ರೇಣುಕಾಸ್ಚಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಪ್ರಮುಖ ಆರೋಪಿ ಎನ್ನಲಾಗಿದೆ. ಆರೋಪಿ 1 ಎಂದು ಪವಿತ್ರಾ ಗೌಡ ಅವರನ್ನು ಗುರುತಿಸಲಾಗಿದೆ. ನಟ ದರ್ಶನ್ ವಿವಾದ ಕೇಂದ್ರಬಿಂದು ಪವಿತ್ರಾ ಗೌಡ. ನಟಿಯಾಗಿರುವುದಕ್ಕಿಂತ ಹೆಚ್ಚು ಪವಿತ್ರಾ ಗೌಡ ದರ್ಶನ್ ಗೆಳತಿಯಾಗಿಯೇ ಫೇಮಸ್ ಆಗಿದ್ದಾರೆ.
ಸದ್ಯ ಪವಿತ್ರಾ ಗೌಡ ಉದ್ಯಮವನ್ನು ನಡೆಸುತ್ತಿದ್ದಾರೆ. ಆರ್ಆರ್ ನಗರದಲ್ಲಿ ಅವರ ಮಾಲೀಕತ್ವದ ರೆಡ್ ಕಾರ್ಪೆಟ್ ಎಂಬ ಒಂದು ಬಟ್ಟೆ ಅಂಗಡಿ ಇದೆ. ಇನ್ನು, ಸಿನಿಮಾ ವಿಚಾರಕ್ಕೆ ಬಂದರೆ 10-12 ವರ್ಷಗಳ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದರು. ಅಗಮ್ಯ, ಛತ್ರಿಗಳು ಸಾರ್ ಛತ್ರಿಗಳು ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಯಾವ ಸಿನಿಮಾಗಳಿಂದಲೂ ಅವರ ವೃತ್ತಿ ಬದುಕಿಗೆ ಅಂಥ ಸಕ್ಸಸ್ ಏನೂ ಸಿಕ್ಕಿರಲಿಲ್ಲ.
ಆನಂತರ ಅವರು ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು. ಸದ್ಯ ರೇಣುಕಾ ಸ್ವಾಮಿ ಕೊಲೆ ಕೇಸ್ನಿಂದಾಗಿ ಪವಿತ್ರಾ ಗೌಡ ಹೆಸರು ಲೈಮ್ ಲೈಟ್ಗೆ ಬರುವಂತೆ ಆಗಿದೆ. ಸದ್ಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅವರನ್ನು ಈಗ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿಕೊಡಲಾಗಿದೆ. ಅಂದಹಾಗೆ, ಪವಿತ್ರಾ ಗೌಡ ಅವರ ಆರಂಭಿಕ ಜೀವನ ಹೇಗಿತ್ತು? ಸಿನಿಮಾ ಬದುಕು ಹೇಗಿತ್ತು? ಇಲ್ಲಿದೆ ಮಾಹಿತಿ
ಉಮೇಶ್ ಗೌಡ ಎಂಬುವವರು ನಿರ್ದೇಶನ ಮಾಡಿದ್ದ ‘ಅಗಮ್ಯ’ ಸಿನಿಮಾದಲ್ಲಿ ಪವಿತ್ರಾ ಗೌಡ ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದರು.ಅಗಮ್ಯ ಸಿನಿಮಾಗೆ ಆಡಿಷನ್ ಕೊಡುವುದಕ್ಕೆ ಬಂದಾಗ ಪವಿತ್ರಾಗೆ ಮದುವೆ ಆಗಿ, ಒಂದು ಮಗು ಇತ್ತು ಮತ್ತು ಪತಿಯಿಂದ ಅವರು ದೂರವಾಗಿದ್ದರು.ಅಗಮ್ಯ’ ಸಿನಿಮಾ ನಿರ್ದೇಶಕರು ಮೊದಲ ಬಾರಿಗೆ ಪವಿತ್ರಾ ಗೌಡ ಅವರನ್ನು ಆಡಿಷನ್ ಮಾಡಿದಾಗ, ಅವರ ನಟನೆ ಅಷ್ಟೇನೂ ಇಂಪ್ರೆಸ್ ಆಗಿರಲಿಲ್ಲವಂತೆ.
ಆಗ ಪವಿತ್ರಾ ಗೌಡ ಅವರು ಕೋಣನಕುಂಟೆ ಬಳಿ ಸಿಂಗಲ್ ಬಿಎಚ್ಕೆ ಮನೆಯೊಂದರಲ್ಲಿ ಇದ್ದರಂತೆ. ಆದರೆ ಈಗ ಅವರು ಆರ್ಆರ್ ನಗರದಲ್ಲಿ ಐಷಾರಾಮಿ ಮನೆಯಲ್ಲಿ ವಾಸ ಮಾಡುತ್ತಿದ್ದರು.’ಅಗಮ್ಯ’ ಸಿನಿಮಾ ಟೀಮ್ ಜೊತೆಗೆ ಪವಿತ್ರಾ ಗೌಡ ಚೆನ್ನಾಗಿ ಬೆರೆಯುತ್ತಿದ್ದರಂತೆ. ತಂಡದಲ್ಲಿ ಅವರು ಒಬ್ಬರಾಗಿದ್ದರು. ಆ ಸಿನಿಮಾಕ್ಕೆ ಅವರಿಗೆ 20-25 ಸಾವಿರ ರೂ. ಸಂಭಾವನೆ ಸಿಕ್ಕಿರಬಹುದು ಎಂಬ ಮಾಹಿತಿ ಕೇಳಿಬಂದಿದೆ.
ಅಗಮ್ಯ’ ಸಿನಿಮಾದ ತೆರೆಕಂಡ ಹಲವು ದಿನಗಳ ಬಳಿಕ ಒಮ್ಮೆ ಪವಿತ್ರಾ ಗೌಡ ಮಿನಿ ಕೂಪರ್ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಆಗ ‘ಅಗಮ್ಯ’ ಸಿನಿಮಾದ ನಿರ್ದೇಶಕರು ಶಾಕ್ ಆಗಿದ್ದರಂತೆ. 3 ವರ್ಷಗಳಲ್ಲಿ ಪವಿತ್ರಾ ಗೌಡ ಲೈಫ್ ಸಾಕಷ್ಟು ಬದಲಾವಣೆ ಆಗಿತ್ತಂತೆ.