ಪ್ರತಿಯೊಬ್ಬರ ಮನೆಯಲ್ಲೂ ಮೆಂತ್ಯ ಕಾಳು ಇದ್ದೆ ಇರುತ್ತದೆ. ಮೆಂತ್ಯ ಕಾಳು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಪ್ರತಿದಿನ ಮೆಂತ್ಯಕಾಳು ತಿನ್ನುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಜಿ.ಟಿ.ದೇವೇಗೌಡರು,ಹೊಗಳೋದು ಎಷ್ಟೊತ್ತು?ಬೈಯ್ಯೋದು ಎಷ್ಟೊತ್ತು?: HDK ವ್ಯಂಗ್ಯ!
ಮೆಂತ್ಯವು ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಉರಿಯೂತದ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೆನೆಸಿದ ಮೆಂತ್ಯ ಕಾಳುಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಾನಾ ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು
ಮೆಂತ್ಯ ಕಾಳನ್ನು ಪ್ರತಿದಿನ ಸೇವನೆ ಮಾಡುವುದರಿಂದ ಎದೆ ಹಾಲು ಉತ್ಪತ್ತಿಯಾಗುತ್ತದೆ. ಇದು ತಾಯಿಯ ಆರೋಗ್ಯಕ್ಕೂ ಉತ್ತಮ ಆಹಾರವಾಗಿದೆ.
ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಮೆಂತ್ಯ ಕಾಳಿನಷ್ಟು ಉತ್ತಮ ಆಹಾರ ಮತ್ತೊಂದಿಲ್ಲ. ಇದು ದೇಹದಲ್ಲಿರುವ ಯಾವುದೇ ವಿಷಕಾರಕ ಅಂಶಗಳನ್ನು ಹೊರ ಹಾಕಿ ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ
ಬ್ಲಡ್ ಶುಗರ್ ಪ್ರಮಾಣವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೂ ಮೆಂತ್ಯ ಕಾಳು ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ಗಾಲಕ್ಟೋಮನನ್ ಎಂದು ಕರೆಯಲ್ಪಡುವ ನೈಸರ್ಗಿಕವಾಗಿ ಕರಗುವ ಫೈಬರ್ ಇದೆ. ಇದು ರಕ್ತವು ಸಕ್ಕರೆ ಅಂಶ ಹೀರುವ ವೇಗವನ್ನು ಕಡಿಮೆಗೊಳಿಸುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ಮೆಂತ್ಯ ಕಾಳನ್ನು ಜಗಿದು ತಿಂದರೆ ಹೆಚ್ಚುವರಿ ಕ್ಯಾಲೋರಿ ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತದೆ. ಮೆಂತೆಯಲ್ಲಿ ಕ್ಯಾಲ್ಸಿಯಂ ಅಂಶ ಇದ್ದು, ಇದು ಎದೆಯುರಿ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.