ನಿಮ್ಮನ್ನು ತಾಜಾ ಆಗಿಡಲು ಮತ್ತು ದಿನದ ಕೆಲಸಕ್ಕೆ ಸಿದ್ಧವಾಗಲು ನೆರವಾಗುವ ಬೆಳಗಿನ ನಿತ್ಯಕರ್ಮವೆಂದರೆ, ಅದು ಸ್ನಾನ. ಸ್ನಾನ ವೈಯಕ್ತಿಕ ನೈರ್ಮಲ್ಯಕ್ಕೆ ಅಗತ್ಯವಾಗಿದ್ದು, ಇದನ್ನು ಭಾರತವೂ ಸೇರಿ, ವಿಶ್ವಾದ್ಯಂತ ಪ್ರತಿದಿನ ಮಾಡುತ್ತಾರೆ. ಅಧ್ಯಯನಗಳ ಪ್ರಕಾರ ಸ್ನಾನ ಅತ್ಯುತ್ತಮ ದೈಹಿಕ ಸ್ವಚ್ಛತೆ ನೀಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಧ್ಯಯನದ ಪ್ರಕಾರ,ಅನೇಕ ಅಧ್ಯಯನಗಳು ಬಿಸಿನೀರಿನ ಸ್ನಾನ ನಿಮ್ಮ ಶರೀರದ ತೂಕ ಕಡಿಮೆ ಮಾಡಲು ನೆರವಾಗುವುದಷ್ಟೇ ಅಲ್ಲದೇ, ಬಾಡಿ ಮಾಸ್ ಇಂಡೆಕ್ಸ್ ಮತ್ತು ಸೊಂಟದ ಸುತ್ತಳತೆಯನ್ನು ಉತ್ತಮವಾಗಿ ನಿಯಂತ್ರಿಸುತ್ತದೆ.
ಧಾರವಾಡ: ಸಿಎಂ ಸಿದ್ದುಗೆ ಟೆನ್ಶನ್.. ಟೆನ್ಶನ್.. ಯಾವಾಗ ಬೇಕಾದರೂ ಹೊರಬರಹುದು ತೀರ್ಪು
ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿದ್ದರೂ, ಅನೇಕ ಜನ ಚಳಿಗಾಲದಲ್ಲಿ ಸ್ನಾನ ಮಾಡಲು ಬಯಸುವುದಿಲ್ಲ. ಈ ಅಭ್ಯಾಸ ನೈರ್ಮಲ್ಯರಹಿತವಾಗಿದ್ದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯೂ ಆಗಿದೆ. ಚಳಿಗಾಲದಲ್ಲೂ ಸ್ನಾನ ಮಾಡುವ ಅಭ್ಯಾಸ ಅನುಸರಿಸುವುದು ಉತ್ತಮ.
ಚಳಿಗಾಲದಲ್ಲಿ ಎಷ್ಟು ಸಮಯ ಸ್ನಾನ ಮಾಡಬೇಕು ಎಂದು ವೈದ್ಯರೊಬ್ಬರು ಸಲಹೆ ನೀಡಿದ್ದಾರೆ. ಇದರೊಂದಿಗೆ ನೀರು ಎಷ್ಟು ಬಿಸಿಯಾಗಿರಬೇಕು, ದೇಹದ ಯಾವ ಭಾಗಕ್ಕೆ ಬಿಸಿನೀರನ್ನು ಮೊದಲು ಹಚ್ಚಬೇಕು, ಯಾವ ಸಮಯದಲ್ಲಿ ಸ್ನಾನ ಮಾಡಬೇಕು, ಚಳಿಯಲ್ಲೂ ದಿನನಿತ್ಯ ಸ್ನಾನ ಮಾಡುವುದು ಸರಿ ಮತ್ತು ಅಗತ್ಯವೇ ಎಂಬ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಿದ್ದಾರೆ.
ನಿಮ್ಮನ್ನು ತಾಜಾ ಆಗಿಡಲು ಮತ್ತು ದಿನದ ಕೆಲಸಕ್ಕೆ ಸಿದ್ಧವಾಗಲು ನೆರವಾಗುವ ಬೆಳಗಿನ ನಿತ್ಯಕರ್ಮವೆಂದರೆ, ಅದು ಸ್ನಾನ. ಸ್ನಾನ ವೈಯಕ್ತಿಕ ನೈರ್ಮಲ್ಯಕ್ಕೆ ಅಗತ್ಯವಾಗಿದ್ದು, ಇದನ್ನು ಭಾರತವೂ ಸೇರಿ, ವಿಶ್ವಾದ್ಯಂತ ಪ್ರತಿದಿನ ಮಾಡುತ್ತಾರೆ. ಅಧ್ಯಯನಗಳ ಪ್ರಕಾರ ಸ್ನಾನ ಅತ್ಯುತ್ತಮ ದೈಹಿಕ ಸ್ವಚ್ಛತೆ ನೀಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿದ್ದರೂ, ಅನೇಕ ಜನ ಚಳಿಗಾಲದಲ್ಲಿ ಸ್ನಾನ ಮಾಡಲು ಬಯಸುವುದಿಲ್ಲ. ಈ ಅಭ್ಯಾಸ ನೈರ್ಮಲ್ಯರಹಿತವಾಗಿದ್ದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯೂ ಆಗಿದೆ. ಚಳಿಗಾಲದಲ್ಲೂ ಸ್ನಾನ ಮಾಡುವ ಅಭ್ಯಾಸ ಅನುಸರಿಸುವುದು ಉತ್ತಮ. ಚಳಿಗಾಲದಲ್ಲಿ ಸ್ನಾನ ಮಾಡಲು ಕೆಲವು ಮುಖ್ಯವಾದ ಸ್ನಾನದ ಕುರಿತಾದ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಹವಾಮಾನವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಪ್ರತಿದಿನ ಸ್ನಾನ ಮಾಡಬೇಕು ಎಂದು ಡಾ.ಮನೀಷ್ ಇಟೋಳಿಕರ್ ಹೇಳುತ್ತಾರೆ. ಇದು ಬೇಸಿಗೆಯಲ್ಲಿ ತ್ವಚೆಯನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ, ಕೊಳೆ ಮತ್ತು ಬೆವರು ವಾಸನೆಯನ್ನು ತೆಗೆದುಹಾಕುತ್ತದೆ. ಇದರೊಂದಿಗೆ ತ್ವಚೆಯು ತೇವವಾಗಿರಲು ಚಳಿಗಾಲದಲ್ಲಿ ಸ್ನಾನ ಮಾಡುವುದು ಅಗತ್ಯ. ಆದಾಗ್ಯೂ, ನೀವು ಯಾವಾಗಲೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಕೆಲವರು ತುಂಬಾ ಬಿಸಿ ನೀರನ್ನು ಬಳಸುತ್ತಾರೆ, ಇದು ಸರಿಯಲ್ಲ ಎನ್ನಲಾಗಿದೆ.
ಕೆಲವರು ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ಈ ಕಾರಣದಿಂದಾಗಿ, ಚರ್ಮವು ಇನ್ನಷ್ಟು ಒಣಗುತ್ತದೆ ಎನ್ನಲಾಗಿದೆ. ಅಂತಹ ಸಂದರ್ಭದಲ್ಲಿ, ನೀವು ಯಾವಾಗಲೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಜೊತೆಗೆ ಇದು ಚರ್ಮ ಮತ್ತು ಕೂದಲಿಗೆ ಹಾನಿ ಮಾಡುವುದಿಲ್ಲ
ಕೆಲವರು ಸ್ನಾನ ಮಾಡುವಾಗ ನಡುಗುವುದನ್ನು ತಪ್ಪಿಸಲು ಬಿಸಿನೀರಿನ ತೊಟ್ಟಿಗಳಲ್ಲಿ ಕುಳಿತುಕೊಳ್ಳುತ್ತಾರೆ. ಹೀಗೆ ಮಾಡುವುದು ಸರಿಯಲ್ಲ. ಶೀತದ ಅರ್ಥಾತ್ ಚಳಿಗಾಲದ ದಿನಗಳಲ್ಲಿ, ಪ್ರತಿದಿನ ಸ್ನಾನ ಮಾಡಿ, ಆದರೆ ಕೇವಲ 10 ನಿಮಿಷಗಳು ಅಥವಾ ಕಡಿಮೆ ಸಮಯದಲ್ಲಿ ಸ್ನಾನವನ್ನು ಮುಗಿಸಬೇಕು ಎಂದಿದ್ದಾರೆ.
10 ನಿಮಿಷದ ಒಳಗೆ ಇದು ಅತ್ಯುತ್ತಮ ಮಾರ್ಗವಾಗಿದೆ. ನೀವು ಪ್ರತಿದಿನ ಸ್ನಾನ ಮಾಡುವಾಗ, ನಿಮ್ಮ ದೇಹವನ್ನು ಸ್ಕ್ರಬ್ ಮಾಡಲು ನೀವು ಹೆಚ್ಚು ಸಮಯ ಕಾಯಬೇಕಾಗಿಲ್ಲ. ನಿಮ್ಮ ದೇಹವು ಸ್ವಚ್ಛವಾಗಿರುತ್ತದೆ. ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ತ್ವಚೆ ಒಣಗಬಹುದು ಎನ್ನಲಾಗಿದೆ.
ನೀವು ಚಳಿಗಾಲದಲ್ಲಿ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವಾಗ, ನಿಮ್ಮ ತಲೆ ಮತ್ತು ಎದೆಯ ಮೇಲೆ ನೇರವಾಗಿ ನೀರನ್ನು ಸುರಿಯಬೇಡಿ. ಮೊದಲನೆಯದಾಗಿ, ಕಾಲುಗಳ ಮೇಲೆ ನೀರನ್ನು ಸುರಿಯಬೇಕು. ಪಾದಗಳಿಗೆ ನೀರು ಹಾಕುವುದರಿಂದ ದೇಹದ ಉಷ್ಣತೆಯಲ್ಲಿ ಹಠಾತ್ ಬದಲಾವಣೆ ಉಂಟಾಗುವುದಿಲ್ಲ. ತಾಪಮಾನದಲ್ಲಿನ ಹಠಾತ್ ಬದಲಾವಣೆಯು ಅಪಾಯಕಾರಿಯಾಗಿದೆ. ಮೊದಲು ಕಾಲುಗಳ ಮೇಲೆ ನೀರನ್ನು ಸುರಿಯುವುದರ ಮೂಲಕ ಸ್ನಾನವನ್ನು ಪ್ರಾರಂಭಿಸಿ ಮತ್ತು ನಂತರ ದೇಹದ ಮೇಲ್ಭಾಗದಲ್ಲಿ ನೀರು ಹಾಕಿಕೊಳ್ಳಿ.
ಚಳಿಗಾಲದಲ್ಲಿ ನೀವು ಸ್ನಾನ ಮಾಡುವುದನ್ನು ತಪ್ಪಿಸುತ್ತೀರಿ ಆದರೆ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಕಡಿಮೆಯಂದರು 5 ನಿಮಿಷಗಳ ಕಾಲ ಸ್ನಾನ ಮಾಡಬೇಕು. ಯಾವುದೇ ಸಮಯದಲ್ಲಿ, ವಿಶೇಷವಾಗಿ ಸಂಜೆ ಅಥವಾ ರಾತ್ರಿಯಲ್ಲಿ ಸ್ನಾನ ಮಾಡುವುದನ್ನು ತಪ್ಪಿಸ ಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ಶೀತ, ಕೆಮ್ಮು, ನ್ಯುಮೋನಿಯಾ ಕೂಡ ಬರಬಹುದು. ಇದರೊಂದಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12-1 ರವರೆಗೆ ಸ್ನಾನ ಮಾಡಿ. ಈ ಸಮಯದಲ್ಲೂ ಸೂರ್ಯನ ಬೆಳಕು ಇರುತ್ತದೆ. ದಿನವು ಸ್ವಲ್ಪ ಬೆಚ್ಚಗಿರುತ್ತದೆ