ದೀಪಾವಳಿಯು ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಅತ್ಯಂತ ದೊಡ್ಡ ಮತ್ತು ಅತ್ಯಂತ ವಿಶಿಷ್ಟವಾದ ಹಬ್ಬಗಳಲ್ಲಿ ಒಂದಾಗಿದೆ. ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರುತ್ತಿದೆ. ದೀಪಾವಳಿ ವಾತಾವರಣದಿಂದ ಎಲ್ಲ ಮಾರುಕಟ್ಟೆಗಳೂ ಈಗಾಗಲೇ ಗಿಜಿಗುಡುತ್ತಿವೆ.
ದೀಪಾವಳಿ ಹಬ್ಬವೆಂದರೆ ದೀಪದ ಮೂಲಕ ಮನೆ ಹಾಗೂ ಮನೆಯ ಮೂಲೆ ಮೂಲೆಯಲ್ಲೂ ದೀಪವನ್ನು ಹಚ್ಚುವ ಹಾಗೂ ಮನೆಯ ಹೊರಗೆ ಕೂಡ ದೀಪವನ್ನು ಹಚ್ಚುವ ಮೂಲಕ ಆಚರಿಸುವ ಹಬ್ಬವಾಗಿದೆ. ದೀಪಾವಳಿ ಹಬ್ಬದ ದಿನದಂದು ದೀಪವನ್ನು ಹಚ್ಚುವುದು ಹೇಗೆ.? ದೀಪಾವಳಿ ದಿನ ಯಾವ ಸ್ಥಳದಲ್ಲಿ, ಯಾವ ದಿಕ್ಕಿನಲ್ಲಿ ದೀಪವನ್ನು ಹಚ್ಚಿಡಬೇಕು.?
1. ದೀಪಾವಳಿ ಹಬ್ಬದ ದಿನ ದೀಪವನ್ನು ಬೆಳಗುವ ಸರಿಯಾದ ಮಾರ್ಗ:
– ಈ ಶುಭ ದಿನದಂದು ಮೊದಲು ನೀವು ನಿಮ್ಮ ಮನೆಯ ದೇವರ ಕೋಣೆಯನ್ನು ದೀಪವನ್ನು ಹಚ್ಚಿಡಿ.
– ಸಾಸಿವೆ ಎಣ್ಣೆ ಅಥವಾ ತುಪ್ಪದ ದೀಪವನ್ನೂ ಬೆಳಗಬಹುದು.
– ದೀಪಾವಳಿಯಂದು ಸಾಂಪ್ರದಾಯಿಕವಾಗಿ, ಸೂರ್ಯಾಸ್ತದ ನಂತರ ಅಂದರೆ ಪ್ರದೋಷ ಕಾಲದಲ್ಲಿ ಮನೆಯ ಒಳಗೆ, ತುಳಸಿ ಬಳಿ, ಅಂಗಳದಲ್ಲಿ ಹಾಗೂ ಮನೆಯ ಸುತ್ತಲೂ ದೀಪವನ್ನು ಹಚ್ಚಿಡಬೇಕು. ಇದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ನಿಮಗೆ ನೀಡುತ್ತದೆ. ಹಾಗೂ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ.
ದೀಪಾವಳಿ ದಿನದಂದು ಮಣ್ಣಿನ ದೀಪವನ್ನು ಬೆಳಗುವುದರಿಂದ ಮನೆಯಲ್ಲು ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
– ದೀಪವನ್ನು ಬೆಳಗಿಸುವಾಗ, ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸಿ.
– ಯಾವುದೇ ಶಕ್ತಿಯು ಮನೆಯ ಮುಖ್ಯ ದ್ವಾರದ ಮೂಲಕ ನಿಮ್ಮ ಮನೆಯನ್ನು ಪ್ರವೇಶಿಸುತ್ತದೆ ಎನ್ನುವ ನಂಬಿಕೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಮುಖ್ಯ ದ್ವಾರದಲ್ಲಿ ಖಂಡಿತವಾಗಿಯೂ ದೀಪವನ್ನು ಬೆಳಗಿಸಿ, ಇದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಸಹಕಾರಿಯಾಗಿದೆ.
– ತಪ್ಪದೇ ಮನೆಯ ದೇವರ ಕೋಣೆಯಲ್ಲಿ ಮತ್ತು ಲಿವಿಂಗ್ ರೂಂನಲ್ಲಿ ದೀಪವನ್ನು ಹಚ್ಚಿಡಬೇಕು
ದೇವರ ಕೋಣೆಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ದೀಪವನ್ನು ಬೆಳಗಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಇದರೊಂದಿಗೆ ದೈವಿಕ ಶಕ್ತಿಯ ಆಕರ್ಷಣೆ ಹೆಚ್ಚಾಗುತ್ತದೆ.
– ಈ ದಿನ ನೀವು ನಿಮ್ಮ ಮನೆಯ ಅಡುಗೆ ಮನೆಯಲ್ಲೂ ದೀಪವನ್ನು ಹಚ್ಚಿಡಬೇಕು.
– ಶಾಸ್ತ್ರದ ಪ್ರಕಾರ, ಅಡುಗೆಮನೆಯ ಆಗ್ನೇಯ ಮೂಲೆಯಲ್ಲಿ ದೀಪವನ್ನು ಇಡುವುದರಿಂದ ಉತ್ತಮ ಆರೋಗ್ಯ, ಆಹಾರ ಮತ್ತು ಸಮೃದ್ಧಿಯನ್ನು ಕಾಣಬಹುದು.
ನಿಮ್ಮ ಮನೆಯ ಎಲ್ಲಾ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸಿ, ಪ್ರತಿಯೊಂದು ದೀಪವು ವಿಭಿನ್ನ ಆಶೀರ್ವಾದ, ಆರೋಗ್ಯ, ಸಂಪತ್ತು, ಶಾಂತಿ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.
– ಶುಭ ಫಲಗಳಿಗಾಗಿ ನಿಮ್ಮ ಮನೆಯ ಸುತ್ತ 5 ಅಥವಾ 7 ದೀಪಗಳನ್ನು ಹಚ್ಚಿಡಬೇಕು.
2. ದೀಪವನ್ನು ಯಾವ ದಿಕ್ಕಿನಲ್ಲಿ ಬೆಳಗಿಸಬೇಕು.?
– ಪೂರ್ವ ದಿಕ್ಕು:
ಮನೆಯ ಈ ದಿಕ್ಕಿನಲ್ಲಿ ದೀಪಗಳನ್ನು ಬೆಳಗಿಸುವುದರಿಂದ ಆರೋಗ್ಯ, ಸಾಮರಸ್ಯ ಮತ್ತು ಶಾಂತಿಯನ್ನು ತರುತ್ತದೆ.
– ಉತ್ತರ ದಿಕ್ಕು:
ಸಮೃದ್ಧಿ ಮತ್ತು ಯಶಸ್ಸನ್ನು ಆಕರ್ಷಿಸಲು, ಮನೆಯ ಈ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬೇಕು.
– ದಕ್ಷಿಣ ದಿಕ್ಕು:
ಈ ದಿಕ್ಕಿನಲ್ಲಿ ದೀಪಗಳನ್ನು ಇಡುವುದನ್ನು ತಪ್ಪಿಸಿ, ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದು ಸೂಕ್ತವಲ್ಲ.
ದೀಪಾವಳಿ ಹಬ್ಬದ ದಿನದಂದು ಈ ಮೇಲಿನ ರೀತಿಯಲ್ಲಿ ದೀಪವನ್ನು ಬೆಳಗುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ಮತ್ತು ಸಮೃದ್ಧಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ದೀಪವನ್ನು ಬೆಳಗಿಸುವಾಗಲೂ ದಿಕ್ಕನ್ನು ನೋಡಿಕೊಂಡು ದೀಪವನ್ನು ಬೆಳಗಿಸುವುದು ಉತ್ತಮವಾಗಿರುತ್ತದೆ.
ದೀಪಾವಳಿಯಂದು ದಕ್ಷಿಣ ದಿಕ್ಕಿಗೆ ದೀಪವನ್ನು ಹಚ್ಚುವುದು ಶುಭವಲ್ಲ ಎನ್ನುವ ನಂಬಿಕೆ ಇದೆ. ಈ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗಿದ್ದು, ಈ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನ ಉಂಟು ಮಾಡುತ್ತದೆ
ದೀಪವನ್ನು ಬೆಳಗಿಸಲು ಉತ್ತಮವಾದ ದಿಕ್ಕನ್ನು ಈಶಾನ್ಯ ಎನ್ನಲಾಗುತ್ತದೆ. ದೀಪಾವಳಿಯಂದು ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಮುಂದೆ ದೀಪವನ್ನು ಬೆಳಗಿಸುವುದು ಮಂಗಳಕರ, ಅಲ್ಲದೇ, ಇದರಿಂದ ಸಂಪತ್ತು ಸಹ ಹೆಚ್ಚಾಗುತ್ತದೆ.