ಬೆಂಗಳೂರು: ಇವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಎಲ್ಲಾ ರೀತಿಯ ನಾಗರಿಕ ಸೌಲಭ್ಯ ಬೇಕು.ಆದರೆ ನೀಯತ್ತಾಗಿ ಆಸ್ತಿ ತೆರಿಗೆ ಪಾವತಿಸಿ ಎಂದ್ರೆ ಅದೇಕೆ ಮೈಗಳ್ಳತನನೋ ಗೊತ್ತಿಲ್ಲ.ಆದ್ರೆ ನೆನಪಿರ್ಲಿ,ಕಳೆದ ಬಾರಿಯಂತೆ ತೆರಿಗೆ ಪಾವತಿಸದೆ ಸಬೂಬ್ ಹೇಳಿಕೊಂಡು ಇರೊಕ್ಕೆ ಸಾಧ್ಯನೇ ಇಲ್ಲ. ಅದಕ್ಕೂ ಅಸ್ತ್ರವೊಂದನ್ನು ಪ್ರಯೋಗಿಸ್ಲಿಕ್ಕೆ ಬಿಬಿಎಂಪಿ ಸಿದ್ದತೆ ಮಾಡ್ಕೊಂಡಿದೆ.ಅಂದ್ಹಾಗೆ ಬಿಬಿಎಂಪಿಗೆ ತೆರಿಗೆ ಬಾಕಿ ಉಳಿಸಿಕೊಂಡಿರೋರು ಎಷ್ಟ್ ಜನ ಗೊತ್ತಾ..? ಬರೋಬ್ಬರಿ 6 ಲಕ್ಷ ಎಂದ್ರೆ ನಂಬ್ತಿರಾ.. ನಂಬ್ಲೇಬೇಕು..ಏಕಂದ್ರೆ ಇಂತದ್ದೊಂದು ಅಧೀಕೃತ ಮಾಹಿತಿ ಕೊಟ್ಟಿರೋದು ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್.
ಬೆಂಗಳೂರು ಅಭಿವೃದ್ದಿಯಾಗೋದೆ ಜನರು ಕಟ್ಟುವ ತೆರಿಗೆಯಿಂದ. ಆದ್ರೆ ತೆರಿಗೆದಾರರೇ ಸಮರ್ಪಕವಾಗಿ ತೆರಿಗೆ ಕಟ್ಟುತ್ತಿಲ್ಲ. ಇದು ಪಾಲಿಕೆಗೆ ತಲೆನೋವಾಗಿದೆ. ಪ್ರತಿ ವರ್ಷ ತೆರಿಗೆ ಕಟ್ಟಿ ಮಾದರಿಯಾಗಬೇಕಾದ ಪ್ರಮುಖ ವ್ಯಕ್ತಿಗಳೇ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುತ್ತಿಲ್ವಾಂತೆ. ಹೌದು.. ನಾಗರಿಕ ಸೌಲಭ್ಯ ಬಳಸಿಕೊಂಡಿಯೂ 6 ಲಕ್ಷ ಮಂದಿ ಬಿಬಿಎಂಪಿಗೆ ಆಸ್ತಿ ತೆರಿಗೆಯನ್ನೇ ಪಾವತಿಸಿಲ್ಲ ಎನ್ನೋ ಸ್ಪೋಟಕ ಮಾಹಿತಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಕಚೇರಿ ಯಿಂದಲೇ ಹೊರಬಿದ್ದಿದೆ.ಆದ್ರೆ ಕಳೆದ ಬಾರಿಯಂತೆ ಆಸ್ತಿ ತೆರಿಗೆ ಪಾವತಿಸದೆ ತಪ್ಪಿಸಿಕೊಳ್ಳೋ ಛಾನ್ಸೇ ಇಲ್ಲ ಎನ್ನೋದನ್ನು ಮೌದ್ಗಿಲ್ ಈಗಾಗಲೇ ಸಾರಿ ಹೇಳಿದ್ದಾರೆ.ಈ ಹಿನ್ನಲೆಯಲ್ಲಿ ಕ್ರಮಕ್ಕೆ ಮುಂದಾಗುವ ಮುನ್ನ ಕೊನೇ ಅವಕಾಶ ಎನ್ನುವಂತೆ ಎಸ್ ಎಂಎಸ್ ಮೂಲಕ ನೊಟೀಸ್ ಜಾರಿ ಮಾಡಲಾಗ್ತಿದೆ.
ರಾಮಮಂದಿರ ವಿಚಾರಕ್ಕೆ ಬಿಜೆಪಿ – ಕಾಂಗ್ರೆಸ್ ಮಧ್ಯ ಜಟಾಪಟಿ: ಸಿಎಂಗೆ ಆಹ್ವಾನವಿಲ್ಲದಿದ್ದಕ್ಕೆ ಆಕ್ರೋಶ!
ಮೌದ್ಗಿಲ್ ಅವ್ರು,ಕಂದಾಯ ವಿಭಾಗಕ್ಕೆ ವಿಶೇಷ ಆಯುಕ್ತರಾಗಿ ಬಂದಾಗ್ಲೇ ತೆರಿಗೆ ಬಾಕಿ ಉಳಿಸಿಕೊಂಡಿ ರೋರ ಎದೆಯಲ್ಲಿ ನಡುಕ ಹುಟ್ಟಿತ್ತು.ತೆರಿಗೆ ಪಾವತಿಸದವರ ಮೂಲ ಹುಡುಕೋದೇ ದೊಡ್ಡ ಸವಾಲಾಗಿತ್ತು.ಇದಕ್ಕಾಗಿ ಇಡೀ ಕಂದಾಯ ವಿಭಾಗವನ್ನೇ ದುಡಿಸಿಕೊಂಡ ಪರಿಣಾಮ ಅಂತಿಮವಾಗಿ ಸಿದ್ದವಾದ ಪಟ್ಟಿಯನ್ನು ಕಂಡಾಗ ಒಂದ್ ಕ್ಷಣ ಮೌದ್ಗಿಲ್ ಅವರೇ ತಬ್ಬಿಬ್ಬಾದ್ರಂತೆ.ಅಂದಿನಿಂದಲೇ ಎಲ್ಲಾ 6 ಲಕ್ಷ ಬಾಕಿದಾರರಿಗೆ ಅವರು ಪಾವತಿಸಬೇಕಿರುವ ಮೊತ್ತವನ್ನು ಆಧರಿಸಿ ಎಸ್ ಎಂಎಸ್ ನ್ನೇ ಎಚ್ಚರಿಕೆ ನೊಟೀಸ್ ಎನ್ನುವಂತೆ ರವಾನಿಸಲಾಗುತ್ತಿದೆ.ನೊಟೀಸ್ ನ ಪ್ರತಿಗಳು ಪ್ರಜಾ ಟಿವಿಗೆ ಲಭ್ಯವಾಗಿದೆ.
6 ಲಕ್ಷ ಜನರು ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೊತ್ತವೇ 500 ಕೋಟಿ ಎನ್ನಲಾಗಿದೆ.ಯಾವುದೇ ಮುನ್ಸೂಚನೆ ನೀಡದೆ ಇಷ್ಟೊಂದು ಮೊತ್ತ ಸಂಗ್ರಹಿಸಲು ಮುಂದಾದ್ರೆ ಅದಕ್ಕೆ ಕಾನೂನಾತ್ಕಕ ತೊಡಕು ಎದುರಾಗಬಹುದೆನ್ನುವ ಕಾರಣಕ್ಕೆ ಎಸ್ ಎಂಎಸ್ ಸಂದೇಶ ರವಾನಿಸಲಾಗುತ್ತಿದೆ.ಇದನ್ನು ನಿರ್ಲಕ್ಷ್ಯಿಸಿದ್ರೆ ಬಿಬಿಎಂಪಿ ಆಕ್ಟ್ 2020ರ ಅಡಿಯಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.ಆಸ್ತಿ ಜಪ್ತಿ,ವಾಹನ ಜಪ್ತಿ,ಹರಾಜಿನಂಥ ಕ್ರಮಗಳಿಗೂ ಮುಂದಾಗಬೇಕಾಗುತ್ತದೆ ಎನ್ನುವುದನ್ನು ಎಚ್ಚರಿಸಲಾಗಿದೆ.
ಎಲ್ಲಾ ನಿರೀಕ್ಷೆಯಂತಾದ್ರೆ ಬಿಬಿಎಂಪಿ ಬೊಕ್ಕಸಕ್ಕೆ ವಾರ್ಷಿಕ ಕನಿಷ್ಟ 2 ಸಾವಿರ ಕೋಟಿಯಷ್ಟಾದ್ರೂ ಆಸ್ತಿ ತೆರಿಗೆ ಸಂದಾಯವಾಗುತ್ತದೆನ್ನುವ ಅಂದಾಜು ಮನಿಷ್ ಮೌದ್ಗಿಲ್ ಅವರದ್ದು,ತಮ್ಮ ಕಾರ್ಯಾವಧಿಯಲ್ಲಿ ನಿರೀಕ್ಷೆ ಮೀರಿ ತೆರಿಗೆ ಸಂಗ್ರಹಿಸುವುದು ಅವರ ಗುರಿಯಾಗಿದೆ.ಹಾಗಾಗಿನೇ ಕಠಿಣ ಎನಿಸಿದ್ರೂ ಅನಿವಾರ್ಯ ಎನ್ನುವಂತೆ ಎಸ್ ಎಂಎಸ್ ಪ್ರಯೋಗ ಮಾಡಲಾಗ್ತಿದೆ.ಇದಕ್ಕೆ ಆಸ್ತಿ ತೆರಿಗೆ ಬಾಕಿದಾರರು ಹೇಗೆ ರಿಯಾಕ್ಟ್ ಮಾಡ್ತಾರೆನ್ನುವುದನ್ನು ಕಾದು ನೋಡಬೇಕಿದೆ.