ಹಣವನ್ನು ತ್ವರಿತವಾಗಿ ಹೆಚ್ಚಿಸಬೇಕು ಎನ್ನುವ ಯೋಚನೆ ಇದ್ದರೆ ಅದನ್ನು ಬ್ಯಾಂಕ್ ನಲ್ಲಿ ಸುಮ್ಮನೆ ಇರಿಸುವ ಬದಲು ಪೋಸ್ಟ್ ಆಫೀಸ್ ನ ವಿವಿಧ ಯೋಜನೆಗಳಲ್ಲಿ ಒಂದಾದ ಸುಕನ್ಯಾ ಸಮೃದ್ಧಿ ಯೋಜನೆಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಮ್ಯೂಚುವಲ್ ಫಂಡ್ಗಳಂತಹ ಯೋಜನೆಗಳಲ್ಲಿ ಹೂಡಿಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದು ಇದೇ ಕಾರಣಕ್ಕೆ. ಹೂಡಿಕೆ ಮಾಡಲು ಜೊತೆಗೆ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ ಅನೇಕ ಸರ್ಕಾರಿ ಯೋಜನೆಗಳಿವೆ. ಭಾರತ ಸರ್ಕಾರವು ಮಕ್ಕಳ ಭವಿಷ್ಯದ ಮೇಲೆ ಕೇಂದ್ರೀಕೃತವಾಗಿರುವ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಇದು ಉತ್ತಮ ಆದಾಯವನ್ನು ನೀಡುತ್ತದೆ.
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದಾ..? ಹಾಗಾದ್ರೆ ಈ ಟಿಕ್ಸ್ ಟ್ರೈ ಮಾಡಿ!
ಕೇಂದ್ರ ಸರ್ಕಾರದ ಈ ಯೋಜನೆಯು ಹೆಣ್ಣುಮಕ್ಕಳ ಮೇಲೆ ಕೇಂದ್ರೀಕೃತವಾಗಿದೆ. ದೇಶದ ಯಾವುದೇ ನಾಗರಿಕರು ತಮ್ಮ 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಗಳಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಇದು ಸುಕನ್ಯಾ ಸಮೃದ್ಧಿ ಯೋಜನೆ. ಇದರ ಅಡಿಯಲ್ಲಿ ಯಾರಾದರೂ ವಾರ್ಷಿಕವಾಗಿ ಕನಿಷ್ಠ 250 ರೂ. ನಿಂದ ಗರಿಷ್ಠ 1.5 ಲಕ್ಷ ರೂ. ವರೆಗೆ ಠೇವಣಿ ಮಾಡಬಹುದು. ನಿಮ್ಮ ಮಗಳ ವಯಸ್ಸು 10 ವರ್ಷ ಇದ್ದಾಗ ನೀವು ಈ ಸ್ಕೀಮ್ ಪಡೆದರೆ ಆಕೆಯ ವಯಸ್ಸು 31 ವರ್ಷ ಆಗುವವರೆಗೂ ಕಾಯಬೇಕಾಗುತ್ತದೆ. ಸಾಧ್ಯವಾದಷ್ಟೂ ಬೇಗ ಈ ಯೋಜನೆ ಆರಂಭಿಸುವುದು ಉತ್ತಮ.
1,000 ರೂನಿಂದ 5,000 ರೂವರೆಗೆ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಸಿಗುತ್ತದೆ?
ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಂದು ವರ್ಷಕ್ಕೆ 1,50,000 ರೂವರೆಗೆ ಹೂಡಿಕೆ ಮಾಡುವ ಅವಕಾಶ ಇದೆ. ಅಂದರೆ ತಿಂಗಳಿಗೆ 12,500 ರೂ ಹೂಡಿಕೆ ಮಾಡಬಹುದು. ಇಷ್ಟು ಮೊತ್ತವನ್ನು ನೀವು ಹೂಡಿಕೆ ಮಾಡುತ್ತಾ ಹೋದರೆ ಒಟ್ಟು ಹೂಡಿಕೆ ಮತ್ತ 22.5 ಲಕ್ಷ ರೂ ಆಗುತ್ತದೆ. ಮೆಚ್ಯೂರಿಟಿ ಆದ ಬಳಿಕ ನಿಮ್ಮ ಕೈಗೆ ಸಿಗುವ ಮೊತ್ತ 67.34 ಲಕ್ಷ ರೂ.
ತಿಂಗಳಿಗೆ 1,000 ರೂ ಹೂಡಿಕೆ ಮಾಡಿದರೆ?
ನೀವು ತಿಂಗಳಿಗೆ 1,000 ರೂನಂತೆ ಹಣ ಉಳಿಸಿದರೆ, ವರ್ಷಕ್ಕೆ 12,000 ಹಣವನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಹಾಕಬಹುದು. ಅಷ್ಟು ಹೂಡಿಕೆ ಮಾಡಿದರೆ 15 ವರ್ಷದಲ್ಲಿ ಒಟ್ಟು ಮೊತ್ತ 1,80,000 ರೂ ಆಗುತ್ತದೆ. ಮೆಚ್ಯೂರಿಟಿ ಬಳಿಕ ಸಿಗುವ ರಿಟರ್ನ್ 5.38 ಲಕ್ಷ ರೂ ಆಗುತ್ತದೆ.
ತಿಂಗಳಿಗೆ 2,000 ರೂ ಹೂಡಿಕೆ ಮಾಡಿದರೆ?
ನೀವು ತಿಂಗಳಿಗೆ 2,000 ರೂನಂತೆ ವರ್ಷಕ್ಕೆ 24,000 ರೂ ಹಣವನ್ನು ಎಸ್ಎಸ್ವೈಯಲ್ಲಿ ವಿನಿಯೋಗಿಸಿ. ಮೆಚ್ಯೂರಿಟಿ ಬಳಿಕ ನಿಮ್ಮ ಹಣ 10.77 ಲಕ್ಷ ರೂ ಆಗುತ್ತದೆ.
ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ?
ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ತಿಂಗಳಿಗೆ 5,000 ರೂನಂತೆ ವರ್ಷಕ್ಕೆ 60,000 ರೂ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ 9 ಲಕ್ಷ ರೂ ಆಗುತ್ತದೆ. ಮೆಚ್ಯೂರಿಟಿ ಬಳಿಕ ನಿಮಗೆ ಸಿಗುವ ರಿಟರ್ನ್ 27 ಲಕ್ಷ ರೂ ಇರುತ್ತದೆ.