ಬೆಂಗಳೂರು: ಮಕ್ಕಳ ಜೀವದ ಜೊತೆಗೆ ಶಾಲಾ ವಾಹನ ಚಾಲಕರು ಚೆಲ್ಲಾಟವಾಡುತ್ತಿದ್ದಾರೆ.. ಹೀಗೊಂದು ಪ್ರಶ್ನೆ ಹುಟ್ಟುಹಾಕಿದೆ ಸಂಚಾರಿ ಪೊಲೀಸರು ನೀಡಿರುವ ಡೇಟಾ.. ಹೌದು, ಬೆಂಗಳೂರಿನಲ್ಲಿ ಶಾಲಾ ವಾಹನ ಚಾಲಕರ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಿನೇ ದಿನೇ ಜಾಸ್ತಿಯೇ ಆಗ್ತಿದೆ. ಮಕ್ಕಳನ್ನು ಸುರಕ್ಷತೆಯಿಂದ ಶಾಲೆಗಳಿಗೆ ಕರೆದೊಯ್ಯಬೇಕಾಗಿರುವ ಚಾಲಕರು ತಮ್ಮ ನಿರ್ಲಕ್ಷ್ಯದಿಂದಾಗಿ ಮಕ್ಕಳ ಜೀವದ ಜೊತೆಗೆ ಆಟವಾಡುತ್ತಿದ್ದಾರೆ.
Renukaswamy case: ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ʼಗೆ ಸರ್ಜರಿ ಫಿಕ್ಸ್!
ಸಂಚಾರಿ ಪೊಲೀಸರು ಎಷ್ಟೇ ಕೇಸ್ ಹಾಕಿದ್ರೂ ಕೂಡ ಮತ್ತೆ ಮತ್ತೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬೀಳ್ತಿದ್ದಾರೆ. ಡಿಎಲ್ ಸಸ್ಪೆಂಡ್ ವಾರ್ನಿಂಗ್ ಗೂ ಸಹ ಚಾಲಕರು ಡೋಂಟ್ ಕೇರ್ ಎನ್ನದೇ ಮಕ್ಕಳಿದ್ದರು ಸಹ ಪಾನಮತ್ತರಾಗಿ ಡ್ರೈವ್ ಮಾಡುತ್ತಿದ್ದಾರೆ. ಕೇವಲ ಹತ್ತು ತಿಂಗಳ ಅವಧಿಯಲ್ಲಿ ಬರೋಬ್ಬರಿ 118 ಚಾಲಕರು ಕುಡಿದು ಶಾಲಾ ವಾಹನ ಚಲಾಯಿಸಿ ಸಂಚಾರಿ ಪೊಲೀಸರಿಗೆ ಸಿಕ್ಕಿಬಿದಿದ್ದಾರೆ.
ಜನವರಿ ತಿಂಗಳಿನಲ್ಲಿ 16, ಫೆಬ್ರವರಿಯಲ್ಲಿ 7, ಜುಲೈನಲ್ಲಿ 23, ಆಗಸ್ಟ್ 26, ಸೆಪ್ಟೆಂಬರ್ 22, ನವೆಂಬರ್ ನಲ್ಲಿ 24 ಶಾಲಾ ವಾಹನ ಚಾಲಕರ ವಿರುದ್ದ ಡಿಡಿ ಕೇಸ್ ದಾಖಲಿಸಿಲಾಗಿದ್ದು, ಕುಡಿದು ವಾಹನ ಚಲಾಯಿಸುತ್ತಿರುವ 118 ಶಾಲಾ ವಾಹನ ಚಾಲಕರ ಡಿಎಲ್ ಕೂಡ ಸಸ್ಪೆಂಡ್ ಮಾಡಲಾಗಿದೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೂ ನೋಟಿಸ್ ನೀಡಲಾಗುತ್ತಿದೆ. ಆದರೂ ಸಹ ವಿಶೇಷ ಕಾರ್ಯಾಚರಣೆ ನಡೆಸಿದಾಗಲೆಲ್ಲ ಕುಡುಕ ಚಾಲಕರು ಪೊಲೀಸರ ಕೈಗೆ ಸಿಕ್ಕಿಬೀಳ್ತಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.