ಕೈತುಂಬಾ ಹಣ ಇಟ್ಟುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದ ದಿನಗಳು ಕಳೆದು ಹೋಗಿವೆ. ಈಗ ಏನಿದ್ರೂ ಒಂದು ಸ್ಮಾರ್ಟ್ ಪೋನ್ ಇದ್ರೆ ಸಾಕು ನೀವು ಬೇಕಾದುದನ್ನು ಖರೀದಿಸಬಹುದು. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ಇದಕ್ಕೆ ಅವಕಾಶ ಮತ್ತು ಸೌಲಭ್ಯ ಕಲ್ಪಿಸಿದೆ. ಅಂದರೆ ನಾವು UPI ID ಯೊಂದಿಗೆ ನೋಂದಾಯಿಸಿಕೊಳ್ಳಬಹುದು ಮತ್ತು Google Pay,
PhonePay, Paytm ಮುಂತಾದ ಕಂಪನಿಗಳ ಮೂಲಕ ನಮಗೆ ಬೇಕಾದ ಜನರಿಗೆ ಪಾವತಿಸಬಹುದು. UPI ಪಿನ್ ರಚಿಸಲು ನಾವು ಖಾತೆಯನ್ನು ಹೊಂದಿರುವ ಬ್ಯಾಂಕ್ನ ಡೆಬಿಟ್ ಕಾರ್ಡ್ ಅಗತ್ಯವಿತ್ತು. ಆದರೆ ಈಗ ಅದರ ಅಗತ್ಯವೂ ಇಲ್ಲ. ಈಗ ಆಧಾರ್ ಆಧಾರಿತ UPI ಯೊಂದಿಗೆ, Google Pay ಬಳಕೆದಾರರು ಡೆಬಿಟ್ ಕಾರ್ಡ್ ಇಲ್ಲದೆ UPI ಪಿನ್ ಅನ್ನು ರಚಿಸಬಹುದು.
ಡೆಬಿಟ್ ಕಾರ್ಡ್ ಇಲ್ಲದವರಿಗೆ ಯುಪಿಐ ಪಿನ್ ಸೆಟ್ ಮಾಡುವ ಅಥವಾ ಫೋನ್ ಪೇ ಆ್ಯಪ್ ಬಳಸುವ ಅವಕಾಶ ಸಿಗುತ್ತಿರಲಿಲ್ಲ. ಆದರೆ, ಇನ್ನು ಈ ಸಮಸ್ಯೆ ಎದುರಾಗದು. ಆಧಾರ್ ಆಧಾರಿತ ಕೆವೈಸಿ ಮೂಲಕ ಜನರು ಯುಪಿಐ ಆ್ಯಪ್ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು ಎಂದು ಫೋನ್ ಪೇ ಹೇಳಿದೆ.
ಫೋನ್ ಪೇನಲ್ಲಿ ಆಧಾರ್ ಕಾರ್ಡ್ ಆಯ್ಕೆಯನ್ನು ಆಯ್ದುಕೊಂಡು, ಆಧಾರ್ನ ಕೊನೆಯ ಆರು ಸಂಖ್ಯೆಗಳನ್ನು ನಮೂದಿಸುವ ಮೂಲಕ ಪಿನ್ ಜನರೇಟ್ ಮಾಡಬಹುದು. ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಬಳಕೆದಾರರ ನೋಂದಾಯಿತ ಮೊಬೈಲ್ಗೆ ಯುಐಡಿಎಐ ಹಾಗೂ ಬ್ಯಾಂಕ್ನಿಂದ ಒಟಿಪಿ ಬರಲಿದೆ.
ಆಧಾರ್ ಸಹಾಯದಿಂದ ಫೋನ್ ಪೇ ಆ್ಯಕ್ಟಿವೇಟ್ ಹೀಗೆ ಮಾಡಿ…
- ನಿಮ್ಮ ಮೊಬೈಲ್ನಲ್ಲಿ ಫೋನ್ ಪೇ ಆ್ಯಪ್ ಓಪನ್ ಮಾಡಿ.
- ಫೋನ್ ಪೇ ಪ್ರೊಫೈಲ್ ಪೇಗ್ಗೆ ವಿಸಿಟ್ ಮಾಡಿ.
- ಪೇಮೆಂಟ್ಸ್ ಇನ್ಸ್ಟ್ರುಮೆಂಟ್ಸ್ ಟ್ಯಾಬ್ನಲ್ಲಿ ‘ಆ್ಯಡ್ ಬ್ಯಾಂಕ್ ಅಕೌಂಟ್’ ಆಯ್ಕೆಯನ್ನು ಪ್ರೆಸ್ ಮಾಡಿ.
- ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
- ಒಟಿಪಿ ದೃಢೀಕರಣದ ಮೂಲಕ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸಿ.
- ಫೋನ್ ಪೇ ಬ್ಯಾಂಕ್ ಖಾತೆ ವಿವರಗಳನ್ನು ಪಡೆಯುತ್ತದೆ. ಅವುಗಳನ್ನು ಯುಪಿಐ ಜತೆ ಲಿಂಕ್ ಮಾಡಿ.
- ಯುಪಿಐ ಪಿನ್ ಜನರೇಟ್ ಮಾಡುವ ಆಪ್ಷನ್ ಅನ್ನು ಪ್ರೆಸ್ ಮಾಡಿ. ಅಷ್ಟರಲ್ಲಿ ನಿಮಗೆ ಡೆಬಿಟ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ವಿವರ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ.
- ಆಧಾರ್ ಕಾರ್ಡ್ ವಿವರ ಎಂಬ ಆಪ್ಷನನ್ನು ಆಯ್ಕೆ ಮಾಡಿ ಆಧಾರ್ನ ಕೊನೆಯ ಆರು ಸಂಖ್ಯೆಗಳನ್ನು ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
- ಒಟಿಪಿ ನಮೂದಿಸಿದ ನಂತರ ಯುಪಿಐ ಪಿನ್ ಸೆಟ್ ಮಾಡಿ.
- ಯುಪಿಐ ಆ್ಯಕ್ಟಿವೇಟ್ ಆಗುತ್ತದೆ. ಪಾವತಿಗಳನ್ನು ಮಾಡಲು ನೀವು ಅರ್ಹರಾಗಿರುತ್ತೀರಿ.