ಸೆಲೆಬ್ರಿಟಿಗಳ ಬಗ್ಗೆ ಜನಸಾಮಾನ್ಯರಿಗೆ ಸಾಕಷ್ಟು ಕುತೂಹಲ ಇರುತ್ತೆ. ಅವರು ಧರಿಸೋ ಬಟ್ಟೆಯಿಂದ ಹಿಡಿದು ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿದುಕೊಳ್ಳುವ ಇಂಟ್ರೆಸ್ಟ್ ಇರುತ್ತೆ. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಆಸ್ತಿ ಮೌಲ್ಯ ಎಷ್ಟು ಎಂಬುದು ರಿವೀಲ್ ಆಗಿದೆ.
ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ನಟನೆಯ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಇದ್ದಾರೆ. ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜಯಾ ಬಚ್ಚನ್ ಸಮಾಜವಾದಿ ಪಾರ್ಟಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವೇಳೆ ಅವರು ತಮ್ಮ ಆಸ್ತಿ ವಿವರ ನೀಡಿದ್ದಾರೆ.
ನಾಮನಿರ್ದೇಶನದ ವೇಳೆ ನೀಡಿರುವ ಆಸ್ತಿ ವಿವರ ಪ್ರಕಾರ, ಬಚ್ಚನ್ ಕುಟುಂಬ 1,578 ಕೋಟಿ ರೂಪಾಯಿ ಸ್ವತ್ತುಗಳನ್ನು ಹೊಂದಿದ್ದಾರೆ. 2022-23ರ ಅವಧಿಯಲ್ಲಿ ವೈಯಕ್ತಿವಾಗಿ ಅವರು 1.63 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ವೈಯಕ್ತಿಕ ನೆಟ್ವರ್ತ್ 273 ಕೋಟಿ ರೂಪಾಯಿ ಇದೆ. ಅವರ ಬಳಿ 54 ಕೋಟಿ ರೂಪಾಯಿಯ ಜ್ಯುವೆಲರಿ ಇದೆ. 16 ವಾಹನಗಳು ಇದ್ದು ಇದರಬೆಲೆ 17.66 ಕೋಟಿ ರೂಪಾಯಿ ಆಗಿದೆ.
ಜಯಾ ಬಚ್ಚನ್ ಅವರ ಬಳಿ 40.97 ಕೋಟಿ ರೂಪಾಯಿ ಜ್ಯುವೆಲರಿ ಇದೆ. ಅವರ ಬಳಿ ವಾಹನಗಳ ಸಂಖ್ಯೆ ಕಡಿಮೆ. ಇಬ್ಬರಿಂದ 849 ಕೋಟಿ ರೂಪಾಯಿ ಚರಾಸ್ತಿ ಇದೆ. ಜಯಾ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10 ಕೋಟಿ ರೂಪಾಯಿ ಇದೆ. ಅಮಿತಾಭ್ ಬಚ್ಚನ್ ಬಳಿ 120 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ! ವಿವರವಾಗಿ ಹೇಳಬೇಕು ಎಂದರೆ ಅವರ ಖಾತೆಯಲ್ಲಿ 120,45,62,083 ರೂಪಾಯಿ ಇದೆ.
ಜಯಾ ಬಚ್ಚನ್ ಅವರಿಗೆ ಬೇರೆ ಬೇರೆ ಮೂಲಗಳಿಂದ ಹಣ ಬರುತ್ತದೆ. ಬ್ರ್ಯಾಂಡ್ಗಳ ಪ್ರಚಾರ, ಎಂಪಿ ಸ್ಯಾಲರಿ ಹಾಗೂ ಸಿನಿಮಾಗಳಿಂದ ಹಣ ಬರುತ್ತದೆ. ಅಮಿತಾಭ್ ಬಚ್ಚನ್ ಅವರಿಗೆ ಬಡ್ಡಿ, ಬಾಡಿಗೆ, ಡಿವಿಡಂಟ್, ಸೋಲಾರ್ ಪ್ಲ್ಯಾಂಟ್ ಮೊದಲಾದ ಕಡೆಗಳಿಂದ ಹಣ ಬರುತ್ತದೆ ಎಂದು ತಿಳಿಸಿದ್ದಾರೆ.