ಟೀಂ ಇಂಡಿಯಾದ ಖ್ಯಾತ ಬೌಲರ್ ಯುಜವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಅವರನ್ನು ಕ್ರಿಕೆಟ್ ಲೋಕದಲ್ಲಿ ಕ್ಯೂಟ್ ಜೋಡಿ ಎಂದು ಕರೆಯಲಾಗುತ್ತದೆ. ಚಹಾಲ್ ಮತ್ತು ಧನಶ್ರೀ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಪೋಟೋಗಳನ್ನು ಹಾಕುವ ಮೂಲಕ ಇವರಿಬ್ಬರೂ ಎಂದಿಗೂ ಸಂತಸದಿಂದ ಇರುತ್ತಿದ್ದರು. ಆದರೆ ಇದೀಗ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿದೆ.
ತುಳಸಿ ಗಿಡದ ಪಕ್ಕ ಈ ವಸ್ತು ಇಡಬೇಡಿ: ಶ್ರೀಮಂತನೂ ಕೂಡ ಕಡುಬಡವನಾಗುತ್ತಾನೆ!
ಹೌದು ಯುಜವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ಶೀಘ್ರವೇ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆಪ್ತ ಮೂಲಗಳ ಪ್ರಕಾರ ಇಬ್ಬರು ಪ್ರತ್ಯೇಕವಾಗುವುದು ನಿಜ. ವಿಚ್ಛೇದನ ಪ್ರಕ್ರಿಯೆಗಳು ಇನ್ನೂ ಅಂತಿಮಗೊಂಡಿಲ್ಲ. ಎಲ್ಲಾ ಷರತ್ತುಗಳು ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನೂ ಈ ಸುದ್ದಿ ಒಂದು ವೇಳೆ ನಿಜವಾಗಿ ಕೋರ್ಟ್ ಮೂಲಕ ವಿಚ್ಛೇದನ ಪಡೆದರೆ ಚಹಲ್ ಧನಶ್ರೀ ಅವರಿಗೆ ಭಾರೀ ಜೀವನಾಂಶ ನೀಡಬೇಕಾಗುತ್ತದೆ.
ಚಹಲ್ ಆಸ್ತಿ ಎಷ್ಟಿದೆ?
ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ ದೇಶಕ್ಕಾಗಿ 200 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿರುವ ಚಹಲ್ ಟೀಂ ಇಂಡಿಯಾದ ಟಾಪ್ ಬೌಲರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಹಲ್ 160 ಐಪಿಎಲ್ (IPL) ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.
2024ರ ಆವೃತ್ತಿಯಲ್ಲಿ ಚಹಲ್ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ಈ ವೇಳೆ ಅವರಿಗೆ 6.5 ಕೋಟಿ ರೂ. ನೀಡಿತ್ತು. ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ 18 ಕೋಟಿ ರೂ. ನೀಡಿ ಚಹಲ್ ಅವರನ್ನು ಖರೀದಿಸಿತ್ತು.
ಚಾಹಲ್ ಅವರು 2019 ರಲ್ಲಿ ಜೀವನಶೈಲಿ ಬ್ರ್ಯಾಂಡ್ ‘ಚೆಕ್ಮೇಟ್’ ಅನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ಅವರು ಫಿಟ್ನೆಸ್ ಅಪ್ಲಿಕೇಶನ್ ʼಗ್ರಿಪ್ʼ ಮತ್ತು ʼYUZOʼ ಬಟ್ಟೆ ಲೈನ್ನಲ್ಲಿ ಪಾಲನ್ನು ಹೊಂದಿದ್ದಾರೆ. ಚಹಲ್ ಪೋರ್ಷೆ ಕೆಯೆನ್ನೆ ಎಸ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಲಂಬೋರ್ಘಿನಿ ಸೆಂಟೆನಾರಿಯೊ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಬ್ರ್ಯಾಂಡ್ ಎಂಡಾರ್ಸ್ಮೆಂಟ್ಗಳಿಂದ ಉತ್ತಮ ಮೊತ್ತವನ್ನು ಪಡೆಯುತ್ತಿರುವ ಚಹಲ್ ಅವರ ನಿವ್ವಳ ಮೌಲ್ಯ ಸುಮಾರು 45 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಅಧಿಕೃತವಾಗಿ ಕೋರ್ಟ್ ಮೂಲಕ ಧನಶ್ರೀಗೆ ಡಿವೋರ್ಸ್ ನೀಡಿದರೆ ಚಹಲ್ ಅವರು ತಮ್ಮ ಸಂಪತ್ತಿನ 20% ರಿಂದ 30% ವರೆಗಿನ ಪಾಲನ್ನು ನೀಡಬೇಕಾಗಬಹುದು. ಎಷ್ಟು ಜೀವನಾಂಶ ನೀಡಬೇಕು ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ.
ಧನಶ್ರೀ ಅಸ್ತಿ ಎಷ್ಟಿದೆ?
ನೃತ್ಯ ಸಂಯೋಜನೆ, ಬ್ರಾಂಡ್ ಪ್ರಚಾರ, ಸೋಶಿಯಲ್ ಮೀಡಿಯಾಗಳಿಂದ ಧನಶ್ರೀ ಆದಾಯ ಸಂಪಾದಿಸುತ್ತಿದ್ದಾರೆ. ಮಾಧ್ಯಮವೊಂದರ ಪ್ರಕಾರ ಧನಶ್ರೀ ಅವರು ಅಂದಾಜು 25 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.