ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ ಹನುಮಂತ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ವಿಜೇತರಾದ ಹನುಮಂತಗೆ ಎಲ್ಲರಿಗೂ ಗೊತ್ತುಇರೋ ಹಾಗೇ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. ಆದರೆ ಹನುಮಂತಗೆ ಮಾತ್ರ ಇಷ್ಟು ಹಣ ಕೈ ಸೇರಲ್ಲ.. 50 ಲಕ್ಷದಲ್ಲಿ ಹನುಮಂತಗೆ ಸಿಗೋದೇ ಕೇವಲ 34 ಲಕ್ಷ ಹಣ..
ಹೌದು, ಸೆಕ್ಷನ್ 194B ಪ್ರಕಾರ ಈ ಗೆಲುವಿನ ಮೇಲೆ 30% ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ಜೊತೆಗೆ ವಿಜೇತರು 1% ರಷ್ಟು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಸಹ ಪಾವತಿಸಬೇಕಾಗುತ್ತದೆ.
Chanakya Niti: ವಿವಾಹಿತ ಪುರುಷರು ಬೇರೆ ಮಹಿಳೆಯಗೆ ಆಕರ್ಷಿತರಾಗೋದ್ಯಾಕೆ..? ಚಾಣಕ್ಯ ನೀಡಿದ 5 ಕಾರಣಗಳು ಇಲ್ಲಿದೆ
ಇದರಿಂದ ಒಟ್ಟು ತೆರಿಗೆ ದರ 31.2% ಏರಿಕೆಯಾಗುತ್ತದೆ. ಇದರ ಜೊತೆ ಬಹುಮಾನದ ಹಣವು 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಹೆಚ್ಚುವರಿಯಾಗಿ 10% ಶುಲ್ಕ ಕೂಡ ಅನ್ವಯವಾಗುತ್ತೆ.. ಹೀಗಾಗಿ ಹನುಮಂತಗೆ ತೆರಿಗೆ, ಸೆಸ್ ಎಲ್ಲಾ ಕಡಿತಗೊಂಡು 34.40 ಲಕ್ಷ ಸಿಗಬಹುದು. ಬಹುಮಾನದಲ್ಲಿ 15.60 ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ.