ಬೆಂಗಳೂರು:- ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರಗಳೇನು ಎಂಬುವುದರ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.
ನಾಲ್ಕೈದು ದಿನದಿಂದ ಒಟ್ಟು 196 ಕಡೆ ಪ್ರವಾಹ ಸ್ಥಿತಿ ಆಗಿದೆ. 10 ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಆದರೆ ಸ್ವಲ್ಪ ಸಮಯದ ನಂತರ ನೀರು ಹೋಗಿದೆ ಎಂದರು. 171 ದೊಡ್ಡ ಮರಗಳು, 690 ಕೊಂಬೆಗಳು ಬಿದ್ದಿವೆ. 50 ಬಿಟ್ಟು ಉಳಿದ ಕಡೆ ಎಲ್ಲಾ ತೆರವು ಮಾಡಲಾಗಿದೆ ಎಂದು ಹೇಳಿದ್ದಾರೆ.
ದೊಡ್ಡ ಮರಗಳನ್ನ ಇವತ್ತು ಕಟ್ ಮಾಡಲಾಗುತ್ತಿದೆ. ಮೂರು ದಿನದಿಂದ 39 ತಂಡಗಳು ಕೆಲಸ ಮಾಡುತ್ತಿವೆ,. 63 ಕಡೆ ಎಇಇ, ಬಿಬಿಎಂಪಿಯ ನೇತೃತ್ವದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಮಾಹಿತಿ ಹೋಗುತ್ತಿದೆ. ಬೇರೆ ಬೇರೆ ಇಲಾಖೆಗಳ ಜೊತೆಗೂ ಸಂವಹನ ಆಗುತ್ತಿದೆ. ವಲಯಮಟ್ಟದಲ್ಲೂ ಕೂಡ ಸಭೆಗಳನ್ನ ನಡೆಸಲಾಗುತ್ತಿದೆ. ಸಮಸ್ಯೆ ಆಗುವ 74 ಕಡೆ ಶಾಶ್ವತ ಪರಿಹಾರ ಆಗಿಲ್ಲ. ತಾತ್ಕಾಲಿಕ ಪರಿಹಾರ ಮಾತ್ರ ಮಾಡಿದ್ದೇವೆ ಎಂದರು. ಪಂಪ್, ಜೆಸಿಬಿ ಇಟ್ಟು ಕೆಲಸ ಮಾಡುತ್ತಿದೆ. ವಿಶ್ವಬ್ಯಾಂಕ್ ಲೋನ್ನಲ್ಲೂ ಕೂಡ ಆ ಕೆಲಸಗಳನ್ನ ಸೇರಿಸಲಾಗಿದೆ. ಎಲ್ಲಿಲ್ಲಿ ಸಮಸ್ಯೆಯಿದೆ ನಮ್ಮ ಅಧಿಕಾರಿಗಳು ಚೆಕ್ ಮಾಡಿ ರಿಪೋರ್ಟ್ ಕೊಟ್ಟಿದ್ದಾರೆ.
ಮಳೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳು ಆಗಿವೆ. ಮಳೆ ಸಂಬಂಧ 30 ಲಕ್ಷ ರೂ. ಮೀಸಲು ಇಟ್ಟಿದ್ದೇವೆ. ಬ್ರ್ಯಾಂಡ್ ಬೆಂಗಳೂರಿನಡಿ ಕೂಡ 10 ಕೋಟಿ ರೂ. ಹಣ ಮೀಸಲಿಟ್ಟಿದ್ದೇವೆ. ಮಳೆಗಾಲದ ಸಿದ್ಧತೆಗಳಿಗೆ ಪ್ಲಾನ್ ಆಧರಿಸಿ ಫಂಡ್ ಇಟ್ಟಿದ್ದೇವೆ ಎಂದು ಹೇಳಿದ್ದಾರೆ
2023 ರಿಂದಲೇ ರಾಜಕಾಲುವೆ ಕೆಲಸ ಶುರು ಮಾಡಿದ್ದೇವೆ. 2025 ಜನವರಿಯೊಳಗೆ ಮುಗಿಸಲು ಪ್ಲಾನ್ ಆಗಿದೆ. ಬೇರೆ ಬೇರೆ ಇಲಾಖೆಗಳ ಕಾಮಗಾರಿಗಳು ಕೂಡ ನಡೆಯುತ್ತಿದೆ. ಮೇ 15 ರವರೆಗೆ ಡೆಡ್ ಲೈನ್ ಕೊಟ್ಟಿದ್ದೇವೆ. ಈಗ ಮೇ 20ರೊಳಗೆ ಅವರ ಕೆಲಸಗಳನ್ನ ಮುಗಿಸಬೇಕು ಎಂದಿದ್ದಾರೆ.
ಬೆಂಗಳೂರಲ್ಲಿ ಡೆಂಘೀ ಕೇಸ್ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಮೊದಲನೇ ಮಳೆಯಲ್ಲಿ ಸೊಳ್ಳೆಗಳ ಪ್ರಮಾಣ ಹೆಚ್ಚಾಗುತ್ತೆ. ಹೀಗಾಗಿ ಡೆಂಘೀ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದರು.