ವಾಟ್ಸ್ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಇಂದು ಉಪಯೋಗಿಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಯೂಸರ್ಸ್ಗೆ ಕಾಲಕ್ಕೆ ತಕ್ಕಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ ಮುಂದಿನ ದಿನಗಳಲ್ಲಿ ಸಾಲು ಸಾಲು ಹೊಸ ಫೀಚರ್ಗಳನ್ನು ತರಲು ಕಾದುಕುಳಿತಿದೆ.
ಅದರಂತೆ ಳಕೆದಾರರ ಸುರಕ್ಷತೆಗೂ ಹೆಚ್ಚಿನ ಮಹತ್ವ ನೀಡಿದ್ದು, ಫೇಕ್ ನಂಬರ್ ಪತ್ತೆ ಮಾಡಬಹುದಾಗಿದೆ ಆಯ್ಕೆಯನ್ನು (Select) ನೀಡಿರುವುದು ಬಳಕೆದಾರರಿಗೆ ವಾಟ್ಸಾಪ್ ಉತ್ತಮ ಅನುಭವ ನೀಡಿದೆ. ಹಾಗದರೆ ಯಾವ ರೀತಿಯಲ್ಲಿ ಫೇಕ್ ನಂಬರ್ ಪತ್ತೆಹಚ್ಚೋದು ಎಂಬುದನ್ನುತಿಳಿಯೋಣ ಬನ್ನಿ.
ವಾಟ್ಸಾಪ್ನಲ್ಲಿ ಬಳಕೆದಾರರ ಸಂಖ್ಯೆ ಏರುತ್ತಿರುವ ಜೊತೆಗೆ ಜೊತೆಗೆನೇ ವಾಟ್ಸಾಪ್ ವಂಚನೆ ಕೂಡ ವೇಗವಾಗಿ ಹೆಚ್ಚುತ್ತಿದೆ. ಬಳಕೆದಾರರಿಗೆ ಕೆಲವೊಮ್ಮೆ ಅಪರಿಚಿತ ನಂಬರ್ಗಳಿಂದ ಮೆಸೆಜ್ ಬರುತ್ತವೆ.ಎನೋ ಲಾಭವಿದೆ ಅಂದುಕೊಂಡು ಅಪರಿಚಿತ ನಂಬರ್ ಕಳುಹಿಸಿದ ಲಿಂಕ್ ಅಥಾವ ಇನ್ನಿತರ ವಿಷಯಗಳನ್ನು ಟ್ಯಾಪ್ ಮಾಡಿದರೆ ಮೋಸ ಹೋಗುವುದಂತು ಪಕ್ಕಾ. ಎಷ್ಟೋ ಸಂದರ್ಭದಲ್ಲಿ ಆ ನಂಬರ್ಗಳು ಫೇಕ್ ಆಗಿರುವ ವಿಷಯವೇ ಗೊತ್ತಿರುವುದಿಲ್ಲ. ಅಂತಹ ನಂಬರ್ಗಳಿಂದ ಬರುವ ಮೆಸೆಜ್ಗಳಿಂದ ಬಳಕೆದಾರರು ಎಚ್ಚರವಹಿಸುವುದು ಅಗತ್ಯವಾಗಿದೆ.
ಆಂಡ್ರಾಯ್ಡ್ ಬಳಕೆದಾರರು ಈ ರೀತಿ ಚೆಕ್ ಮಾಡಿ
• ಹಂತ : 1 ವಾಟ್ಸಾಪ್ನಲ್ಲಿ ಅಪರಿಚಿತ ಮೆಸೆಜ್ ಸ್ವೀಕರಿಸಿದಾಗ, ಪ್ರೊಫೈಲ್ ಅನ್ನು ಟ್ಯಾಪ್ ಮಾಡಿ ಮತ್ತು ನೋಂದಾಯಿತ ಸಂಖ್ಯೆಯನ್ನು ಪರಿಶೀಲಿಸಿ.
• ಹಂತ : 2 ಸಂಖ್ಯೆಯು +1 ನೊಂದಿಗೆ ಪ್ರಾರಂಭವಾದರೆ, ಆ ನಂಬರ್ ನಕಲಿಯಾಗಿರಬಹುದು.
ಐಫೋನ್ ಬಳಕೆದಾರರು ಈ ರೀತಿ ಚೆಕ್ ಮಾಡಿ
• ಹಂತ : 1 ನಿಮ್ಮ ವಾಟ್ಸಾಪ್ ನಲ್ಲಿ ಮೆಸೆಜ್ ಕಳುಹಿಸಿದವರ ವಾಟ್ಸಾಪ್ ಚಾಟ್ ಅನ್ನು ತೆರೆಯಿರಿ.
• ಹಂತ : 2 ಮೆಸೆಜ್ ಕಳುಹಿಸಿದವರ ಹೆಸರಿನ ಮೇಲೆ ಕ್ಲಿಕ್ ಮಾಡಿ.
• ಹಂತ : 3 ಬಳಿಕ ಮೆಸೆಜ್ ಕಳುಹಿಸಿದವರ ಫೋನ್ ಸಂಖ್ಯೆಯನ್ನು ತಿಳಿಯಲು ಕೆಳಗೆ ನೋಡಿ.
• ಹಂತ : 4 ಅಲ್ಲಿ ಕಾಣಿಸುವ ನಂಬರ್ನ ಆರಂಭಿಕ ಸಂಖ್ಯೆ +1 ನೊಂದಿಗೆ ಪ್ರಾರಂಭವಾದರೆ, ಅದು ನಕಲಿ ನಂಬರ್ ಆಗಿರಲಿದೆ.
ಬ್ರಾಡ್ಕಾಸ್ಟ್ ಮೆಸೆಜ್ ಮಾಡುವುದು ಹೇಗೆ ಗೊತ್ತಾ?
ಹೆಚ್ಚು ಜನರಿಗೆ ವಾಟ್ಸಾಪ್ ಮೆಸೆಜ್ ಸೆಂಡ್ ಮಾಡಲು ವಾಟ್ಸಾಪ್ನಲ್ಲಿ ಲಭ್ಯವಿರುವ ಆಯ್ಕೆಯು Broadcast ಆಗಿದೆ. ಒಂದೇ ಮೆಸೆಜ್ ಅನ್ನು ಹೆಚ್ಚು ಜನರಿಗೆ ಶೇರ್ ಮಾಡಲು ನೆರವಾಗಲಿದ್ದು, ಬಳಕೆದಾರರ ಸಮಯ ಉಳಿಸುತ್ತದೆ. ಇದನ್ನು ಸುಲಭವಾಗಿ ಹೇಗೆ ಬಳಸುವುದು ಅಂತ ತಿಳಿದುಕೊಳ್ಳೊಣ ಬನ್ನಿ.
ಆಂಡ್ರಾಯ್ಡ್ ಬಳಕೆದಾರರು ಈ ರೀತಿ ಬ್ರಾಡ್ಕಾಸ್ಟ್ ಗ್ರೂಪ್ ಮಾಡಿ
• ಹಂತ : 1 ವಾಟ್ಸಾಪ್ ತೆರೆಯಿರಿ.
• ಹಂತ : 2 ಚಾಟ್ಸ್ ಮೇಲೆ ಕ್ಲಿಕ್ ಮಾಡಿ.
• ಹಂತ : 3 ‘ಬ್ರಾಡ್ಕಾಸ್ಟ್ ಮೆಸೆಜ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ
• ಹಂತ : 4 ಮೆಸೆಜ್ ಅನ್ನು ಕಳುಹಿಸಲು, ಹಲವಾರು ಕಾಂಟ್ಯಾಕ್ಟ್ಗಳನ್ನು ಆಯ್ಕೆ ಮಾಡಿ.
• ಹಂತ : 5 Done ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ಹಂತ : 6ಮೆಸೆಜ್ ಅನ್ನು ಟೈಪ್ ಮಾಡಿ ಮತ್ತು ಅಗತ್ಯ ಇದ್ದರೆ ಮೀಡಿಯಾ (ಫೋಟೊ/ವಿಡಿಯೋ) ಸೆಲ್ಲೇಟ್ ಮಾಡಿ.
• ಹಂತ : 7 ಕೊನೆಯದಾಗಿ, ಕಳುಹಿಸು (Send) ಬಟನ್ ಒತ್ತಿರಿ.
ಐಫೋನ್ ಬಳಕೆದಾರರು ಈ ರೀತಿ ಬ್ರಾಡ್ಕಾಸ್ಟ್ ಗ್ರೂಪ್ ಮಾಡಿ
• ಹಂತ : 1ವಾಟ್ಸಾಪ್ ತೆರೆಯಿರಿ ಮತ್ತು ಚಾಟ್ಗಳ ಮೇಲೆ ಕ್ಲಿಕ್ ಮಾಡಿ.
• ಹಂತ : 2 ನಂತರ ಹೊಸ ಚಾಟ್ ಮೇಲೆ ಕ್ಲಿಕ್ ಮಾಡಿ.
• ಹಂತ : 3ಈಗ ಹೊಸ ಗುಂಪಿನ ಮೇಲೆ ಕ್ಲಿಕ್ ಮಾಡಿ ಮತ್ತು ಮೆಸೆಜ್ ಅನ್ನು ಕಳುಹಿಸಲು ಹಲವಾರು ಕಾಂಟ್ಯಾಕ್ಟ್ಗಳನ್ನು ಸೇರಿಸಿ.
• ಹಂತ : 4ನೆಕ್ಸ್ಟ್(Next) ಆಯ್ಕೆ ಕ್ಲಿಕ್ ಮಾಡಿ.
• ಹಂತ : 5 ಗುಂಪಿನ ಹೆಸರು ಮತ್ತು ಫೋಟೊವನ್ನು ನಮೂದಿಸಿ, ನಂತರ ರಚಿಸಿ ಟ್ಯಾಪ್ ಮಾಡಿ.
• ಹಂತ : 6 ಈಗ ನಿಮ್ಮ ವಾಟ್ಸಾಪ್ನಲ್ಲಿ ಗುಂಪನ್ನು ತೆರೆಯಿರಿ ಮತ್ತು ಗುಂಪಿಗೆ ಮೆಸೆಜ್ ಕಳುಹಿಸಿ.
ಈ ಮಾದರಿಯಲ್ಲಿ ಬ್ರಾಡ್ಕಾಸ್ಟ್ ಮಾಡಿ ಒಂದೇ ಬಾರಿ ಹಲವಾರು ಗೆಳೆಯರಿಗೆ ಮೆಸೆಜ್ ಮಾಡುವ ಈ ಟ್ರಿಕ್ಸ್ ನ ಫೋಲೊ ಮಾಡಿ