ಟೇ ಅಲ್ಲ ದೀರ್ಘಾಯುಷ್ಯ ಪಡೆಯಲು ಸಹ ಸಹಾಯ ಮಾಡುತ್ತೆ.
ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ: ಮೆದುಳಿನ ಆಕಾರದ ವಾಲ್ನಟ್ಗಳು ಮೆದುಳಿನ ನಮ್ಯತೆ, ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತೆ. ವಿಷಯಗಳ ಗ್ರಹಿಕೆಯ ಶಕ್ತಿಯನ್ನು ಹೆಚ್ಚಿಸುತ್ತೆ. ಸಣ್ಣ ವಾಲ್ ನಟ್ ಗಳು ಅನೇಕ ಪೋಷಕಾಂಶಗಳಿಂದ ತುಂಬಿರುತ್ತವೆ, ಅದು ಒಟ್ಟಾರೆ ಅರಿವಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಏಕಾಗ್ರತೆ ಮಟ್ಟವನ್ನು ಹೆಚ್ಚಿಸುತ್ತದೆ.