ಬೆಂಗಳೂರು:- ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಹೆಚ್ಚು ಸದ್ದು ಮಾಡುತ್ತಿದೆ. ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಈವರೆಗೆ ಸರಿ ಸುಮಾರು 85 ಕೋಟಿ ಹಣ ಮುಟ್ಟುಗೋಲು ಹಾಕಲಾಗಿದೆ.
ನಗದು, ಬ್ಯಾಂಕ್ನ ಹಣ ಸೇರಿದಂತೆ 2 ಕಾರುಗಳನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೇರೆ ಬೇರೆ ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ 30 ಲಕ್ಷ ರೂ. ಹಣವಿತ್ತು. ಅದರಲ್ಲಿ 18 ಅಕೌಂಟ್ಗಳಿಗೆ 89 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾದ್ದರಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈವರೆಗೂ 13 ಕೋಟಿ ರೂ. ಸಹ ಸೀಜ್ ಮಾಡಲಾಗಿದೆ. ರತ್ನಾಕರ ಬ್ಯಾಂಕ್ ನಿಂದ 5 ಕೋಟಿ ರೂ. ಹಣ ವಾಪಾಸ್ ಬಂದಿದೆ. ಒಟ್ಟು 85 ಕೋಟಿಗೂ ಅಧಿಕ ಹಣ ವಿವಿಧ ಹಂತದ ರಿಕವರಿಯಲ್ಲಿದೆ ಅಂತಾ ಮಾಹಿತಿ ನೀಡಿದ್ದಾರೆ.
ಬಿಜೆಪಿ-ಜೆಡಿಎಸ್ನಿಂದ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದ್ದು, ನಿಯಮ 69ರಡಿ ಚರ್ಚೆಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಆ ಬಗ್ಗೆ ವಿಪಕ್ಷದವರು ಸದನದಲ್ಲಿ ಚರ್ಚಿಸಿದ್ದಾರೆ. ಮೂರು ದಿನಗಳ ಅಕ್ರಮ ಪ್ರಕರಣದ ಸದನದಲ್ಲಿ ಚರ್ಚೆ ಮಾಡಿದರು. ಯಾವುದೇ ವಿಚಾರ ಪ್ರಸ್ತಾಪ ಮಾಡಿದರೂ ಉತ್ತರ ಕೊಡುವ ಹಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ 89 ಕೋಟಿ 65 ಲಕ್ಷ ರೂ ಅವ್ಯವಹಾರ ಆಗಿದೆ ಅಂತಾ ಇಡಿ ಇತ್ತೀಚೆಗೆ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಅಲ್ಲದೇ, ನಾಲ್ಕು ರಾಜ್ಯಗಳ 23 ಕಡೆ ದಾಳಿ ಮಾಡಿತ್ತು. 18 ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು ನಂತ್ರ ಆ ನಕಲಿ ಖಾತೆಗಳಿಂದ ನಗದು ವಿತ್ ಡ್ರಾ ಮಾಡಲಾಗಿತ್ತು.
ಇದಕ್ಕೆ ಸಂಬಂಧ ಪಟ್ಟಂತೆ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಮನೆಯಲ್ಲಿ ದಾಖಲೆ ಪತ್ತೆಯಾಗಿದೆ ಅಂತಾ ಇಡಿ ಉಲ್ಲೇಖಿಸಿತ್ತು. ಜೊತೆಗೆ, ವಾಲ್ಮೀಕಿ ನಿಗಮದ ಹಣವನ್ನ ಚುನಾವಣೆಗೆ ಬಳಸಲಾಗಿದೆ ಎಂಬ ಸ್ಫೋಟಕ ಮಾಹಿತಿಯೂ ಬಹಿರಂಗವಾಗಿತ್ತು. ಅದರಲ್ಲೂ ಚುನಾವಣೆಯಲ್ಲಿ ಮದ್ಯ ಖರೀದಿ ಮಾಡಲು ಈ ಹಣ ಬಳಕೆ ಮಾಡಲಾಗಿತ್ತು ಎನ್ನಲಾಗಿದೆ.