ಸ್ಮಾರ್ಟ್ಫೋನ್ಗೆ ಅದರ ಬ್ಯಾಟರಿಯೇ ಜೀವಾಳ. ಅತ್ಯುತ್ತಮ ಬ್ಯಾಟರಿ ಬಾಳಿಕೆ ಇದ್ದರೇ ಸ್ಮಾರ್ಟ್ಫೋನ್ ಹೆಚ್ಚು ಸಮಯ ಬಳಕೆ ಬರುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್ ಕಂಪನಿಗಳು ಅಧಿಕ ಬ್ಯಾಟರಿ ಲೈಫ್ ಸಾಮರ್ಥ್ಯದಲ್ಲಿ ಸ್ಮಾರ್ಟ್ಫೋನ್ಗಳು ಪರಿಚಯಿಸುತ್ತಿವೆ. ಈಗಂತು ಮಾರ್ಕೆಟ್ ನಲ್ಲಿ 4000mAh ಯಿಂದ ಹಿಡಿದು 7000mAh ವರೆಗಿನ ಸಾಮರ್ಥ್ಯದ ಬ್ಯಾಟರಿ ಫೋನುಗಳು ಚಾಲ್ತಿಯಲ್ಲಿವೆ. ಹಾಗೆಯೇ ಬ್ಯಾಟರಿ ವೇಗವಾಗ ಭರ್ತಿಯಾಗಲಿ ಅಂತಾ ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ನೀಡುತ್ತಿವೆ.
ಹತ್ಯೆಗೊಳಗಾಗಿದ್ದ ರೇಣುಕಾಸ್ವಾಮಿ ಪುತ್ರನ ನಾಮಕರಣ ; ಹೆಸರೇನು ಗೊತ್ತಾ..?
ಜನರು ಸಾಮಾನ್ಯವಾಗಿ ಕಡಿಮೆ ಬ್ಯಾಟರಿ ಇದ್ದಾಗ ಫೋನ್ ಅನ್ನು ಚಾರ್ಜ್ ಮಾಡಲು ಮುಂದಾಗುತ್ತಾರೆ. ಹಾಗಾದರೆ ಫೋನ್ ಅನ್ನು ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡಬೇಕು?. ಚಾರ್ಜಿಂಗ್ ವಿಷಯಕ್ಕೆ ಬಂದರೆ, ತಮ್ಮ ಫೋನ್ನಲ್ಲಿ ಬ್ಯಾಟರಿ ಸ್ವಲ್ಪ ಖಾಲಿಯಾದ ತಕ್ಷಣ ಅದನ್ನು ಚಾರ್ಜಿಂಗ್ಗೆ ಹಾಕುವುದನ್ನು ನಾವು ನಮ್ಮ ಸುತ್ತಲೂ ನೋಡುತ್ತೇವೆ. ಅಲ್ಲದೆ, ಫೋನ್ ಅನ್ನು ಚಾರ್ಜಿಂಗ್ ಮಾಡಿದ ಸ್ವಲ್ಪ ಸಮಯದ ನಂತರ ಮತ್ತೆ ಹೊರತೆಗೆಯುವವರೂ ಅನೇಕರಿದ್ದಾರೆ. ನಿಮಗೂ ಈ ಅಭ್ಯಾಸವಿದ್ದರೆ ನಿಮ್ಮ ಫೋನ್ ಬೇಗ ಕೆಟ್ಟು ಹೋಗಬಹುದು.
ಫೋನ್ ಅನ್ನು ಚಾರ್ಜಿಂಗ್ನಲ್ಲಿ ಇರಿಸಲು ಸರಿಯಾದ ಮಾರ್ಗವಿದೆ. ಮೊಬೈಲ್ ಫೋನ್ ಅನ್ನು ದಿನಕ್ಕೆ ಎರಡು ಬಾರಿ ಚಾರ್ಜ್ ಮಾಡಬೇಕು ಎಂದು ಟೆಕ್ ಪಂಡಿತರು ಹೇಳುತ್ತಾರೆ. ಆದ್ದರಿಂದ ಒಂದು ದಿನದಲ್ಲಿ ಫೋನ್ ಅನ್ನು ಹೆಚ್ಚಾಗಿ ಅಥವಾ ಆಗಾಗ್ಗೆ ಚಾರ್ಜ್ ಮಾಡುವುದು ನಿಮ್ಮ ಫೋನ್ನ ಬ್ಯಾಟರಿ ಅವಧಿಯ ಮೇಲೆ ಪರಿಣಾಮ ಬೀರುತ್ತದೆ.
ಫೋನಿನಲ್ಲಿ ಶೇ. 20 ಚಾರ್ಜ್ ಉಳಿದಿರುವಾಗ ಫೋನ್ ಚಾರ್ಜ್ ಮಾಡಬೇಕು ಮತ್ತು ಶೇ. 80 ಚಾರ್ಜ್ ಆದ ತಕ್ಷಣ ಹೊರತೆಗೆಯಬೇಕು. ಬ್ಯಾಟರಿಯನ್ನು ಸಂಪೂರ್ಣವಾಗಿ ಡಿಸ್ಚಾರ್ಜ್ ಮಾಡುವುದನ್ನು ತಪ್ಪಿಸಿ. ಬ್ಯಾಟರಿ ಮಟ್ಟವು ಶೇ. 80 ಇದ್ದಾಗ ಮಾತ್ರ ಫೋನ್ ಅನ್ನು ಚಾರ್ಜರ್ನಿಂದ ಅನ್ಪ್ಲಗ್ ಮಾಡಿ. ನೀವು 45-75 ನಿಯಮವನ್ನು ಸಹ ಅನುಸರಿಸಬಹುದು. ಅಂದರೆ, ಫೋನ್ನ ಬ್ಯಾಟರಿ ಶೇ. 45 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ, ನೀವು ಚಾರ್ಜ್ ಹಾಕಬಹುದು ಮತ್ತು ಅದು ಶೇ. 75 ರಷ್ಟು ತಲುಪಿದಾಗ ಚಾರ್ಜಿಂಗ್ ಅನ್ನು ತೆಗೆದುಹಾಕಬಹುದು. ಈ ವಿಧಾನವು ಫೋನ್ನ ಬ್ಯಾಟರಿಯನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಇತರೆ ಫೋನ್ನ ಚಾರ್ಜರ್ನೊಂದಿಗೆ ನಿಮ್ಮ ಫೋನ್ ಚಾರ್ಜ್ ಮಾಡುವಾಗ ತುಂಬಾ ನಿಧಾನವಾಗಿ ಚಾರ್ಜ್ ಆಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಏಕೆಂದರೆ ನೀವು ಬಳಸುತ್ತಿರುವ ಚಾರ್ಜರ್ ನಿಮ್ಮ ಫೋನ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಫೋನ್ನೊಂದಿಗೆ ಒದಗಿಸಲಾದ ಚಾರ್ಜರ್ನೊಂದಿಗೆ ಅದನ್ನು ಚಾರ್ಜ್ ಮಾಡಿ. ನಿಮ್ಮ ಫೋನ್ 20W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಭಾವಿಸೋಣ, ಆದರೆ, ನೀವು ಕನೆಕ್ಟ್ ಮಾಡಿರುವ ಚಾರ್ಜರ್ 120W ಅಥವಾ 65W ನದ್ದಾಗಿದ್ದರೆ ಫೋನ್ ಬಿಸಿಯಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.