ಜೀರಿಗೆಯು ಸಾಮಾನ್ಯ ಭಾರತೀಯ ಮಸಾಲೆಯಾಗಿದ್ದು, ಇದನ್ನು ಭಕ್ಷ್ಯಗಳ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಭಾರತೀಯ ಅಡುಗೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದನ್ನು ಪ್ರಬಲವಾದ ಆರೋಗ್ಯ ಪ್ರಯೋಜನಗಳಿಗಾಗಿ ಹಲವಾರು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಆದರೆ ಹಲವು ವರ್ಷಗಳಿಂದ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಜೀರಿಗೆಯಲಿ ವಿಟಮಿನ್ ಬಿ, ಸಿ, ಇ, ಕೆ ಸೇರಿದಂತೆ ಸತು, ತಾಮ್ರ, ಕಬ್ಬಿಣದಂತಹ ಹಲವು ಪೋಷಕಾಂಶಗಳು ಅಡಕವಾಗಿದ್ದು, ಇದರನ್ನು ಆರೋಗ್ಯದ ಗಣಿ ಎಂದು ಪರಿಗಣಿಸಲಾಗಿದೆ.
ರಾತ್ರಿ ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಜೀರಿಗೆ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರಉಳಿಯಬಹುದು.
ಜೀರಿಗೆಯಲ್ಲಿ ಕ್ಯೂಮೀನಮ್ ಸೀಮಿನಮ್ ಎಂಬ ಅಂಶವಿದ್ದು ಖಾಲಿ ಹೊಟ್ಟೆಯಲ್ಲಿ ನಿತ್ಯ ಈ ನೀರನ್ನು ಕುಡಿಯುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಹಾಗೂ ಆರೋಗ್ಯಕರವಾಗಿ ತೂಕ ಇಳಿಸಲು ಸಹಾಯಕವಾಗಿದೆ
ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ವರದಾನವಿದ್ದಂತೆ.
ಕೆಲವರಿಗೆ ವಾತಾವರಣ ಬದಲಾವಣೆ, ನೀರಿನ ಬದಲಾವಣೆಯಾದರೂ ಕೂಡಲೇ ಶೀತವಾಗುತ್ತದೆ. ಅಂತಹವರಿಗೆ ನಿತ್ಯ ಬೆಳಿಗ್ಗೆ ಜೀರಿಗೆ ನೀರು ಕುಡಿಯುವುದು ಪ್ರಯೋಜನಕಾರಿ ಆಗಿದೆ.