2023ರಲ್ಲಿ ಸಾಕಷ್ಟು ಕಾರುಗಳು ಭಾರತದ ರಸ್ತೆಯಲ್ಲಿ ಹವಾ ಎಬ್ಬಿಸಿವೆ. ಈ ಹೊಸ ಕಾರುಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಅಂತಹ ಕೆಲವು ಕಾರುಗಳ ಬಗೆಗಿನ ಮಾಹಿತಿ ಇಲ್ಲಿದೆ.ಸದ್ಯ ಉತ್ತಮ ಬೇಡಿಕೆಯಿದ್ದರೂ ಬೆಲೆ ತುಸು ದುಬಾರಿಯಾಗಿದ್ದು, ದುಬಾರಿ ಬೆಲೆ ಹಿನ್ನಲೆ ಹಲವು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಎನ್ಜಿ ಮಾದರಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸಿಎನ್ ಜಿ ಕಾರುಗಳು ಸದ್ಯ ಎಂಟ್ರಿ ಲೆವಲ್ ಕಾರುಗಳಲ್ಲಿ ಮಾತ್ರವಲ್ಲದೆ ಮಧ್ಯಮ ಗಾತ್ರದ ಎಸ್ ಯುವಿ ಮತ್ತು ಎಂಪಿವಿ ಕಾರುಗಳಲ್ಲೂ ಸಹ ಮಾರಾಟಗೊಳ್ಳುತ್ತಿದ್ದು, ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಇಂಧನ ದಕ್ಷತೆ ಹೊಂದಿರುವ ಸಿಎನ್ಜಿ ಮಾದರಿಗಳ ಮಾಹಿತಿ ಇಲ್ಲಿದೆ.
ಹ್ಯುಂಡೈ ಎಕ್ಸ್ಟರ್
ಮೈಕ್ರೊ ಎಸ್ ಯುವಿ ವೈಶಿಷ್ಟ್ಯತೆಯ ಹ್ಯುಂಡೈ ಎಕ್ಸ್ ಟರ್ ಕಾರು ಮಾದರಿಯು ಸಿಎನ್ಜಿ ಆಯ್ಕೆ ಹೊಂದಿರುವ ಪ್ರಮುಖ ಕಾರು ಮಾದರಿಗಳಲ್ಲಿ ಒಂದಾಗಿದ್ದು, ಎಕ್ಸ್ ಟರ್ ಸಿಎನ್ ಜಿ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಹೊಂದಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ 27 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 8.34 ಲಕ್ಷದಿಂದ ರೂ. 9.06 ಲಕ್ಷ ಬೆಲೆ ಹೊಂದಿದೆ.
ಟಾಟಾ ಪಂಚ್
ಹೊಸ ಪಂಚ್ ಸಿಎನ್ಜಿ ಮಾದರಿಯು ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್ ಶೋರೂಂ ಪ್ರಕಾರ ಇದು ರೂ. 7.10 ಲಕ್ಷದಿಂದ ರೂ. 9.68 ಲಕ್ಷ ಬೆಲೆ ಹೊಂದಿದೆ. ಪಂಚ್ ಸಿಎನ್ಜಿ ಮಾದರಿಯು 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ವಿಶೇಷ ತಂತ್ರಜ್ಞಾನ ಹೊಂದಿರುವ ಐಸಿಎನ್ಜಿ ಕಿಟ್ ಜೋಡಣೆ ಹೊಂದಿದ್ದು, ಇದು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ಜಿಗೆ ಗರಿಷ್ಠ 26 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.
ಟೊಯೊಟಾ ರೂಮಿಯಾನ್
ಟೊಯೊಟಾ ರೂಮಿಯಾನ್ ಎಂಪಿವಿ ಕಾರು ಮಾರುತಿ ಎರ್ಟಿಗಾ ಕಾರಿನ ರೀಬ್ಯಾಡ್ಜ್ ಆವೃತ್ತಿಯಾಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆ ಹೊಂದಿದ್ದು, ಪ್ರತಿ ಕೆಜಿ ಸಿಎನ್ ಜಿಗೆ ಇದು ಗರಿಷ್ಠ 26.11 ಕಿ.ಮೀ ಮೈಲೇಜ್ ನೀಡುತ್ತದೆ. ರೂಮಿಯಾನ್ ಸಿಎನ್ ಜಿ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 11.24 ಲಕ್ಷ ಬೆಲೆ ಹೊಂದಿದ್ದು, ಎರ್ಟಿಗಾದಲ್ಲಿರುವಂತೆ ಹಲವಾರು ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ.