ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳು, ಡೈರಿ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು, ಎಣ್ಣೆ ಇತ್ಯಾದಿ ಯಾವುದೇ ಆಗಲಿ ಗ್ರಾಹಕರಿಗೆ ಇಂದು ಆಯ್ದುಕೊಳ್ಳಲು ಹಲವಾರು ಆಯ್ಕೆಗಳಿವೆ. ಒಂದೆಡೆ, ಇದು ಗ್ರಾಹಕರಿಗೆ ಹೆಚ್ಚು ಸೂಕ್ತವಾದ ವಸ್ತುವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ
ಕೊಬ್ಬರಿ ಎಣ್ಣೆ ಥೈರಾಯ್ಡ್ ಮತ್ತು ಅಂತಃಸ್ರಾವಕ ವ್ಯವಸ್ಥೆಗಳ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ದೇಹದ ಜೀವ ರಾಸಾಯನಿಕ ಕ್ರಿಯೆಯ ಗತಿಯನ್ನು ಹೆಚ್ಚಿಸುತ್ತದೆ; ಆದ್ದರಿಂದ ತೂಕವನ್ನು ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಸಹಾಯ ದೊರಕುತ್ತದೆ. ಸಾವಯವ ಕೊಬ್ಬರಿ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ತೆಂಗಿನ ಎಣ್ಣೆಯ ಮಧ್ಯಮ ಚೈನ್ಡ್ ಫ್ಯಾಟಿ ಆಸಿಡ್ (Medium Chained Fatty Acid (MCFA) ಗಳು ಜೀರ್ಣಗೊಳ್ಳಲು ಮೇದೋಜೀರಕ ಗ್ರಂಥಿಯ ಕಿಣ್ವಗಳ ಅಗತ್ಯವಿಲ್ಲದ ಕಾರಣ ಸಾವಯವ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ಮೇದೋಜ್ಜೀರಕ ಗ್ರಂಥಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೇದೋಜೀರಕ ಗ್ರಂಥಿಯ ಮೇಲೆ ಒತ್ತಡ ಹೆಚ್ಚಿದಷ್ಟೂ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚು
ಕೊಬ್ಬರಿ ಎಣ್ಣೆ ನೆತ್ತಿಯನ್ನು ಅಗತ್ಯ ಪ್ರೋಟೀನ್ಗಳೊಂದಿಗೆ ತೇವಗೊಳಿಸುತ್ತದೆ ಮತ್ತು ಪೋಷಿಸುತ್ತದೆ ಮತ್ತು ಕೂದಲ ಬುಡಕ್ಕೆ ಆಗಿರುವ ಹಾನಿಗಳನ್ನು ಸರಿಪಡಿಸುತ್ತದೆ ಇದರಿಂದ ಕೂದಲಿಗೆ ಅದರ ನೈಸರ್ಗಿಕ ಹೊಳಪು ಮತ್ತು ಕಾಂತಿ ಸಿಗುತ್ತದೆ. ಸಾವಯವ ಕೊಬ್ಬರಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ ಮತ್ತು ಇದು ಅದ್ಭುತವಾದ ಮುಖವನ್ನು ಆಳದಿಂದ ಸ್ವಚ್ಛಗೊಳಿಸುವ ಪೋಷಕಾಂಶಗಳನ್ನು ಹೊಂದಿದೆ. ಅಲ್ಲದೇ ಇದು ನೈಸರ್ಗಿಕ ತೇವಕಾರಕ ಅಥವಾ ಮಾಯಿಶ್ಚರೈಸರ್ ಮತ್ತು ಸೂರ್ಯನಿರೋಧಕ ಅಥವಾ ಸನ್ಸ್ಕ್ರೀನ್ ನಂತೆಯೂ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಇದು ಎಕ್ಸಿಮಾ ಮತ್ತು ತಲೆಹೊಟ್ಟು ಮುಂತಾದ ಅನೇಕ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆಯನ್ನೂ ನೀಡುತ್ತದೆ