ನಿಂಬೆ ಹಣ್ಣಿನ ರಸದಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭವಿದೆ. ಇಡೀ ವರ್ಷದಲ್ಲಿ ನಮ್ಮ ಆರೋಗ್ಯ ಹೆಚ್ಚಾಗಿ ಹದಗೆಡುವ ಕಾಲ ಎಂದರೆ ಅದು ಚಳಿಗಾಲ. ಎಲ್ಲಾ ಕಡೆ ಶೀತದ ವಾತಾವರಣ ಹೆಚ್ಚಾಗಿರುವ ಕಾರಣ ನಮ್ಮ ದೇಹದ ತಾಪಮಾನ ಹೊರಗಿನ ಪ್ರಕೃತಿಯ ತಾಪಮಾನಕ್ಕೆ ಹೊಂದಿಕೊಳ್ಳಲು ಕಷ್ಟವಾಗುವುದರಿಂದ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿ ನಮ್ಮ ಆರೋಗ್ಯ ಬಹಳ ಬೇಗನೆ ಕೆಟ್ಟು ಹೋಗುತ್ತದೆ.
ಕಾಂಗ್ರೆಸ್ ಇರುವವರೆಗೆ ಈ ದೇಶಕ್ಕೆ ನೆಮ್ಮದಿ ಇಲ್ಲ: ಛಲವಾದಿ ನಾರಾಯಣಸ್ವಾಮಿ!
ಶೀತದ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಲು ನಾವು ಕೆಲವೊಂದು ಮನೆ ಮದ್ದುಗಳನ್ನು ಟ್ರೈ ಮಾಡಬಹುದು ಅಥವಾ ವೈದ್ಯರಿಂದ ಔಷಧಿಗಳನ್ನು ತೆಗೆದುಕೊಳ್ಳಬಹುದು.
ಬೇರೆ ಬೇರೆ ಮನೆ ಮದ್ದುಗಳನ್ನು ಉಪಯೋಗಿಸಿ ಅಥವಾ ತಿಳಿದುಕೊಳ್ಳಲು ಸಮಯ ವ್ಯರ್ಥ ಮಾಡುವ ಬದಲು ನಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ನಿಂಬೆ ಹಣ್ಣಿನ ಜ್ಯೂಸ್ ಒಮ್ಮೆ ಕುಡಿದು ನೋಡಬಹುದು.
ಜನರಿಗೆ ಉಪಯೋಗ ಆಗೋ ವಿಟಮಿನ್ C, ಆಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳನ್ನು ಇದರಲ್ಲಿ ಕಾಣಬಹುದು. ಇದು ನಮ್ಮ ದೇಹಕ್ಕೆ ಅನೇಕ ಆರೋಗ್ಯದ ಲಾಭಗಳನ್ನು ಒದಗಿಸುತ್ತದೆ.
ನಿಂಬೆ ವಿಟಮಿನ್ C ಹೊಂದಿದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಜ್ವರ, ಕಫ ಇತ್ಯಾದಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಬೆಚ್ಚಗಿನ ನೀರಿನೊಂದಿಗೆ ನಿಂಬೆ ರಸ ಬೆರೆಸಿ ಕುಡಿಯೋದರಿಂದ ನಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಜೀರ್ಣತೆ, ವಾತ, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರ ಆಗಿದೆ.
ನಿಂಬೆ ಪಾನೀಯು ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯಕ. ಇದು ದೇಹದ ಮೆಟಾಬಾಲಿಸಂ ವೇಗವನ್ನು ಹೆಚ್ಚಿಸುವ ಮೂಲಕ ತೂಕ ನಿಯಂತ್ರಿಸಲು ನೆರವಾಗುತ್ತದೆ.
ಇನ್ನು, ನಿಂಬೆ ರಸದಲ್ಲಿ ಇರುವ ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ C ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಜತೆಗೆ ಮೊಡವೆ ಮತ್ತು ಕಪ್ಪುಮಚ್ಚೆ ನಿವಾರಣೆಗೆ ಸಹಕಾರಿ ಆಗುತ್ತದೆ.
ನಿಂಬೆ ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ. ದೇಹದ ಒಳಚೈತನ್ಯವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದ ಇನ್ನಷ್ಟು ಲಾಭಗಳು ಇವೆ ಅನ್ನೋದು ವಾಸ್ತವ.
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ನಿಂಬೆ ರಸ ಬೆರೆಸಿ ಕುಡಿಯೋದರಿಂದ ಆರೋಗ್ಯ ಉತ್ತಮವಾಗುತ್ತದೆ. ನೈಸರ್ಗಿಕ ಮತ್ತು ಸಮತೋಲನ ಆಹಾರ ಶೈಲಿಯಲ್ಲೇ ನಿಂಬೆ ಸೇವನೆ ಮಾಡಿದರೆ ಇನ್ನಷ್ಟು ಲಾಭ ಇದೆ.