ರಾಕಿಂಗ್ ಸ್ಟಾರ್ ಯಶ್ (Yash) ಅವರು ಅದೆಷ್ಟೇ ಬ್ಯುಸಿಯಾಗಿದ್ದರು. ಕುಟುಂಬದಲ್ಲಿ ವಿಚಾರದಲ್ಲಿ ರಾಜಿ ಆಗೋ ಮಾತೇಯಿಲ್ಲ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಹೊಸ ಸಿನಿಮಾ ಕೆಲಸದ ಬ್ಯುಸಿ ಶೆಡ್ಯೂಲ್ ನಡುವೆಯೂ ಮುದ್ದು ಮಗಳು ಐರಾ (Ayra Yash) ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಯಶ್-ರಾಧಿಕಾ ಆಚರಿಸಿದ್ದಾರೆ
ಯಶ್-ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಬರ್ತ್ಡೇಯನ್ನು ಬೆಂಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಡಿಸೆಂಬರ್ 2ರಂದು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಯಿತು. ಐರಾಸ್ ವಿಂಟರ್ ಲ್ಯಾಂಡ್ ಥೀಮ್ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಇದು ಐರಾಗೆ 5ನೇ ವರ್ಷದ ಹುಟ್ಟುಹಬ್ಬದ ಸ್ಪೆಷಲ್ ಆಗಿದೆ.
2.12.2028ರಂದು ನನ್ನ ಏಂಜಲ್ ನಮ್ಮ ಜೀವನಕ್ಕೆ ನಂದ ಸ್ಪೆಷಲ್ ಡೇ ಇದು. ಸಂತೋಷವನ್ನು ತಂದುಕೊಟ್ಟ ಮುದ್ದು ಮಗಳಿಗೆ 5 ವರ್ಷವಾಗಿದೆ ಅಂದರೆ ನಂಬಲು ಆಗ್ತಿಲ್ಲ. ಲವ್ ಯೂ ಮೈ ಲಿಟಲ್ ಗರ್ಲ್ ಎಂದು ನಟಿ ರಾಧಿಕಾ ಪಂಡಿತ್ (Radhika Pandit) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಐರಾ ಹುಟ್ಟುಹಬ್ಬದ ಸೆಲೆಬ್ರೇಶನ್ನ ಸ್ಪೆಷಲ್ ವಿಡಿಯೋ ಕೂಡ ನಟಿ ಶೇರ್ ಮಾಡಿದ್ದಾರೆ.
ಅಪ್ಪ-ಅಮ್ಮನ ಜೊತೆ ಕೇಕ್ ಕಟ್ ಮಾಡುವಾಗ ಸಂಭ್ರಮಿಸಿದ್ದರು. ನಾನಾ ರೀತಿಯ ಆಟಗಳನ್ನ ಆಡಿದ್ದರು. ಐರಾ ಹುಟ್ಟುಹಬ್ಬಕ್ಕೆ ಮನೆಯವರು, ಆಪ್ತರು, ಐರಾ ಫ್ರೆಂಡ್ಸ್ ಅಷ್ಟೇ ಭಾಗಿಯಾಗಿದ್ದರು. ಆಕಾಶನೀಲಿ ಡ್ರೆಸ್ನಲ್ಲಿ ಐರಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಏಂಜಲ್ನಂತೆ ಕಿರೀಟ ಧರಿಸಿ ಐರಾ ಮಿಂಚಿದ್ದರು. ಒಟ್ನಲ್ಲಿ ಐರಾ ಬರ್ತ್ಡೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.