ಚಳಿಗಾಲದಲ್ಲಿ ಏನನ್ನಾದರೂ ವೆರೈಟಿಯಾಗಿ ತಿನ್ನಬೇಕು ಎನಿಸುತ್ತದೆ. ಹೀಗಾಗಿ ಇಂದಿನ ರೆಸಿಪಿ ಯಲ್ಲಿ ಬಿಸಿ ಬಿಸಿ ಮೆಂತ್ಯ ರೈಸ್ ಮಾಡುವ ವಿಧಾನ ತೋರಿಸುತ್ತೇವೆ ನೋಡಿ.
ಬೇಕಾಗುವ ಪದಾರ್ಥಗಳು…
ಹೆಚ್ಚಿದ ಮೆಂತ್ಯೆ ಸೊಪ್ಪು- 1 ಬಟ್ಟಲು
ಈರುಳ್ಳಿ- 1 ದೊಡ್ಡದು 1 (ಉದ್ದನೆ ಹೆಚ್ಚಿದ್ದು)
ಶುಂಠಿ, ಬೆಳುಳ್ಳಿ ಪೇಸ್ಟ್ – 1 ಚಮಚ,
ಟೊಮ್ಯಾಟೋ- 2
ಬೆಚ್ಚನೆ ಹುರಿದು ಪುಡಿ ಮಾಡಿದ
ದನಿಯಾ- 1 ಚಮಚ
ಖಾರದ ಪುಡಿ- 1 ಚಮಚ
ಜೀರಿಗೆ ಪುಡಿ-ಒಂದೂವರೆ ಚಮಚ
ಬಟಾಣಿ 1 ಬಟ್ಟಲು
ಅಕ್ಕಿ 1 ಪಾವು
ನೀರು-2 1/2 ಲೋಟ
ಮಾಡುವ ವಿಧಾನ…
ಮೊದಲು ಕುಕ್ಕರಿನಲ್ಲಿ ಎಣ್ಣೆ ಹಾಕಿ ಈರುಳ್ಳಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿದು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಸಮಯದ ನಂತರ ಮೆಂತ್ಯೆ ಸೊಪ್ಪು, ಬಟಾಣಿ ಹಾಕಿ 3 ನಿಮಿಷ ಬಾಡಿಸಿ ಟೊಮ್ಯಾಟೋ ಸೇರಿಸಿ.
ಜೀರಿಗೆ, ದನಿಯಾ ಪುಡಿ, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು, ಅಕ್ಕಿಯನ್ನು ಹಾಕಿ, ನೀರನ್ನು ಸೇರಿಸಿ ಮುಚ್ಚಳ ಮುಚ್ಚಿ. ಕುಕ್ಕರ್ 2 ವಿಷಲ್ ಹಾಕಿದಾಗ ತೆಗೆಯಿರಿ. ಬಿಸಿ ಬಿಸಿ ಮೆಂತ್ಯೆ ರೈಸ್ ಸವಿಯಲು ಸಿದ್ಧ.