WhatsApp ಅನೇಕ ಸ್ಮಾರ್ಟ್ಫೋನ್ ಬಳಕೆದಾರರಿಗೆ ಬಹಳ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಅನ್ನು ನಂಬರ್ ಸೇವ್ ಮಾಡದೆಯೂ ಮೇಸೆಜ್ ಮಾಡಬಹುದು. ಹೌದು, ವಾಸ್ತವವಾಗಿ ಯಾರಿಗಾದರೂ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕಿದ್ದರೆ, ಮೊದಲನೆಯ ಮಾನದಂಡ ಎಂದರೆ ಅವರು ಕೂಡ ವಾಟ್ಸ್ಆ್ಯಪ್ ಖಾತೆ ಹೊಂದಿರಬೇಕು. ಮೂಲತಃ ಅವರ ಫೋನ್ ಸಂಖ್ಯೆಯನ್ನು ನಮ್ಮ ಫೋನ್ನಲ್ಲಿ ಸೇವ್ ಮಾಡಿಕೊಂಡರಬೇಕು.
ಇದು ಮೆಸೇಜ್ ಕಳಿಸುವ ತುಂಬಾ ಸುಲಭ ಮತ್ತು ಸರಳ ವಿಧಾನ. ಆದರೆ ಈ ಸರಳ ವಿಧಾನ ಕಠಿಣವಾಗುವುದು ಮತ್ತು ಕಾಂಟ್ಯಾಕ್ಟ್ನಲ್ಲಿ ಅನವಶ್ಯಕ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುವಂತೆ ಮಾಡುವುದು ಯಾವಾಗವೆಂದರೆ, ಯಾರಿಗೂ ಅಪರಿಚಿತ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಪರಿಚಿತವಾಗಿ ಯಾವುದೋ ಪ್ರಮುಖ ಮೆಸೇಜ್ ಒಂದನ್ನು ಕಳುಹಿಸಬೇಕು ಎಂದಾಗ. ಆಗ ಏನು ಮಾಡಬೇಕು.
ವ್ಯಕ್ತಿಯೊಬ್ಬರ ನಂಬರ್ ನಮಗೆ ಮುಂದೆಂದೂ ಅಗತ್ಯ ಬೀಳುವುದಿಲ್ಲ ಅಥವಾ ಅನಗತ್ಯ ಎಂದಾದರೆ, ಆ ಸಂಖ್ಯೆಯನ್ನು ಫೋನ್ನಲ್ಲಿ ಸೇವ್ ಮಾಡದೆಯೇ ಅವರಿಗೆ ಸಂದೇಶ ಕಳುಹಿಸಬಹುದು. ಇದು ತೀರಾ ಸುಲಭವಿದೆ.
ಇದಕ್ಕಾಗಿ ಮೊದಲು ನೀವು ಮೊಬೈಲ್ ಫೋನ್ನಲ್ಲಿ ಇಂಟರ್ನೆಟ್ ಸಂಪರ್ಕ (ಡೇಟಾ) ಆನ್ ಮಾಡಿ. ಅದರಲ್ಲಿರುವ ಬ್ರೌಸರ್ ಆ್ಯಪ್ನ (ಉದಾ. ಕ್ರೋಮ್) ಅಡ್ರೆಸ್ ಬಾರ್ನಲ್ಲಿ https://wa.me/91 ಅಂತ ಬರೆದು, ಬಳಿಕ ಆ ವ್ಯಕ್ತಿಯ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು (ಸ್ಪೇಸ್ ಇಲ್ಲದೆ) ದಾಖಲಿಸಬೇಕು.
ಇದಾಗಿ ಎಂಟರ್ ಕೊಟ್ಟ ನಂತರ ನೇರವಾಗಿ ಫೋನ್ನಲ್ಲಿರುವ ವಾಟ್ಸ್ಆ್ಯಪ್ಗೆ ಸಂಪರ್ಕಗೊಳ್ಳುತ್ತದೆ ಮತ್ತು ಈ ನಂಬರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕೇ ಅಂತ ಕೇಳುತ್ತದೆ. ‘ಮೆಸೇಜ್’ ಎಂಬುದನ್ನು ಕ್ಲಿಕ್ ಮಾಡಿದರೆ ವಾಟ್ಸ್ಆ್ಯಪ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ಸಂದೇಶವನ್ನು ಅಲ್ಲೇ ಟೈಪ್ ಮಾಡಿ ಕಳುಹಿಸಬಹುದು ಇಲ್ಲವೇ ಯಾವುದೇ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಶೇರ್ ಮಾಡಬಹುದು.
ನಂಬರ್ ಸೇವ್ ಮಾಡದೆ ವಾಟ್ಸ್ಆ್ಯಪ್ ಗ್ರೂಪ್ಗೆ ಇನ್ವೈಟ್ ಮಾಡುವುದುದು ಹೇಗೆ?
- ನಿಮ್ಮ ಸ್ಮಾರ್ಟ್ಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ.
- ನೀವು ಲಿಂಕ್ ರಚಿಸಲು ಬಯಸುವ ಗುಂಪಿನ ಮೇಲೆ ಟ್ಯಾಪ್ ಮಾಡಿ.
- ಪುಟದ ಮೇಲ್ಭಾಗದಲ್ಲಿರುವ ಗುಂಪಿನ ಹೆಸರಿನ ಮೇಲೆ ಟ್ಯಾಪ್ ಮಾಡಿ.
- ಕೆಳಗೆ ಸ್ಕ್ರಾಲ್ ಮಾಡಿ ಮತ್ತು “ಲಿಂಕ್ ಮೂಲಕ ಗುಂಪಿಗೆ ಆಹ್ವಾನಿಸಿ” ಆಯ್ಕೆಯನ್ನು ಟ್ಯಾಪ್ ಮಾಡಿ.
- ನಿಮ್ಮ ವಾಟ್ಸ್ಆ್ಯಪ್ ಗುಂಪಿಗೆ ಲಿಂಕ್ ಅನ್ನು ಹಂಚಿಕೊಳ್ಳಲು ನೀವು ಈಗ ವಿವಿಧ ಆಯ್ಕೆಗಳನ್ನು ಗುರುತಿಸಲು. ಸಾಧ್ಯವಾಗುತ್ತದೆ. ನಿಮ್ಮ ವಾಟ್ಸ್ಆ್ಯಪ್ ಗ್ರೂಪ್ಗಾಗಿ ನೀವು QR ಕೋಡ್ ಅನ್ನು ಸಹ ರಚಿಸಬಹುದು.
- ಗುಂಪಿಗೆ ಸೇರಲು ಬಯಸುವ ಯಾರಾದರೂ, ಲಿಂಕ್ ಅನ್ನು ಟ್ಯಾಪ್ ಮಾಡುವ ಮೂಲಕ ಹಾಗೆ ಮಾಡಬಹುದು.