ಪ್ರಮುಖ ಟೆಲಿಕಾಂ ಆಪರೇಟರ್ಗಳಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ. ಹೊಸ ದರಗಳು ಜಾರಿಗೆ ಬಂದಿರುವುದಕ್ಕೆ ದೇಶದಲ್ಲಿ ಸರ್ಕಾರಿ ಸ್ವಾಮ್ಯದ BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಗೆ ಹಿಂತಿರುಗಲು ಅಭಿಯಾನ ಆರಂಭವಾಗಿದೆ. ಅಭಿಯಾನದ ಭಾಗವಾಗಿ ಒಂದೇ ದಿನಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಿಎಸ್ಎನ್ಎಲ್ಗೆ ತಮ್ಮ ಸಿಮ್ ಅನ್ನು ಪೋರ್ಟ್ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ರಿಲಾಯನ್ಸ್ ಜಿಯೋನಿಂದ ಬಿಎಸ್ಎನ್ಎಲ್ಗೆ ಬಂದಿದ್ದಾರೆ ಅನ್ನುವುದು ವಿಶೇಷ.
ಹೌದು ಅದು ಮಾತ್ರವಲ್ಲದೆ ಕಡಿಮೆ ಬೆಲೆಗೆ BSNL ಸಂಸ್ಥೆ ತನ್ನ ಗ್ರಾಹಕರಿಗೆ ರೀಚಾರ್ಜ್ ಪ್ಲಾನ್ ಗಳನ್ನು ಕೂಡ ಪರಿಶೀಸುವಂತಹ ಕೆಲಸವನ್ನು ಮಾಡುತ್ತಿರುವುದರಿಂದಾಗಿ ಗ್ರಾಹಕರು ಈ ವಿಚಾರದಿಂದಲೂ ಕೂಡ ಇಂಪ್ರೆಸ್ ಆಗಿದ್ದು, ಅಂಥವರಿಗೆ ಮನೆಯಲ್ಲಿ ಕುಳಿತುಕೊಂಡು ಯಾವ ರೀತಿಯಲ್ಲಿ BSNL SIM ಗೆ ಪೋರ್ಟ್ ಆಗಬಹುದು ಎನ್ನುವುದನ್ನು ಇಲ್ಲಿದೆ ನೋಡಿ.
28 ದಿನಗಳಿಂದ ಪ್ರಾರಂಭಿಸಿ ಒಂದು ವರ್ಷಗಳವರೆಗೂ ಇರುವಂತಹ ರಿಚಾರ್ಜ್ ಪ್ಲಾನ್ ಗಳು BSNL ನಲ್ಲಿ ಬೇರೆ ಸಿಮ್ ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ಕೂಡ ಪ್ರತಿ ತಿಂಗಳ ರಿಚಾರ್ಜ್ ಪ್ಲಾನ್ ಗೆ ಬೇರೆ ಸಿಮ್ ಗಳಿಗೆ ಅಷ್ಟೊಂದು ಹಣವನ್ನು ಸುರಿಯೋ ಬದಲು ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬೇಕೆ ಎನ್ನುವಂತಹ ಆಸೆ ಇದ್ರೆ ನಿಮಗೆ ನಿಜಕ್ಕೂ ಕೂಡ BSNL ಒಂದೊಳ್ಳೆ ಆಯ್ಕೆ ಆಗಿದೆ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಬಿಎಸ್ಎನ್ಎಲ್ ಸಂಸ್ಥೆಗೆ ಪೋರ್ಟ್ ಆಗುವಂತಹ ವಿಧಾನವನ್ನ ಹಂತ ಹಂತವಾಗಿ ತಿಳಿದುಕೊಳ್ಳೋಣ.
- ಮೊದಲಿಗೆ 1900 ನಂಬರ್ಗೆ ನೀವು ಪೋರ್ಟ್ ರಿಕ್ವೆಸ್ಟ್ ಮೆಸೇಜ್ ಅನ್ನು ಮೊದಲಿಗೆ ಕಳುಹಿಸಬೇಕಾಗುತ್ತದೆ. ಇದಕ್ಕಾಗಿ ನೀವು ಆ ನಂಬರ್ಗೆ PORT ಎಂಬುದಾಗಿ ಮೆಸೇಜ್ ಮಾಡಬೇಕಾಗಿರುತ್ತದೆ.
- ಎಲ್ಲಿ ನಿಮಗೆ ಯೂನಿಕ್ ಪೊರ್ಟಿಂಗ್ ಕೋಡ್ ಸಿಗುತ್ತದೆ. ಇದು 15 ದಿನಗಳ ಕಾಲ ವ್ಯಾಲಿಡ್ ಆಗಿರುತ್ತದೆ ಹಾಗೂ ಈ ಕೋಡನ್ನು ಇಟ್ಕೊಂಡು ನೀವು ಹತ್ತಿರದ ಬಿಎಸ್ಎನ್ಎಲ್ ಸೆಂಟರ್ಗೆ ಹೋಗಬೇಕಾಗುತ್ತದೆ.
- ಈ ಕೋರ್ಡ್ ಮೇಲೆ ಅವರಿಗೆ ನಿಮ್ಮ ಆಧಾರ್ ಕಾರ್ಡ್ ಡಿಟೇಲ್ಸ್ ಅನ್ನು ನೀಡಬೇಕಾಗಿರುತ್ತದೆ. ಇಲ್ಲಿ ಕೆವೈಸಿ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ನಿಮಗೆ ಹೊಸ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದನ್ನ ಕೆಲವೊಮ್ಮೆ ಆಫರ್ ಅಡಿಯಲ್ಲಿ ಉಚಿತವಾಗಿ ಕೂಡ ನೀಡಬಹುದಾಗಿದೆ ಇಲ್ಲವೇ ಸ್ವಲ್ಪ ಹಣವನ್ನು ಪಾವತಿ ಮಾಡಿ ಪಡೆದುಕೊಳ್ಳಬೇಕಾದ ಅಗತ್ಯತೆ ಕೂಡ ಇರುತ್ತದೆ.
- ನಿಮ್ಮ ಪೋರ್ಟಿಂಗ್ ರಿಕ್ವೆಸ್ಟ್ ಖಚಿತಗೊಂಡ ನಂತರ ನಿಮ್ಮ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಯಾವಾಗ ಆಕ್ಟಿವ್ ಆಗುತ್ತದೆ ಎನ್ನುವಂತಹ ದಿನಾಂಕ ಹಾಗೂ ಸಮಯ ಸಿಗುತ್ತದೆ. ಅಲ್ಲಿಯ ತನಕ ಹಳೆಯ ಸಿಮ್ ಕಾರ್ಡ್ ಆಕ್ಟಿವ್ ಆಗಿರುತ್ತದೆ ಹಾಗೂ ನಂತರ ಆ ಸಮಯ ಬಂದಾಗ BSNL SIM Card ಆಕ್ಟಿವೇಟ್ ಆಗುತ್ತದೆ.
- ಟೆಲಿಫೋನ್ ಅಥಾರಿಟಿ ನಿಯಮಗಳ ಪ್ರಕಾರ ಟೆಲಿಫೋನ್ ಆಪರೇಟಿಂಗ್ ವ್ಯಾಲಿಡಿಟಿ ಆಗುವಂತಹ ಸಮಯ ಏಳು ದಿನಗಳವರೆಗೆ ಇರುತ್ತದೆ.
ಇನ್ನೂ BSNL ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಮತ್ತು ಈಗ BSNL ಗೆ ಪೋರ್ಟ್ ಮಾಡಲು ಯೋಜಿಸುತ್ತಿರುವ ಹೊಸ ಬಳಕೆದಾರರಿಗೆ ಲಾಭದಾಯಕ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಯು ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಹೊರತುಪಡಿಸಿ ದೇಶದಾದ್ಯಂತ ಎಲ್ಲಾ ರಾಜ್ಯಗಳಿಗೆ ಅನ್ವಯವಾಗಲಿದೆ. ಸದ್ಯ BSNL ನೆಟ್ವರ್ಕ್ 4G ನೆಟ್ವರ್ಕ್ಗಳಿಗೆ ಸೀಮಿತವಾಗಿದೆ. ಆದರೆ ಪ್ರತಿಸ್ಪರ್ಧಿಗಳು 5G ನೆಟ್ವರ್ಕ್ಗಳಿಗೆ ಸ್ಥಳಾಂತರಗೊಂಡಿದ್ದಾರೆ. ನಿಧಾನವಾಗಿ 5G ನೆಟ್ವರ್ಕ್ಗೆ ಬಿಎಸ್ಎನ್ಎಲ್ ಸ್ಥಳಾತರಗೊಳ್ಳು ಕೂಡ ಯೋಚಿಸುತ್ತಿದೆ.