‘ಆರೋಗ್ಯವೇ ಭಾಗ್ಯ’ ಎಂಬ ಮಾತನ್ನು ನೀವು ಕೇಳಿರಬಹುದು. ಇದು ನಮ್ಮ ಆರೋಗ್ಯ ನಮಗೆ ಎಷ್ಟು ಮುಖ್ಯ ಎಂಬುದನ್ನು ನೆನಪಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆದರೆ ದುರದೃಷ್ಟವಶಾತ್ ವಯಸ್ಸಾದಂತೆ ಪ್ರತಿಯೊಬ್ಬರಲ್ಲೂ ನೋವು ಮತ್ತು ಗಾಯಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ.
ತಜ್ಞರ ಪ್ರಕಾರ, ದೇಹವು ತನ್ನ ಯೌವನವನ್ನು 30 ವರ್ಷ ವಯಸ್ಸಿನವರೆಗೂ ಉಳಿಸಿಕೊಳ್ಳುತ್ತದೆ, ಆದರೆ 40 ದಾಟಿದ ನಂತರ ವಿಷಯಗಳು ವೇಗವಾಗಿ ಬದಲಾಗಲಾರಂಭಿಸುತ್ತದೆ. ಆದ್ದರಿಂದ ಪುರುಷರು ನಿತ್ಯ ಒತ್ತಡದ ಜೀವನ ನಡೆಸುತ್ತಿರುತ್ತಾರೆ, ಆರೋಗ್ಯದ ಬಗ್ಗೆ ಕಾಳಜಿವಹಿಸುವ ಎಷ್ಟೇ ಮಾತನಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ತಮ್ಮ ಒತ್ತಡವನ್ನು ಬದಿಗಿಟ್ಟು ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಮಯ ಬಂದಿದೆ.
40 ವರ್ಷ ದಾಟಿದ ಪುರುಷರು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಫೈಬರ್ಯುಕ್ತ ಆಹಾರ ಸೇವಿಸಿ: ಫೈಬರ್ಯುಕ್ತ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಹಾಗೆಯೇ ಫೈಬರ್ಯುಕ್ತ ಆಹಾರದಿಂದ ಹೃದಯ ಸಂಬಂಧಿ ಕಾಯಿಲೆ, ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಬಟಾಣಿ, ಮಸೂರ, ಬಿಳಿ ಎಳ್ಳು, ಅಗಸೆಬೀಜ, ಕುಂಬಳಕಾಯಿ ಬೀಜ, ಓಟ್ಸ್, ಬಾದಾಮಿ, ಗೋಡಂಬಿ, ಮತ್ತು ಪಾಲಿಶ್ ಮಾಡದ ಅಕ್ಕಿಯಲ್ಲಿ ಹೆಚ್ಚು ಫೈಬರ್ ಅಂಶವಿರುತ್ತದೆ.
ಸೋಡಿಯಂ ಅಂಶವಿರುವ ಆಹಾರದ ಬಳಕೆ ಕಡಿಮೆ ಮಾಡಿ: ಆಹಾರದಲ್ಲಿ ಸೋಡಿಯಂ ಅಂಶ ಸೇವನೆಯನ್ನು ಕಡಿಮೆ ಮಾಡಿ. ಬೆಳೆಹಣ್ಣು ಹಾಗೂ ಪಾಲಕ್ ಸೊಪ್ಪಿನ ಸೇವನೆ ಹೆಚ್ಚಿಸಿ ಪೊಟ್ಯಾಶಿಯಂ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ.
ಕೊಬ್ಬಿನ ಆಹಾರ ಸೇವನೆ ಕಡಿಮೆ ಮಾಡಿ: ಕೆಂಪು ಮಾಂಸ, ಹಾಲು ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುವ ಸ್ಯಾಚುರೇಟೆಡ್ ಕೊಬ್ಬನ್ನು ತಪ್ಪಿಸುವುದು ಪ್ರಯೋಜನಕಾರಿಯಾಗಿದೆ. ಹಸುವಿನ ತುಪ್ಪವನ್ನು ಸೇವಿಸಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕರಿಮೆಣಸು, ದಾಲ್ಚಿನ್ನಿ, ಲವಂಗ ಮತ್ತು ಒಣ ಶುಂಠಿಯನ್ನು ಬಳಕೆ ಮಾಡಿ.
ಗಿಡಮೂಲಿಕೆಗಳನ್ನು ಬಳಸಿ: ತುಳಸಿ, ಯಷ್ಟಿಮಧು, ಅಶ್ವಗಂಧ, ಮತ್ತು ಒಣ ಶುಂಠಿಯಂತಹ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಹಾಗೆಯೇ ಜೀರಿಗೆ, ಧನಿಯಾ, ಅರಿಶಿನ, ಕಪ್ಪು ಜೀರಿಗೆ, ಕರಿಮೆಣಸು, ದಾಲ್ಚಿನ್ನಿ, ಮತ್ತು ಲವಂಗಗಳಂತಹ ಮಸಾಲೆ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿ.
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ: ಕರುಳಿನ ಆರೋಗ್ಯವನ್ನು ಕಾಪಾಡುವ ಆಹಾರವನ್ನು ಸೇವನೆ ಮಾಡಿ, ಉತ್ತಮವಾಗಿ ಜೀರ್ಣವಾಗಬಲ್ಲ ಆಹಾರ ಸೇವಿಸಿ.