12 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ. ಆಕೆಯ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. ಪೊಲೀಸರು ಆಕೆಯ ಪತಿ ಜಿತಿನ್ ಹುಕ್ಕೇರಿ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜಿತಿನ್ ಒಬ್ಬ ಪ್ರಖ್ಯಾತ ವಾಸ್ತುಶಿಲ್ಪಿ ಮತ್ತು ಬೆಂಗಳೂರಿನಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಆತನ ಪಾತ್ರ ಏನೆಂಬುದು ತನಿಖೆಯಿಂದ ಬಹಿರಂಗಗೊಳ್ಳುತ್ತಿದೆ.
ಆತನ ಪತಿ ಹೆಸರು ಜತಿನ್ ಹುಕ್ಕೇರಿ. ಈತ ಬೆಂಗಳೂರಿನಲ್ಲೇ ಓದಿದ್ದು. ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಇಂಟೀರಿಯರ್ ಡಿಸೈನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಜತಿನ್, ಆನಂತರ, ಲಂಡನ್ ನಲ್ಲಿರುವ ರಾಯಲ್ ಕಾಲೇಜ್ ಆಫ್ ಆರ್ಟ್ಸ್ ನಲ್ಲಿ ಡಿಸ್ರಪ್ಟಿವ್ ಮಾರ್ಕೆಟ್ ಇನ್ನೋವೇಷನ್ ಎಂಬ ವಿಷಯದಲ್ಲಿ ಮತ್ತೊಂದು ಡಿಗ್ರಿ ಪಡೆದಿದ್ದಾರೆ.
ಸ್ಟಾಕ್ ತಂದಿಡೋ ಅಕ್ಕಿಯಲ್ಲಿ ಹುಳು ಆಗ್ಬಾರ್ದು ಅಂದ್ರೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ..!
ಡೆಲ್ಲಾ ಲೀಡರ್ಸ್ ಕ್ಲಬ್ ನಲ್ಲಿ ಬಂದಿರುವ ಮಾಹಿತಿಯ ಪ್ರಕಾರ, ತನ್ನ ಡಿಗ್ರಿಗಳನ್ನು ಮುಗಿಸಿಕೊಂಡ ನಂತರ, ಅವರು ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಬ್ಯುಸಿನೆಸ್ ಶುರು ಮಾಡಿದರು. ಆನಂತರ ಲಂಡನ್ ನಲ್ಲೂ ತಮ್ಮದೇ ಆದ ರೆಸ್ಟೋರೆಂಟ್ ಗಳನ್ನು ತೆರೆದರು. ಅವುಗಳಲ್ಲದೆ, ಡಬ್ಲ್ಯೂಡಿಎ ಆ್ಯಂಡ್ ಡಿಕೋಡ್ ಹಾಗೂ ಕ್ರಾಫ್ಟ್ ಕೋಡ್ ಡಿ ಎಂಬ ಮತ್ತೆರಡು ಕಂಪನಿಗಳನ್ನು ಆರಂಭಿಸಿದರು.
ಅವರ ಲಿಂಕ್ಡ್ ಇನ್ ಖಾತೆಯಲ್ಲಿರುವ ಮಾಹಿತಿಯ ಪ್ರಕಾರ, ಆರ್ಕಿಟೆಕ್ಟರ್, ಹಾಸ್ಪಿಟಾಲಿಟಿ ಹಾಗೂ ಪ್ಲಾನಿಂಗ್ ಉದ್ಯಮದಲ್ಲಿ ಅಪಾರ ಅನುಭವ ಹೊಂದಿರುವ ಅವರು, ಕಸ್ಟಮ್ಸ್ ರಿಕ್ರಿಯೇಷನ್, ಡಿಸೈನ್, ಎಂಟರ್ ಟೈನ್ ಮೆಂಟ್ ಮುಂತಾದವುಗಳಲ್ಲೂ ಕಲೆಗಾರಿಕೆಯನ್ನು ಹೊಂದಿದ್ದಾರೆ. ಈ ಅನುಭವ ಹಾಗೂ ಕಲೆಗಾರಿಕೆಯು ಲಂಡನ್ ನ ರಾಯಲ್ ಕಾಲೇಜ್ ಆಫ್ ಆರ್ಟ್ಸ್ ನಲ್ಲಿ ಕಲಿತದ್ದು ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಅವರದ್ದೇ ಆದ ಹ್ಯಾಂಗೋವರ್ ಎಂಬ ರೆಸ್ಟೋರೆಂಟ್ ಇದೆ. ಇದು ಕಾಕ್ ಟೇಲ್ ಹಾಗೂ ಡಿನ್ನರ್ ಪರಿಕಲ್ಪನೆಯ ರೆಸ್ಟೋರೆಂಟ್ ಇದಾಗಿದ್ದು, ಇದು ಎರಡು ಫ್ಲೋರ್ ಗಳನ್ನು ಹೊಂದಿದೆ. ಇದು ನಾಲ್ಕು ಗೋಡೆಗಳ ನಡುವಿನ ಹೋಟೆಲ್ ರೀತಿಯಲ್ಲಿಲ್ಲ. ನಾಲ್ಕೂ ಗೋಡೆಗಳಲ್ಲಿ ಅನೇಕ ಬಾಗಿಲುಗಳನ್ನು ಅಳವಡಿಸಲಾಗಿದ್ದು ಇದು ಅಲ್ಲಿ ಹೋಗುವವರಿಗೆ ಹೊಸ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗಿದೆ.