ಪ್ರಯಾಗ್ರಾಜ್ನ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೋನಾಲಿಸಾ ತನ್ನ ಕಣ್ಣುಗಳಿಂದಲೇ ಹಲವರ ನಿದ್ದೆಗೆಡಿಸಿದ್ದಳು. ಇದೀಗ ದೊಡ್ಡ ಪರದೆಯದಲ್ಲಿ ಮಿಂಚಲು ಸಜ್ಜಾಗಿರುವ ಮೊನಾಲಿಸಾ ತಾವು ನಟಿಸುತ್ತಿರುವ ಮೊದಲ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ತನ್ನ ಕಣ್ಣುಗಳ ಮೂಲಕವೇ ಸದ್ದು ಮಾಡುತ್ತಿರುವ ಮೊನಾಲಿಸಾ ಬಾಲಿವುಡ್ನ `ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದರು. ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 21 ಲಕ್ಷ ರೂ. ಪಡೆದಿದ್ದಾರಂತೆ. ಇದರೊಟ್ಟಿಗೆ ಸ್ಥಳೀಯ ಚಿತ್ರದ ಪ್ರಚಾರಕ್ಕಾಗಿ 15 ಲಕ್ಷ ರೂ. ಪಡೆದಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಇನ್ನೂ ಬರಹಗಾರ ಹಾಗೂ ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾಳ ಮನೆಗೆ ಭೇಟಿ ನೀಡಿದ್ದು, ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ‘ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಓಕೆ ಎಂದಿದ್ದಾರೆ.
ಇನ್ನೂ ಉತ್ತರ ಪ್ರದೇಶದ ಪ್ರಯಾಗ್ರಾಜ್ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹುಡುಗಿಯೊಬ್ಬಳು ರುದ್ರಾಕ್ಷಿ ಮಾರುತ್ತಿದ್ದಳು. ಆಕೆಯ ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್ ಆಗಿ ಇಂಟರ್ನೆಟ್ನಲ್ಲಿ ಸೆನ್ಸೇಷನ್ ಮೂಡಿಸಿದ್ದಾಳೆ.