ಬ್ರಿಟನ್ ಜೈಲಿನಲ್ಲಿ ಮಹಿಳಾ ಕೈದಿಗಳನ್ನು ನಡೆಸಿಕೊಳ್ಳೋ ಪರಿ ನೋಡಿದ್ರೆ ನಿಜಕ್ಕೂ ನೀವು ಬೆಚ್ಚಿ ಬೀಳ್ತೀರಾ. 6 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಕೈದಿಯೊಬ್ಬರು ಜೈಲಿನ ಕರಾಳ ಸತ್ಯ ಬಾಯ್ಬಿಟ್ಟಿದ್ದಾರೆ.
ತಡ ಮಾಡ್ಬೇಡಿ, ಬೇಗ-ಬೇಗ ಮಕ್ಕಳು ಮಾಡ್ಕೊಳ್ಳಿ – ರಾಜ್ಯದ ಜನರಿಗೆ CM ಸ್ಟಾಲಿನ್ ಮನವಿ!
6 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಕೈದಿ, ಜೈಲಿನಲ್ಲಿ ಜೈಲರ್ಗಳಿಂದ ಮಹಿಳಾ ಕೈದಿಗಳ ಮೇಲೆ ಅತ್ಯಾಚಾರ ನಡೆಯುತ್ತೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಜೈಲುಗಳು ಅಪರಾಧಿಗಳ ಸುಧಾರಣೆಗಾಗಿ ಇರಬೇಕಿತ್ತು, ಆದರೆ ಮಹಿಳಾ ಕೈದಿಗಳಿಗೆ ಶಾಪವಾಗಿ ಪರಿಣಮಿಸಿದೆ. ಅವರನ್ನು ಜೈಲರ್ಗಳು ಜೀವಂತ ಶವಗಳನ್ನಾಗಿ ಮಾಡುತ್ತಿದ್ದಾರೆ ಎಂದು ಕೈದಿ ಫ್ರಾನ್ಸೆಸ್ಕಾ ಅವರು ಹೇಳಿದ್ದಾರೆ.
ಮಾದಕ ವ್ಯಸನಿ ಮಹಿಳೆಯರು ಮಾದಕ ದ್ರವ್ಯಗಳಿಗಾಗಿ ಜೈಲರ್ಗಳಲ್ಲಿ ಬೇಡಿಕೊಳ್ಳುತ್ತಿದ್ದರು. ಜೈಲರ್ಗಳು ಇದರ ಲಾಭ ಪಡೆದರು. ಮಹಿಳಾ ಕೈದಿಗಳು ಮತ್ತು ಜೈಲರ್ಗಳ ನಡುವೆ ಅವರಿಗೆ ಮಾದಕ ದ್ರವ್ಯಗಳನ್ನು ನೀಡಲಾಗುವುದು ಎಂದು ಒಪ್ಪಂದವಿತ್ತು ಅದಕ್ಕೆ ಬದಲಾಗಿ ಅವರ ಜತೆ ಮಲಗಬೇಕಿತ್ತು.
ಮಾದಕದ್ರವ್ಯ ಕೊಡುವುದಾಗಿ ಜೈಲರ್ಗಳು ಒಪ್ಪಿಕೊಂಡಿದ್ದಕ್ಕೆ ಇವರೂ ಕೂಡ ಅವರೊಂದಿಗೆ ಇರಲು ಒಪ್ಪಿಕೊಂಡಿದ್ದರು. ಆ ಜೈಲಿನಲ್ಲಿ ಅತ್ಯಾಚಾರಕ್ಕೊಳಗಾಗದ ಯಾವುದೇ ಮಹಿಳೆ ಇರಲಿಲ್ಲ ಎಂದು ಫ್ರಾನ್ಸೆಸ್ಕಾ ಉಲ್ಲೇಖಿಸಿದ್ದಾರೆ.