18 ವರ್ಷದ ಬಾಲಕ ಡಿ.ಗುಕೇಶ್ ಇದೀಗ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಕಿರಿಯ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸಿದ್ದಾನೆ. ಗುಕೇಶ್ನ ಶಿಸ್ತು ಹಾಗೂ ಶ್ರದ್ಧೆಗಳ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆಯ ಮಾತುಗಳನ್ನಾಡುತ್ತಿದೆ.
ಮೇ 29, 2006ರಲ್ಲಿ ಚೆನ್ನೈನಲ್ಲಿ ಜನಿಸಿದ ಗುಕೇಶ್ ತಂದೆ ರಜಿನಿಕಾಂತ್, ಇಎನ್ಟಿ ಸರ್ಜನ್, ತಾಯಿ ಡಾ ಪದ್ಮಾ ಮೈಕ್ರೋಬಯಾಲಜಿಸ್ಟ್. ಸುಮಾರು 7 ವರ್ಷದ ಬಾಲಕನಿರುವಾಗಲೇ ಚೆಸ್ ಆಡಲು ಆರಂಬಿಸಿದ ಗುಕೇಶ್ ಇಂದು ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾಋಎ.
2015ರಲ್ಲಿ ಚೆಸ್ ಮಾಂತ್ರಿಕ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ನ್ನು ಗೆದ್ದುಕೊಳ್ಳುವ ಮೂಲಕ ಮುಂದೆ ವಿಶ್ವ ಚಾಂಪಿಯನ್ ಆಗಲಿದ್ದೇನೆ ನಾನು ಎಂಬ ನೇರ ಸಂದೇಶವನ್ನು ನೀಡಿದ್ದ. ಇದಾದ ಮೂರು ವರ್ಷಗಳ ಬಳಿಕ 2018ರಲ್ಲಿ ವರ್ಲ್ಡ್ ಯುತ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 5 ಗೋಲ್ಡ್ ಮೆಡಲ್ಗಳನ್ನು ತನ್ನದಾಗಿಸಿಕೊಂಡಿದ್ದ.
ಗುಕೇಶ್ ಬದುಕಿನಲ್ಲಿ ದೊಡ್ಡ ತಿರುವು ಸಿಕ್ಕಿದ್ದು 2023ರಲ್ಲಿ, ಆಗ ಆತನ ವಯಸ್ಸು ಜಸ್ಟ್ 17, ಇದೇ ವಯಸ್ಸಿನಲ್ಲಿ ಗುಕೇಶ್ 2750 Elo ದಾಟಿದ ಅತ್ಯಂತ ಕಿರಿಯ ಚೆಸ್ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಷ್ಟು ಮಾತ್ರವಲ್ಲ ಭಾರತದ ಚೆಸ್ ಮಾಂತ್ರಿಕ ವಿಶ್ವನಾಥ್ ಆನಂದರ ದಾಖಲೆಯನ್ನೇ ಪುಡಿ ಪುಡಿ ಮಾಡಿದರು. ಮೊನ್ನೆಯಷ್ಟೇ ವಿಶ್ವ ಚಾಂಪಿಯನ್ಶಿಪ್ನಲ್ಲಿ ಗೆಲುವು ದಾಖಲಿಸುವ ಮೂಲಕ ಎಲಾನ್ ಮಸ್ಕ್ರಿಂದಲೇ ಶ್ಲಾಘನೆ ಪಡೆದಿದ್ದಾರೆ
2024ರಲ್ಲಿ ಬಂದಿರುವ ವರದಿಯ ಪ್ರಕಾರ ಗುಕೇಶ್ ಬಳಿ ಇರುವ ಒಟ್ಟು ಆಸ್ತಿ 8.26 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಅತಿಹೆಚ್ಚು ಹಣ ಆತನಿಗೆ ಹರಿದು ಬಂದಿದ್ದ ಚೆಸ್ ಪಂದ್ಯಾವಳಿಯಲ್ಲಿ ಗೆಲ್ಲುವ ಮೂಲಕವೆ. ಬಳಿಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಬ್ರ್ಯಾಂಡ್ಗಳು ಕೂಡ ಇವನ ಸಂಪತ್ತಿಗೆ ಕೊಡುಗೆಗಳನ್ನು ಕೊಟ್ಟಿವೆ. ಈತ ಗೆದ್ದಾಗಲೆಲ್ಲಾ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡ ಆರ್ಥಿಕ ಸಹಾಯಕ್ಕೆ ಮುಂದಾಗಿವೆ. ಈ ಮೂಲಕ ಗುಕೇಶ್ 18ನೇ ವಯಸ್ಸಿನಲ್ಲೇ 8.26 ಕೋಟಿ ರೂಪಾಯಿಯ ಒಡೆಯನಾಗಿದ್ದಾನೆ.